ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆ ಎಷ್ಟು ಪ್ರೇಮಿಯೋ ಗುರುವು ಎಷ್ಟು ಪ್ರೇಮಿಯೋ ಪ ಎಷ್ಟು ಪ್ರೇಮಿ ಎನ್ನ ಬಿಡದೆ | ಸೃಷ್ಟಿಯಲ್ಲಿ ಕೈಯಪಿಡಿದ ಅ.ಪ ಭಾನುಕೋಟಿ ತೇಜ ವರದ ಸಾನುರಾಗದಿಂದ ಕರೆದು ಜ್ಞಾನ ಶಾಸ್ತ್ರ ಬೋಧಿಸುತ್ತ ಹೀನ ವೃತ್ತಿ ದೂರಿ ಪೊರೆದ 1 ನೀಲವರ್ಣ ಕಂಜನಯನ ನೀಲಕಂಠಮಿತ್ರ ಭಕ್ತ ಪಾಲ ಭೂರಿದುಃಖಭವವ ಧೂಳಿಮಾಡಿ ಬಾಲಗೊಲಿದ 2 ಶ್ರೇಷ್ಠ ಸುಮಹದೇವಪುರದೊಳಿಷ್ಟರಂಗನಾಥ ಭರದಿ ಮುಟ್ಟಿ ಮುಕ್ತಿಯಿತ್ತು ಪುನಃ ಹುಟ್ಟು ಸಾವುಗಳನು ಕಳದ 3
--------------
ರಂಗದಾಸರು
(ಈ) ಸರ್ವದೇವತಾಸ್ತುತಿಗಳು 1. ಶಂಕರ ಭಾಗವತಾಗ್ರೇಸರಾ ಶಿವಶಂಕರ ಭಾಗವತ ಪ್ರಿಯಂಕರ ಪ ಯೋಗಿ ಹೃತ್ಪದ್ಮಸ್ಥಿತ ಆಗಮನುತ ವಿಶ್ವನಾಥ ಶ್ರೀಗಣಪತಿ ಷಣ್ಮುಖ ಪಿತ ಭಾಗ್ಯದಾತ ಪ್ರಖ್ಯಾತ ಅ.ಪ ಬಾಲಚಂದ್ರಶೇಖರ ಹರ ಭವಹರ ಕಾಲಕಾಲ ಕಲ್ಮಷಹರ ಕರುಣಾಕರ ಶೂಲಪಾಣಿ ಡಮರುಗಾಕರ ಬಾಲಗೊಲಿದ ಭಸ್ಮಧರ ಶ್ರೀಲಲಿತಾ ಮನೋಹರ ನೀಲಕಂಠ ಮಹೇಶ್ವರ 1 ರಾಮನಾಮ ಬೋಧಕ ಭಕ್ತಪ್ರೇರಕ ಪ್ರೇಮರೂಪ ತ್ರ್ಯಂಬಕ ತ್ರಿಪುರಾಂತಕ ವಾಮದೇವ ವರಗಿರೀಶ ಕಾಮವೈರಿ ಕೃತ್ತಿವಾಸ ಶ್ರೀಮಜ್ಜಾಜಿಕೇಶವ ಸ್ವಾಮಿ ಭಜನದಾಯಕವರ 2
--------------
ಶಾಮಶರ್ಮರು
ಅ. ಮುಂಡಿಗೆಗಳು ಪೌರಾಣಿಕ ವಾವೆವರಸೆಯ ಮುಂಡಿಗೆಗಳು 254 ಇಂದು ನೀ ಕರೆದು ತಾರೆ - ಬಾರದೆ ಶ್ರೀಗೋ-ವಿಂದ ತಾ ಮುನಿದಿಹರೆ - ವಿರಹ ಬೇಗೆಯಲಿಬೆಂದು ಸೈರಿಸಲಾರೆ - ಸಖಿ, ನೀನು ತಂದು ತೋರೆ ಪ ನೊಂದರೂ ಮನದಾನಂದದಿಂದನಂದನಂದನನೆಂದು ಸೈರಿಸಿಎಂದಿಗೂ ಅಗಲಿರಲಾರೆ ಕರೆತಂದುಹೊಂದುಗೂಡಿಸೆ ಮಂದಗಮನೆ ಅ ಅಮೃತ ಗಜ ಉನ್ಮತ್ತಕಾಲಿನಿಂದಲಿ ಕೊಲುವ ರೂಪದಿಕಾಲಿನಲಿ ರಿಪುವನು ಸೀಳಿದಕಾಲಿನಲಿ ತಾನಳೆದ ಮೇದಿನಿಕಾಲಿನಲಿ ನಡೆದ ಭಾರ್ಗವಕಾಲಿನಲಿ ವನವಾಸ ಪೋದನಕಾಲಿನಲಿ ಕಾಳಿಯನ ಮರ್ದಿಸಿದನಕಾಲಿನಲಿ ತ್ರಿಪುರರ ಗೆಲಿದನಕಾಲಿಗೆರಗುವೆ ತೇಜಿರೂಢನ 1 ಎವೆಯಿಕ್ಕದೆ ನೋಡಿದ - ತಲೆಯ ತಗ್ಗಿಸಿಕವಲು ಕೋರೆದಾಡೆಯೊಳಾಡಿದ - ಕಂಬದಿ ಮೂಡಿದತವಕದಿಂದಲಿ ಬೇಡಿದ - ಭೂಭುಜರ ಕಡಿದಶಿವನ ಬಿಲ್ಲನು ಮುರಿದ _ ದೇವಕಿಕುವರ ನಗ್ನ ಹಯವನೇರಿದವಿವಿಧಾಬ್ಧಿಯೊಳಾಡಿ ಗಿರಿಧರಸವಿದು ಬೇರನು ಬಾಲಗೊಲಿದನಅವನಿ ಬೇಡಿ ಕೊಡಲಿ ಪಿಡಿದನಸವರಿ ದಶಶಿರನ ಬೆಣ್ಣೆ ಕದ್ದನಯುವತಿಯರ ವ್ರತಗೆಡಿಸಿ ಕುದುರೆಯ ಹವಣುಗತಿಯಲಿ ಏರಿದಾತನ2 ಮತ್ಸ್ಯ ಸೂಕರ ವಿಪ್ರ ಕೂರ್ಮ ವರಹನರಹರಿ ದ್ವಿಜ ಕೊರಳ ಕೊಯ್ದವನ ನೆಲಮಗಳ ವರಶೌರಿ ಬುದ್ಧನ ತುರಗವೇರಿದ ಆದಿಕೇಶವನ3
--------------
ಕನಕದಾಸ
ಪಾಲಿಸೆನ್ನನು ಶ್ರೀಲಕುಮಿವರ ಭೂಲೋಲಕಾರ್ಪರ ದೊಳು ಪಿಪ್ಪಲತರು ಸುಮಂದಿರ ಪ ಬಾಲತನದಿ ಜನಕನ ಬಹು ಕೀಳುನುಡಿಗಳನು ಸಹಿಸಿದ ಬಾಲಗೊಲಿದ ನರಹರಿಯೆ ಕೃಪಾಳೊ ನಿಮ್ಮಯ ಕಾಲಿಗೆರಗುವೆ ಅ.ಪ ಸಾಲಿಗ್ರಾಮದಿ ನೆಲಸಿ ತರುವರ ಮೂಲದಿ ಸೇವಿಪರ ಪಾಲಿಸಲೋಸುಗ ನಿರಂತರ ಕಾಲಕಾಲಗಳಲ್ಲಿ ಬಿಡದೆ ವಾಲಗ ಕೈಕೊಳ್ಳುತ ಮೆರೆವ ಕಾಳಿಯಮದನನೆ ತವಪದ ಕೀಲಾಜದಲಿ ಭಕುತಿಯ 1 ಮಂದಜಾಸನಾದಿ ಸುರಗಣ ವಂದಿತ ಸುಚರಣ ದ್ವಂದ್ವ ಭಜಕ ವೃಂದಪೋಷಣ ಸಿಂಧುಶಯನವಂದಿಪೆ ಭವ ಬಂಧ ಬಿಡಿಸ್ಯಾನಂದಗರಿವ ಮಂದಿರದಲಿ ತಂದುತೋರಿಸಿ2 ನಾರದಾದಿ ಮುನಿ ಸುವರ್ಣಿತ ಉದಾರ ಚರಿತ ನಾರಾಯಣ ಮುನಿಸು ಪೂಜಿತ ಧಾರುಣಿಯೊಳು ಘೋರ ಕೃಷ್ಣಾತೀರ ಸಂಸ್ಥಿತ ಸೇರಿದ ಭಕುತರಿಗೆ ತ್ರಿದಶ ಭೂರುಹ ಸಿರಿನರಸಿಂಹನೆ 3
--------------
ಕಾರ್ಪರ ನರಹರಿದಾಸರು