ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ | ವಿಗಡ ಮುನಿಯ ಮಾತಾ ಲೆಕ್ಕಿಸಿ ಮದುವೆಯ ಮಾಡಿಕೊಡುವನಂತೆ 1 ತಲೆಯೆಲ್ಲಾಜಡೆಯಂತೆ | ಅದರೋಳಗ ಜಲವಂತೆ | ತಿಲಕ ಪಣೆಗೆ ಬಾಲಚಂದ್ರನಂತೆ | ಹೊಳೆವ ಕಿಡಿಗಣ್ಣಂತೆ | ನಂಜುಗೊರಳನಂತೆ | ಸಲೆರುಂಡ ಮಾಲೆಯಾ | ಸರವ ಹಾಕಿಹನಂತೆ | 2 ಉರಗಾಭೂಷಣನಂತೆ | ಭಸ್ಮಲೇಪನನಂತೆ | ಕರಿಯ ಚರ್ಮಾರಂಬರದುಡಿಗೆಯಂತೆ | ನಿರುತ ಡಮರು ಬಾರಿಸುವ ಜೋಗಿಯಂತೆ 3 ಅಡವಿ ಗಿರಿಗಳಲಿ ಇಪ್ಪನಂತೆ | ಒಡನೆ ಪುಲಿದೊಗಲದ ಹಾಸಿಗೆ ಇಹುದಂತೆ | ನುಡಿಗೊಮ್ಮೆ ರಾಮ ರಾಮಾಯಂಬ ಸ್ಮರಣೆಯಂತೆ 4 ಆರೊ ಇಲ್ಲದ ಪರದೇಶಿಯಂತೆ | ಭವ |ತಾರಕ ಶಿವನೆಂದು ಮೊರೆಯ ಹೊಗಬೇಕಂತೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ಬಾಲಚಂದ್ರನ ರೂಪಾ ಭಯನಿವಾರಣ ನೋಡೋ ಬಾಲೆಯರೆಲ್ಲರು ಬಂದು ಕಾದಿರುವಾ ಲೊಲಾನವನ್ನು ಕಂಡು ಹೇಳಲು ನಾ ಬಂದೆ ಆಲಯಕ್ಕೆ ನೀ ಬಾ ಹಸೆಗೇಳೋ ಸೋಬಾನೆ 1 ಪನ್ನಂಗಶಯನ ಬಾರೊ ಚನ್ನಕೇಶವನಲ್ಲ ದಿನ್ನು ಬೇಕಾದ ಹೆಸರನ್ನು ಪಡೆದಿರುವೆ ಕನ್ನೆ ಸೀತೆಗೆ ಕೊಟ್ಟ ಹೊನ್ನವುಂಗರ ಕೊಡುವೆ ಬಿನ್ನಾಣದಿಂದ ಹಸೆಗೇಳೋ ಸೋಬಾನೆ 2 ಸುದತಿಯರೈವರು ಕದಳಿಹುವ್ವಿನ ಪೀಠ ಹದಮಾಡಿ ಕುಂತಿರುವರದೆ ಹೇಳಬಂದೆ ಮದನ ಜನಕ ಹಸೆಗೊದಗಿ ಅಲ್ಲಿನ ದಿವ್ಯ ಚದುರತನವನೋಡೊ ಹಸೆಗೇಳೋ ಸೋಬಾನೆ 3 ಋಷಿಗಳೆಲ್ಲರು ಜ್ಞಾನದೋಯ ಹಾಸನದೊಳೂ ಬಿಸಜಾಕ್ಷಿವರದನೆ ಗುರುವು ತುಲಸಿರಾಮಾ ಪಶುಪತಿಯಾದೆಯಾ ಹಸೆಗೇಳೋ ಸೋಬಾನೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀ ಗಿರೀಶಾ ನಮೋ ಮಹಾದೇವಾ ನಾಗ ಚರ್ಮಾಂಬರ ಸದಾಶಿವ ನಾಗ ಭೂಷಣ ದೇವನೆ ಪ ನೀಲ ಲೋಹಿತ ನಿರುಪಮಚರಿತಾ | ಬಾಲಚಂದ್ರನ ವೆತಾಳಿಲಿಟ್ಟಿ ಹಿಮಾಲಯತ್ಮಜಾ ಲಾಲನಾ ಭಾಲಲೋಚನ ಭಕ್ತರ ಪ್ರೀಯಾ | ನೀಲ ಗ್ರೀವಕ | ಪಾಲಿಮೂಲೋಕ ಪಾಲನಾ 1 ಗಮನ | ಭಂಗ ಮಾಡಿದಾ | ತುಂಗಮುನಿ ಮನೋ ಸಂಗನೇ | ಮಂಗಳಾತ್ಮಕ ಮಹಿಮ ಅಪಾರಾ | ಹಿಂಗ ದಂತರಂಗಲ್ಯಾಡುತಾ ಸಂಗರಹಿತ ಸಿತಾಂಗನೇ 2 ಕರುಣಾಸಿಂಧು ಕೈಲಾಸ ವಾಸೀ | ಧರಣೀಯೊಳಗ ಬೀರುವೇ || ಗುರು ಮಹಿಪತಿ - ಸುತ ಸಹಕಾರೀ | ಹರಹರಾಯನೇ ಹಾರಿಸಿ ಕಲುಷವ| ಪರಗತಿಯನೀ ತೋರುವೇ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
11. ವೆಂಕಟರಮಣನ ಸ್ತುತಿ47ಹಾರ ಕೇಯೂರ ಹೊನ್ನುಂಗುರದ ಬೆರಳುಹಾರದ ನಡುವೆ ಹಾಕಿದುವೇಳು ಪದಕ ||ತೋರ ಮುತ್ತಿನ ಕಂಠಮಾಲೆ ಮಾಣಿಕ ಶೋನೇರಿ ಗಿರಿವಾಸ ವೆಂಕಟ ಬಂದ ಮನೆಗೆ 2ಬಿಗಿದು ಸುತ್ತಿದನೀಲಬಿಡುಮುತ್ತಿನ ಒಂಟಿಮುಗುಳು ಬಿರಿದಂದದ ನಗೆ ದಂತಪಂಕ್ತಿ ||ಝಗಿಪ ಪೀತಾಂಬರ ಉಡೆಯ ಕಠಾರಿ ಪ-ನ್ನಗಗಿರಿವಾಸ ವೆಂಕಟ ಬಂದ ಮನೆಗೆ 3ಬಾಲಚಂದ್ರನ ಪೋಲ್ವಕಪೋಲಕುಂಡಲವುನೀಲಮಾಣಿಕ್ಯದಾಭರಣವನಿಟ್ಟು ||ಕಾಲಪೆಂಡೆಯವು ರತುನದ ಹಾವುಗೆಯುಮೇಲುಗಿರಿವಾಸ ವೆಂಕಟ ಬಂದ ಮನೆಗೆ 4ಕರಯುಗಲದಲಿ-ಶಂಖ-ಚಕ್ರವ ಪಿಡಿದುಎರಡೇಳುಭುವನತನ್ನುದರದೊಳಿಟ್ಟು ||ಗರುಡನ ಹೆಗಲೇರಿ ಜಗವ ಪಾಲಿಸುವಪುರಂದರವಿಠಲ ವೆಂಕಟ ಬಂದ ಮನೆಗ 5
--------------
ಪುರಂದರದಾಸರು
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು
ಭೃಂಗಕುಂತಳೆ ಶ್ರೀರಂಗನಸತಿಸ-ರ್ವಾಂಗದಿ ಶೃಂಗಾರೆತುಂಗವಿಕ್ರಮೆತುರಂಗಗಮನೆಭವಭೃಂಗವು ನಿವಾರೆಪಚರಣದಂದುಗೆ ನಡುಪಟ್ಟಿಯಉಡಿಗೆಜ್ಜೆಕರದಲಿ ಕಂಕಣ ಕಡಗ ಬಳೆಕೊರಳೊಳು ಮುತ್ತು ರತ್ನದಿ ಶೋಭಿಪತರತರ ಪದಕದ ಸರಮಾಲೆ1ಬಾಲಚಂದ್ರನವೋಲು ದೇವಿ ಕ-ಪೋಲವು ಪೊಳೆಯುವುದುಲೋಲಾಡುವ ಗಿಳಿವಾಲೆಯು ಕರ್ಣಕೆ ವಿ-ಶಾಲದಿ ಶೋಭಿಪುದು2ಪಟ್ಟೆ ಪೀತಾಂಬರ ಉಟ್ಟು ದೇವಿನೆರಿ ಚೆಲ್ಲುತ ನಡೆತಂದೂಸೃಷ್ಟಿಯೊಳ್ ಸುಜನರ ಪಾಲಿಸಿ ಲಕ್ಷುಮೀಕ್ಷುಲ್ಲರ ಮುರಿದಂದುಅರಿಸಿನ ಕುಂಕುಮ ಚಂದ್ರ ಕಸ್ತೂರಿಯುನಯನದಿ ಕಾಡಿಗೆಯುಶಿರದಿ ಮುಂದಲೆ ಬೊಟ್ಟು ಜಡೆಗೊಂಡೆ ಪುಷ್ಪವುಚರಣದಿ ಮಿಂಚಿಕೆಯೂ3ಹಸ್ತದಿ ಪದ್ಮಾವು ಬೆರಳೊಳು ಉಂಗುರತಿತ್ತಿಗೆ ಮೂಗುತಿ ಮುಖರಗಳೂನಿತ್ಯವು ಸ್ಮರಿಸೆ ಗೋವಿಂದನ ದಾಸನಅರ್ಥಿಯೊಳ್ ದೇವಿಯ ಪೊರೆಯುವಳು4
--------------
ಗೋವಿಂದದಾಸ
ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪಐದು ಮುಖ ಐದು ಈರೈದು ಕಣ್ಣುಗಳಿಂದ |ಐದು ಪಣೆಯೊಳಗಗ್ನಿ ಕಿಡಿಯುದುರುತ ||ಐದೆರಡು ತೋಳು ಭುಜಗಳ ಒಲೆದಾಡಿಸುತ |ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |ಮೇಲೆ ಒರಲುವ ಭೂತಗಣ ಸಹಿತದಿ ||ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2ಲಂಡದಾನವರ ಶಿರಗಳ ತರೆದು ಬಿರುದಿನ |ರುಂಡಮಾಲೆಯ ಧರಿಸಿ ಆರ್ಭಟಿಸುತ ||ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |ಪುಂಡರೀಕಾಕ್ಷನ ತೋರು ತೋರೆನುತ 3ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |ಕರಿಜಡೆಗಳನೆಲ್ಲ ಕೆದರಿಕೊಳುತ ||ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|ಭರಣಸಹಿತಾಗಿ ಬಾಗಿಲಿಗೆ ಬಂದಿದೆಕೊ4ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |ಮದನಾರಿಯೆಂಬಂಥ ಬಲಭೂತವು ||ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |ಒದಗಿ ಬಂದಿಹನಿದೊ ಪುರಂದರವಿಠಲ 5
--------------
ಪುರಂದರದಾಸರು