ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಂಧು ಶಯನ ಬಾರೆಲೋ - ಮಂದರೋದ್ಧಾರೀಇಂದಿರೆಯರಸ ಮುಕುಂದನೇ ಪ ಮಾಧವ ಹೇ ದಯಾಂಬುಧೆ - ವಂದಿಸುವೆ ತ್ವತ್ಪಾದ ದ್ವಂದ್ವಕೇ ಅ.ಪ. ಹೃದಯ ಮಧ್ಯದಿ ಮಂಟಪಾ - ಬುಧ ಜನ ವಂದ್ಯಸಿದ್ಧವಾಗಿಹುವು - ಮಾಧವಾ |ಸಿದ್ಧ ಸಾಧನ ಪವನ - ಉದಾನಾದಿಗಳೆಲ್ಲಹೆದ್ವಾರಗಳ ಕಾದಿಹರೋ ||ಮಧು ವಿರೋಧಿಯೆ ನಿನ್ನ ಪದ - ಸದ್ವನಜ ಕೀರುತಿ ಸುಧೆಯ ಸವಿಯುವಮುದವ ಕರುಣಿಸು ಶ್ರೀದ ನರಹರಿ - ಹೃದಯ ಸದನಕೆ ವದಗಿ ಬೇಗ 1 ಚಿತ್ತ ಸಿಂಹಾಸನವೂ - ಚಿತ್ತ ಜನಯ್ಯಾಸ್ತೋತ್ರ ರತುನ ಖಚಿತವೂ ||ಉತ್ತಮ ಮತಿ ಸುದತೇರೂ - ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ಕೃತ್ತಿವಾಸನ ಸಖನೆ ಪರಮ ಸು - ಹೃತ್ತಮೋತ್ತಮ ಚಿತ್ಸುಖ ಪ್ರದಚಿತ್ತವಿಸು ಚಿತ್ತಾಖ್ಯ ಪೀಠಕೆ - ಸತ್ಯಕಾಮ ಶರಣ್ಯ ಶಾಶ್ವತ 2 ಭವ ಪಿತ ತೋಯ ಜಾಕ್ಷನೆ -ದಾಯ ನಿನ್ನದು ಎನ್ನ ಗತಿಗೇ ಪ್ರೇರ್ಯ ಪ್ರೇರಕ ಶ್ರೀಗುರು - ಗೋವಿಂದ ವಿಠಲನೆ ಕಾಯೊ ಬೇಗ 3
--------------
ಗುರುಗೋವಿಂದವಿಠಲರು
ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ ಆಲಸ್ಯವೇತಕೋ ಆಯಿತು ವೆಂಕಟೇಶ ಪ ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ ನಳಿನಲೋಚನೆಯರುಗಳಿಂದ ಅಭಿಘರಿಸಿ ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ 1 ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು 2 ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ 3 ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ ಉಣ್ಣಬಾರೆಲೋ ನೀನು ಇನ್ನು ತಡ ಬೇಡ 4 ಕೇಸಕ್ಕಿಯೋಗರವು ದೋಸೆ ಪಾಯಸವನ್ನು ಬೀಸು ಹಾರಿಗೆಯತಿರಸವು ಮಂಡಿಗೆಯು ಏಸು ಹೋಳಿಗೆ ಬೇಕೈಸನೀ ಉಣಲೇಳು 5 ಚಕ್ಕುಲಿ ಕರಜಿಯಕಾಯಿ ಮನೋಹರವು ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು ಕದಳಿ ರಸಾಯನವು ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ 6 ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ 7 ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ ಬಾಯೊಳು ಪ್ರಣವವನು ಜಪಿಸಲಾಕ್ಷಣದಿ ರಾಯವೆಂಕಟಪತಿಯು ಆಪ್ಯಾಯನವ ಮಾಡಿ ದಾಯವಾಗಿತ್ತನು ಭಕ್ತಜನರಿಗೆಲ್ಲ 8 ಈ ರೀತಿಯಿಂದಲೆ ಆರೋಗಿಸುವುದೆಂದು ವಾರಿಜನಾಭನ ಸಾರಿ ವರ್ಣಿಸಲು ಮೋರೆಯ ಪ್ರಸಾದ ಕರೆದು ಇವನು ನಮ್ಮ ವರಾಹತಿಮ್ಮಪ್ಪನೊಂದುಗೂಡಿರುವನು 9
--------------
ವರಹತಿಮ್ಮಪ್ಪ
ಏಳೊ ಬಾಲನೆ ವೇಳೆ ಮೀರುತಿಹುದು ಪ ಕೇಳುತಿಹರು ಯದುಮೌಳಿಯೆಲ್ಲಿ ಎಂದು ಅ.ಪ ಎದ್ದು ಬಾರೆಲೋ ಮುದ್ದು ಬಾಲಕೃಷ್ಣ ಪದ್ಧತಿಯಲಿ ಕ್ಷೀರ ಸಿದ್ಧವಾಗಿಹುದು 1 ಜಾಣ ನಿನ್ನಯ ವೇಣುನಾದ ಕೇಳೆ ಏಣನಯನೆಯರು ಕಾಣ ಬಯಸುತಿಹರು 2 ಯಮುನಾ ತೀರದಿ ಸುಮಲತೆಗಳಲ್ಲಿ ಕಮಲನಯನ ನಿನ್ನ ರಮಿಸ ಬಯಸುತಿಹರು 3 ಮೌನಿಜನರು ತಮ್ಮ ಸ್ನಾನ ಮುಗಿಸಿ ನಿನ್ನ ಜ್ಞಾನ ಪೊಂದೆ ಗುಣಗಾನ ಮಾಡುತಿಹರು 4 ನಿನ್ನ ಪ್ರಿಯ ಜನರನ್ನು ಕಾಯಿಸಲು ಇನ್ನು ತರವೇನೋ ಪ್ರಸನ್ನವದನನಾಗಿ 5
--------------
ವಿದ್ಯಾಪ್ರಸನ್ನತೀರ್ಥರು
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ
ಬಾರೋ ಬಾರೆಲೋ ಹೃದಯ ವಾರಿಜದೊಳುಬಾರಿ ಬಾರಿಗೆ ಕರೆವೆ ನಿನ್ನ ಮೋರೆ ತೋರೆಲೋ ಪ ಪುಟ್ಟ ಪಾದವ ಕ್ಷಿತಿಯೊಳಿಟ್ಟು ಮೋದವ ಕೊಟ್ಟು ಭಕ್ತರಿಗೆ ತೋರೋ ಕೃಷ್ಣ ರೂಪವಾ 1 ಸಿಂಧು ಮಥಿಸಿದಿ ಸುಧೆಯ ತಂದು ಬಡಿಸಿದಿ ಕೃಷ್ಣಾಚಂದದಿಂದ ದೇವತೆಗಳ ವೃಂದ ಸಲಹಿದಿ 2 ಇಂದು ವದನನೆ ಶಾಮಸುಂದರಾಂಗನೇಆನಂದದಿಂದ ತೋರೋ ಎನಗೆ ಕುಂಜಹೃದಯನೇ 3 ಇಂದಿರೇಶನೆ ಭವೇಂದ್ರ ವಂದ್ಯನೆ ಕೃಷ್ಣಾ ನಿನ್ನಕಂದನೆಂದು ಕರೆಯೋ ಎನ್ನ ನಂದ ಬಾಲನೇ4
--------------
ಇಂದಿರೇಶರು