ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಬಾಲಕೃಷ್ಣಲೀಲೆ ಅಣ್ಣ ಬಲರಾಮನ ಸ್ತುತಿ ಚಂದ್ರವಾರಿಧಿಮಣಿ ನಂದನ ರೋಹಿಣಿಸುಂದರ ರವಿ ಸಮಾ ವಂದಿಪೆ ನಿಮಗೆ ಪ ಮೂಲಪುರುಷ ಯದು ಬಾಲಕೃಷ್ಣಗೆ ಹಾರಬಾಲ ಭೂಷಣ ಹರಿ ಬಾಲ ಸೋದರನೆ 1 ಅಂಗದ ಕಪಿವರನಂಗಜ ರಾಘವಅನಂಗಾ ನಾರಿಗಳು ಉತ್ತುಮಾಂಗನ ಸಖನೆ 2 ಈಶ ಮನಸ ದೋಷ ಧೀಶ ಕಳೆದುಇಂದಿರೇಶನಲಯತವ ತೋಷಿಸು ಪ್ರಭುವೆ3
--------------
ಇಂದಿರೇಶರು
ಕಂದನಿಗೆ ಕಾಲಿಲ್ಲವಮ್ಮ, ಪುಟ್ಟಿ-ಪ ದಂದಿಂದ ಈ ಅಂಬೆಗಾಲು ಬಿಡದಮ್ಮ ಅ.ಪ ಮಳೆ ಹೊಳೆ ಕತ್ತಲೊಳು ತರಳ ಮಗ ಬೆದರಿದನೊಕಳೆಯುಳ್ಳ ಮುಖಕೀಗ ಗ್ರಹ ಸೋಕಿತೋಎಳೆಯ ಬೆಳದಿಂಗಳೋಳೆತ್ತಣ ದೃಷ್ಟಿ ತಾಕಿತೊಲಲನೆ ಮೀಸಲ ಹಾಲು ಮೆರೆದೆರೆದ ಪರಿಯೊ 1 ಬೆಣ್ಣೆಯನು ಮೆಲ್ಲುತ ಬೆದರಿ ಬಾಯಾರಿದನೊಉಣ್ಣೆ ಪೂತನಿ ಮೊಲೆಯ ವಿಷ ಸೋಂಕಿತೋಅಣ್ಣ ಪಾಪಿಯ ಭಯಕೆ ಅಂಜಿ ಕಾಲಿಟ್ಟನೊಹೆಣ್ಣು ದೈತೇಯರ ಕಾಲಲಿ ಬಂದ ಸರಕೊ 2 ಧುರವಿಜಯ ಶ್ರೀಕೃಷ್ಣರಾಯಗೆ ನಿಮ್ಮಹರದೇರಂದವ ತೋರಬಂದ ಪರಿಯೋಧರೆಗಧಿಕ ವಿದ್ಯನಗರವಳಿತೆಂದು ಉದಯಗಿರಿಯಿಂದ ಬಂದ ಮುದ್ದು ಬಾಲಕೃಷ್ಣಗೆ 3
--------------
ವ್ಯಾಸರಾಯರು
ಬಾಳು ಪ್ರೀತಿಯಲಿ ನಮ್ಮ ಬಾಲಕೃಷ್ಣಗೆ ದ್ರಾಕ್ಷಾ-ದೋಳು ಬಂದಿಹ ಗೋಕುಲಾಲಯದಿಂದ ಪ ಪುಟ್ಟ ಕರದಿ ಚೌಕಿಲಿಟ್ಟ ದ್ರಾಕ್ಷದ ಬೆಳ್ಳಿಬಟ್ಟಲಾ ಪಿಡಿಯುತ ದೃಷ್ಟಿಗ್ಹೇಳಿದಾನು 1 ಉದ್ಧವಾ ಪದವನ್ನು ಶುದ್ಧವಾಗಲೆ ಪಾಡೆಮುದ್ದು ಕನಕಕಾಂಬೆ ಉದ್ದ ಬಾಲಕನು 2 ಸುಂದರ ಬಾಲಕಾ ಇಂದಿರೇಶನೆ ಇವಇಂದು ನೋಡುತ ಮುಖ ನಂದವಾಗಿಹುದು ಆನಂದವಾಗಿಹುದು 3
--------------
ಇಂದಿರೇಶರು
ಬಾಳೆ ಕಿತ್ತಳೆ ಜಂಬುದ್ರಾಕ್ಷಿ ರಸಾಲ ಫಣಸ ಖರ್ಜೂರ ಫಲಗಳ ಬಾಲಕೃಷ್ಣಗೆ ಮನುಜಾ ಸಾಯಂಕಾಲ ಪ್ರಾರ್ಥಿಪುದು ಪ ಪರಮಪುರುಷನು ಪೂಜೆಕಾಲದಿಸುರರು ಕರ್ಮಗಳಿಗೆ ಚಿಂತಿಸಿಪರಿಚರಿಸುವ ಪುರುಷ ಮಾಧವಚರಣ ಪೊಂದುವನು 1 ನಾನು ಮಾಡುವ ಕವಿತೆ ಎಲ್ಲವವೇಣು ಬಾಲನ ಮುಂದೆ ಪೇಳುವೆಸಾನುರಾಗವ ಮಾಡಲೆನ್ನೊಳುಮೌನಿ ನಾರದರು 2 ಇಂದಿರೇಶನ ಮುಖವ ನೋಡುತನಂದಗೋಪಗೆ ಈ ಸುಶೃತಿಗಳಿಂದವೃಂದ ಚರಿಸುತ ತತ್ವಾದಾಂಬುಜದ್ವಂದ್ವಕರ್ಪಿಸುವೆ 3
--------------
ಇಂದಿರೇಶರು
ಮಂಗಳಾ ವರಯೋಗಿ ರಾಯಗೆ | ಮಂಗಳಾ ಪರಮ ಅವಧೂತಗೆ |ಮಂಗಳಾ ಪರಮಾತ್ಮ ಶ್ರೀ ಗುರು ಸಿದ್ಧ ಬಸವಂಗೆ | ಜಯ ಜಯ ಮಂಗಳಾ ಪ ಆದಿ ಮಧ್ಯಾವಸಾನವಿಲ್ಲದ ನಾದ ಬಿಂದು ಕಲಾ ಶೂನ್ಯಗೆ |ಸಾಧಿಸುವ ಸಿದ್ಧಾಂತ ಅಗಣಿತವಾದ ಬ್ರಹ್ಮವನು | ವೇದ ವೇದಾಂತವ ವಿಚಾರಿಸಿ ನಾದ ಋಷಿ ಅಪಾರ ಚಿಂತ್ಯನು | ಮೇದಿನಿಯ ಭಕ್ತರನುಗ್ರಹಕಿತ್ತ ಬಂದ ಬಸವರಾಜಯೋಗದಲಿ 1 ಮತ್ಸ್ಯ ಕೂರ್ಮ ವರಾಹನಾದ ಮಾಧವಗೆ 2 ಮಾಧವ ಕಲಿಯೊಳಗವತರಿಸಿದ ಬಳಿಕಾ ಬಾಲಕೃಷ್ಣಂಗೆ 3 ನೋಡಿದರೆ ದುರಿತವನು ಕೆಡುವನು, ಬೇಡಿದರೆ ಸಾಯೋಜ್ಯನೀವನು ಮಾಡಿ ಪಾದದ ತೀರ್ಥಕೊಂಡಡೆ ಮರಳಿ ಪುಟ್ಟಗಡ | ಖೇಡನಾಗದೆ ನಾಮಕೀರ್ತಿಯ ಮಾಡು ಮರುಳೆ ಆದಿಪುರುಷನರೂಢಿಯೊಳು ಈಡ್ಯಾಡಿ ಮೆರೆದ ಬಸವರಾಜಯೋಗದಲಿ 4 ಇಂತು ಭಕ್ತರ ಭಕ್ತಿಗೋಸುಗ ಅಚಿಂತ್ಯ ಮಹಿಮನು ಶರೀರವತಾ- ನಂತು ಧರಿಸಿಹನಿಲ್ಲದಿದ್ದಡೆ ದೇಹ ತಾನೇ ತಾ |ಕಂತು ಹರನವತಾರವಲ್ಲದೆ ಭ್ರಾಂತಿ ಬಿಡಿಸಿದ ಕೊಳಕೂರದಲಿಸಂತತವೆ ನೆಲೆಸಿಹನು ಬಸವರಾಜಯೋಗದಲಿ 5
--------------
ಭೀಮಾಶಂಕರ
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ