ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ | ಕುಣಿದಾಡಿ ಬಾರೋ ಪ ಕಿರುನಗೆ ಸೂಸುತ| ನಲಿದಾಡಿ ಬಾರೋಅ.ಪ ರಂಗಯ್ಯ ಬಾರೋ | ಕೃಷ್ಣಯ್ಯ ಬಾರೋ ಮಂಗಳಾತ್ಮಕ ಮುದ್ದು | ಕಂದಯ್ಯ ಬಾರೋ1 ನೊರೆಹಾಲ ನೀವÉ | ಸರಸದಿ ಬಾರೋ | ನವನೀತವೀಯುವೆ | ನಲಿದೋಡಿ ಬಾರೋ 2 ಕಜ್ಜಾಯ ಕೊಡುವೆ| ಮುದ್ದು ನೀ ಬಾರೋ || ಗೆಜ್ಜೆನಾದವ ಮಾಡಿ | ಎದ್ದೋಡಿ ಬಾರೋ3
--------------
ವೆಂಕಟ್‍ರಾವ್
ಪೀಠಕೀಗ ಬಾರೊ ದೇವನೆ ಆದ ಪಾಠ ಸಾಕೊ ಕೃಷ್ಣನೆ ಪ. ಮುತ್ತಿನಾಭರಣವ ತೊಡಿಸುವೆನು ಕಸ್ತೂರಿ ತಿಲಕವ ತಿದ್ದುವೆನೊ ಕೃಷ್ಣ ಮಸ್ತಕದರಳೆಲೆ ಮಾಗಾಯಿ ಪೊಳೆಯುತ ಕಸ್ತೂರಿ ರಂಗ ಬಾರೊ 1 ಕಂಗಳಿಗೆ ಕಪ್ಪು ಹಚ್ಚುವೆನೊ ರÀಂಗಗೆ ಪೀತಾಂಬರುಡಿಸುವೆನೊ ಮಂಗಳಾಂಗಗೆ ನಾ ಶೃಂಗಾರ ಮಾಡಿ ಕಂಗಳಿಂ ನೋಡುವೆನೊ 2 ಕಾಲಲಂದಿಗೆ ಗೆಜ್ಜೆ ಫಳಿರೆನುತ ನೀಲಮೇಘ ಶ್ಯಾಮ ಶ್ರೀ ಶ್ರೀನಿವಾಸ ಬಾಲ ಗೋಪಾಲ ಸುಶೀಲ ಮುರಳಿಧರ ರಮಾಲೋಲ ಶ್ರೀ ಕೃಷ್ಣ ಬಾರೋ3
--------------
ಸರಸ್ವತಿ ಬಾಯಿ
ಬಾರೋ ಬಾರೋ ಎನ್ನ ನೀ ತಾರಿಸ ಬಾರೋ ಪ ಸಾರಥಿ ಬಾರೋ | ವಾಸುಕಿ ಶಯನಾವಂತನೇ ಬಾರೋ | ವಾಸುದೇವ ಮುಕುಂದನೆ ಬಾರೋ | ವಾಸ ಮಾಡಿದೆ ಕ್ಷೀರಾಬ್ಧಿಲಿ ಬಾರೊ 1 ಕರಿವರ ಸಂಕಟ ಹರಿಸಿಹ ಬಾರೋ | ಕರುಣಾಕರ ಗೋಪಾಲನೆ ಬಾರೋ | ಕರದಲಿ ಚಕ್ರವ ಪಿಡಿದಿಹ ಬಾರೋ | ಕರಿಚರ್ಮಾಂಬರ ಮಿತ್ರನೆ ಬಾರೋ 2 ಸರಸೀರುಹದಳ ನೇತ್ರನೇ ಬಾರೋ | ಸರಸೀರುಹ ಸಂಭವ ವಂದ್ಯನೇ ಬಾರೋ | ಸರಸಿಜೋವನಾಭನೆ ಬಾರೋ | ಸಾರಥಿ ಬಾರೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಮನೋಹರಾ ಮುರಾರಿ ಬಾರೋ ಪ ಕರಿವರದಾಯಕ ಮರಚಮುಸ್ಥಾಪನ | ಶರಣಾಗತ ಸಹಕಾರಿ ಬಾರೋ | ಸರಸಿಜಾಸನ ವಂದಿತಾಂಘ್ರಿ | ದುರಿ | ತಾಚಲ ವಜ್ರಧಾರಿ ಬಾರೋ 1 ಮನೋಜನಿತ ಜನಕರವಿಂದ ಲೋಚನ | ಮುನಿಜನ ಹೃದಯ ವಿಹಾರಿ ಬಾರೊ| ಘನಮಹಿಮ ಸುದಾಮ ರಕ್ಷಕಕ | ದನುಜಾವಳಿ ಮದಹಾರಿ ಬಾರೋ 2 ಕಾಲ ಪಯೋಧರ | ಮಂದರೋದ್ಧಾರಿ ಬಾರೋ | ನಂದನಾತ್ಮಜ ದೇವ ಮಹಿಪತಿ | ನಂದನ ಪ್ರಭು ಉದಾರಿ ಬಾರೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾದವ ನೀ ಬಾ ಯದುಕುಲನಂದನಮಾಧವಮಧುಸೂದನ ಬಾರೋಪಸೋದರ ಮಾವನ ಮಥುರಿಲಿ ಮಡುಹಿದ ಯಶೋದೆಯ ನಂದನ ನೀ ಬಾರೋ ಅ.ಪಕಣಕಾಲಂದುಗೆ ಗಣಗಣಕೆನುತಲಿತನನನವೇಣುನಾದದಲಿ ||ಚಿಣಿಕೋಲು ಚಂಡು ಬುಗುರಿಯನಾಡುತಸಣ್ಣ ಸಣ್ಣ ಗೋವಳರೊಡಗೂಡಿ 1ಶಂಖ ಚಕ್ರವು ತೋಳಲಿ ಹೊಳೆಯುತಬಿಂಕದ ಗೋವಳ ನೀ ಬಾರೋ ಅಕ- ||ಳಂಕ ಮಹಿಮನೆ ಆದಿನಾರಾಯಣಬೇಕೆಂಬ ಭಕ್ತರಿಗೊಲಿಬಾರೋ 2ಖಗವಾಹನನೆ ಬಗೆ ಬಗೆ ರೂಪನೆ |ನಗೆ ಮೊಗದರಸನೆ ನೀ ಬಾರೋ ||ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |ಪುರಂದರವಿಠಲ ನೀ ಬಾರೋ3
--------------
ಪುರಂದರದಾಸರು
ರಂಗಾ ಬಾರೋ ಪಾಂಡುರಂಗ ಬಾರೋ ಶ್ರೀರಂಗಾ ಬಾರೋ ನರಸಿಂಗ ಬಾರೋ ಪಕಂದ ಬಾರೋ ಎನ್ನ ತಂದೆ ಬಾರೋಇಂದಿರಾ ರಮಣ ಮುಕುಂದ ಬಾರೋ 1ಅಪ್ಪ ಬಾರೋತಿಮ್ಮಪ್ಪಬಾರೋ ಕಂದರ್ಪನೈಯನೇ ಕಂಚಿವರದ ಬಾರೋ 2ವಿಷ್ಟು ಬಾರೋಉಡುಪಿಕೃಷ್ಣ ಬಾರೋ ಎನ್ನಿಷ್ಟ ಮೂರುತಿಪುರಂದರವಿಠಲ ಬಾರೋ3
--------------
ಪುರಂದರದಾಸರು
ವಾಮನಭಾರ್ಗವಬಾರೋ ರಾಮಕೃಷ್ಣನೆ ಬಾರೋಪ್ರೇಮದ ಬುದ್ಧನೆ ಬಾರೋ ಸ್ವಾಮಿ ಕಲ್ಕಿಯೆ ಬಾರೋ 2ಅರವಿಂದನಾಭಬಾರೋ ಸುರರ ಪ್ರಭುವೆ ಬಾರೋಪುರುಹೂತವಂದ್ಯ ಬಾರೋಪುರಂದರವಿಠಲ ಬಾರೋ3
--------------
ಪುರಂದರದಾಸರು