ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಹಮ್ಮದೇಕೆ ಮನವೇ ಪ ಪೆರ್ಮೆ ಸಲ್ಲದು ಭಜನೆಗೆ ಅ.ಪ ನಿಲುವೆಡೆಯೊಳು ಕುಳಿತೆಡೆಯೊಳು ಸಲಿಲದೊಳು ಸಲೆ ನಲಿಯುವೆಡೆಯೊಳು ಒಲಿದು ಭೋಜನ ಗೈಯುವೆಡೆಯೊ ಳೊಲಿದು ರಾಮರಾಮ ಯೆನ್ನದೇ 1 ಕುಳಿತು ಲಾಲಿಪ ಪರಮಾನಂದ ನಿಲಲು ನಲಿವನಾ ಮುಕುಂದ2 ಕಾಲಪಾಶ ಎಳೆವ ಕಾಲದಿ ನಾಲಗೆಯೊಳಕೆಸೆಳೆವಕಾಲದಿ ಬಾಲಗೋಪಾಲನ ಧ್ಯಾನಿಸಲಾರೆನೀ 3 ಮಾಧವ ಮುಕ್ತಿಯೀವನಾ ರಮಾಧವಾ 4 ದೇವನ ನೆನೆದು ಸುಖಿಸದೀಪರಿ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೊಟ್ಟ ಭಾಗ್ಯವೆ ಸಾಕೋ ಶ್ರೀ ಪ ಕೃಷ್ಣನ ದಯಬೇಕೋ ದೇವ ಅ.ಪ ಸಾಸಿರ ಬಂದರೆ ಶಾಂತಿಯೆಂದರಿತೆನೊ ಸಾಸಿರ ಬಂದಿತು ಶಾಂತಿ ಕಾಣಲಿಲ್ಲ ಸಾಸಿರ ಸಾಸಿರವೇಸು ಬಂದವೋ ಕ್ಲೇಶವು ಏರಿತು ಮೋಸಹೋದೆನೊ 1 ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ ಕೇಳುವುದಿಲ್ಲವೊ ನಾಳಿನ ಕೂಳನು ಕಾಲಕಾಲಕೆ ಹುಲಿ ಹಾಲನು ತರುತಿಹ ಬಾಲಗೋಪಾಲನ ಕೇಳಿ ಮೋಸಹೋದೆ 2 ಬೇಡವೆನ್ನುವರಿಗೆ ನೀಡುವ ದೊರೆ ನೀ ರೂಢಿಯ ಬಲ್ಲೆನೋ ಕಾಡುವುದಿಲ್ಲವೊ ನೀಡಿದ ಭಾಗ್ಯವು ಕೇಡುತರದೆ ಕಾ ಪಾಡಬೇಕೆಲೊ ಪ್ರೌಢÀ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಬಾಲಗೋಪಾಲನ ತೋರೆಲೆ ಲಲನೆ ಲೀಲೆಗಳಲ್ಲಿ ಮುದದಿಂದ ಪ ಕಾಲ ಕಳೆಯುತಿರೆ ಬಾಲೆಯರು ಕೇಳೆ ಪೇಳದೆ ಅಗಲಿದನೆಮ್ಮ ಬಲು ಲೋಲನಾಗಿಹನಿವನಮ್ಮ ಎಮ್ಮ ಮೇಲೆ ಅತಿ ಕಠಿಣನಮ್ಮ ಮೋರೆ ಕೀಳು ಮಾಡುವನಿವನಮ್ಮ ಕೋಪ ಜ್ವಾಲೆಯಿಂದುರಿಯುವನಮ್ಮ ಬಲು ಬಾಲನಾಗಿಹನಿವನಮ್ಮ ಗುಣ ಶಾಲಿ ಮಾತೆಯ ಕೊಂದನಮ್ಮ ಕಪಿ ಜಾಲದೊಳತಿ ಪ್ರಿಯನಮ್ಮ ಪರ ಬಾಲೆಯೊಳತಿ ಮೋಹವಮ್ಮ ಮಾಯಾ ಜಾಲವ ಬೀಸುವನಮ್ಮ ಬಲು ಕೀಳನು ಮೇಲು ಮಾಡುವನು ಇಂಥಾ 1 ಸಾರಸಾಕ್ಷನ ವಿರಹವನು ಸೈರಿಸಲಾರೆವೆ ಕರುಣದಲಿ ತೋರೆ ಕೋರುವೆವು ವಿನಯದಲಿ ಅವ ನೀರೊಳಗಡಗಿದನೇನೆ ದೊಡ್ಡ ಮೇರು ಬುಡದಲಿಹನೇನೆ ಅವ ಚಾರು ಸೂಕರನಾಗಿಹನೇನೆ ಅವ ಬಾರಿ ಕಂಭದಲಿಹನೇನೆ ವೇಷ ಧಾರಿ ಬ್ರಹ್ಮಚಾರಿಯೇನೆ ಕ್ಷಿತಿ ಪಾರಿಯೆನಿಸಿ ತಿರುಗುವನೆ ಅವ ಸೇರಿಹನೆ ಹನುಮನನು ಅಯ್ಯೋ ಜಾರ ಚೋರನಿವನಮ್ಮ ಮಾನ ಮೀರಿ ಬತ್ತಲೆ ನಿಂತಿಹನೇ ವಾಜಿ ಏರುತ ಓಡುತಲಿಹನೇ ಇಂಥಾ 2 ವೇಣು ವಿನೋದದಿ ಕುಣಿಯುತಲಿ ಕಾಣುವುದೆಂತು ಪ್ರಸನ್ನ ಮಾಧವನ ಮೀನ ರೂಪವ ತಾಳಿದನ ಬಲು ಪೀನ ಶರೀರ ಕಂಠನ ಧರೆ ಯಾನನದಲ್ಲಿ ಪೊತ್ತಿಹನ ದುಷ್ಟ ದಾನವನನು ಸೀಳಿದವನ ಭೂಮಿ ದಾನವ ಯಾಚಿಸಿದವನ ಭೃಗು ಮುನಿಯೊಳವತರಿಸಿದನ ಕಡು ಕಾನನದೊಳು ತಿರುಗಿದನ ಸವಿ ವೇಣು ಗಾನವ ಮಾಡಿದನ ಬಹು ಮಾನಿನಿ ವ್ರತಗಳನಳಿದವನ ಪ್ರಸ ನ್ನಾನನ ತುರಗವಾಹನನ 3
--------------
ವಿದ್ಯಾಪ್ರಸನ್ನತೀರ್ಥರು
ಮುಯ್ಯಾ ತಿರುಗಿಸಿದ ಹಾಡುಗಳು ಕಾಲಕಾಲಕ್ಕೆ ಗುರುಗಳ ಕಾಲಿಗೆ ಎರಗುವೆ ಕೋಲೆನ್ನಿ ಕೆಲದೆಯರು ಕೋಲೆನ್ನಿರೆ ಪ. ಸೊಲ್ಲು ಸೊಲ್ಲಿಗೆ ನಮಿಸಿ 1 ವೀತ ದೋಷನೆಂಬೊ ನೂತನ ಪುಷ್ಪ ಮುಡಿದು ಪ್ರೀತಿ ಬಡುವಗುರುಗಳ ಮಾತು ಮಾತಿಗೆ ನಮಿಸಿ2 ಬಾಲೆ ಗುರುಗಳ ಹೃದಯ ಆಲಯ ವಶವಾದ ಬಾಲಗೋಪಾಲನೆಂಬೊನೀಲ ಮಾಣಿಕವೆ ಬಿಗಿದು 3 ನಿತ್ಯ ಮೂರುತಿ ಎಂಬೊಮುತ್ತು ಮಾಣಿಕವೆ ಬಿಗಿದು4 ಸಿರಿ ರಮೆಯರಸನೆÉಂಬೊ ಬರಿಯ ಮಾಣಿಕವೆ ಬಿಗಿದು5
--------------
ಗಲಗಲಿಅವ್ವನವರು
ಲೋಕನೀತಿ ಅಧಿಕಾರಿಯಾಗಬೇಕು ಅದಕಾಗಿ ದುಡಿಯಬೇಕು ಪ ಅಧಿಕಾರಿಯಾಗುವುದು ಸುಲಭವಲ್ಲ ಎದೆಚಾಚಿ ಜಗದಿ ಹೆಮ್ಮೆಯ ತೋರುವ ಅ.ಪ ಶಾಶ್ವತವಿರಬೇಕು ಅದನೀಶ್ವರ ಕೊಡಬೇಕು ವಿಶ್ವವಿದ್ಯಾನಿಲಯವ ಸೇರುತಲಿ ಶಶ್ವದಿ ಪರವಿದ್ಯಾಶಾಖೆಯಲಿ 1 ಭೂಷಣವೆನಗೆಂದು ನೀ ಮೋಸ ಹೋಗಬೇಡ ಸಾಸಿರ ಸಾಸಿರ ಸ್ಥಾನಗಳಿಗೆ ನೀ ಆಸೆ ಪಡದೆ ಹರಿಶಾಸನ ಸಭೆಯ 2 ಕಮ್ಮಿಯ ಪ್ರತಿಫಲಕೆ ನೀ ಸಮ್ಮತಿ ಕೊಡದಿರೆಲೊ ಮರ್ಮವರಿತು ಪರಲೋಕವ ಪಡೆಯಲು ಹಮ್ಮನು ಮುರಿಯುವ ಕಾರ್ಮಿಕ ಸಭೆಯ 3 ಕಾಲವರಿತು ಸತತ ನೀ ಮೇಲಕೇಳಬೇಕು ಬಾಲಗೋಪಾಲನು ನೆಲೆಸುವುದಕೆ ಹೃದ ಯಾಲಯ ರಚನೆಯ ಚತುರ ಶಿಲ್ಪಿಯ 4 ಶ್ರವಣ ಮಾಡಬೇಕು ಶಾಸ್ತ್ರವ ಮನನ ಮಾಡಬೇಕು ಶ್ರವಣ ಮನನ ನಿಧಿ ಧ್ಯಾಸನದಿಂದ ಪ್ರ ಸನ್ನ ಹರಿದಯದಿ ಸಿಗುವ ಮುಕುತಿಗೆ 5
--------------
ವಿದ್ಯಾಪ್ರಸನ್ನತೀರ್ಥರು
ಸುಧೆಯನು ಸುರಿಸುವ ಸಮಯವಿದುಸದಯಾಕರ ಶ್ರೀಯಾದವ ಕುಲಪತಿ ಪ. ಇಂದಿರೆ ರಮಣನೇ 1 ಬಾಲೆರ ಮಧ್ಯದಿ ಕೋಲನೆ ಹಾಕುತಲೀಲೆಯ ತೋರಿದ ಬಾಲಗೋಪಾಲನೆ2 ಶಿರಿಯರಸ ತಂದೆವರದವಿಠಲನೆಚರಣಕಮಲ ತೋರೋ ಹೃದಯ ಮಂದಿರದಲಿ 3
--------------
ಸಿರಿಗುರುತಂದೆವರದವಿಠಲರು
ನಾಮ ಭಜೇ ಹರಿನಾಮ ಭಜೇಹರಿನಾಮ ಭಜೇಹರಿನಾಮ ಭಜೇಪಕಾಮಿತದಾಯಕ ಕಾಮಧೇನು ಭಕ್ತಪ್ರೇಮಮಂದಿರನ ನಾಮ ಭಜೇ ಅ.ಪವಂದಿತ ಅಜಹರಮಂದರಗಿರಿಧರಸುಂದರಮೂರುತಿಪಾದ ಭಜೇಸಿಂಧುಶಯನ ಗೋಪೀಕಂದ ಮುಕ್ಕುಂದಗೋವಿಂದನ ಆನಂದ ನಾಮ ಭಜೇ 1ಪಂಕಜಪಾಣಿಪಾದ ಕಿಂಕರಪಾಲಕಳಂಕಮಹಿಮನಾಪಾದ ಭಜೇಕೊಂಕಿನ ದೈತ್ಯರ ಬಿಂಕಮುರಿದ ಮಹಶಂಖಪಾಣಿಯ ನಾಮ ಭಜೇ 2ಶೇಷಶಯನ ಜಗದೀಶ ಪರಮಪ್ರಕಾಶ ನಿರಂಜನಪಾದ ಭಜೇವಾಸುದೇವಭವನಾಶ ಜಾನಕಿಪ್ರಾಣೇಶನ ವಿಮಲನಾಮ ಭಜೇ 3ನೀಲಮೇಘಶ್ಯಾಮಶೂಲಪಾಣಿಸಖಬಾಲಗೋಪಾಲನ ಶ್ರೀಪಾದ ಭಜೇಪಾಲ ಮೂಲೋಕನ ಮೇಲು ಮೇಲೆನ್ನುತಕಾಲಕಾಲದಿಸುನಾಮಭಜೇ4ಜಯ ಜಯಅಚ್ಯುತಜಯ ಜಯ ಸಚ್ಚಿತ್ತಜಯ ಜಯಾನಂತನಪಾದಭಜೇಜಯ ಜಯ ಸ್ಮರಪಿತ ಜಯ ಜಯ ಮುಕ್ತೀನಾಥಜಯವೆಂದು ಶ್ರೀರಾಮ ನಾಮ ಭಜೇ 5
--------------
ರಾಮದಾಸರು