ಒಟ್ಟು 8 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಡಿ ಬಾರೋ ರಂಗಯ್ಯ ಓಡಿ ಬಾರೋ ಕೃಷ್ಣಯ್ಯ ಪ. ನೋಡಿ ನಿನ್ನ ಮುತ್ತನೀಡುವೆ ಹಾಡಿ ಜೋಗುಳವ ಪಾಡುವೆ ಅ.ಪ. ಮೊಸರು ಭಾಂಡ ಒಡೆದು ಬೆಣ್ಣೆ ಹಸುಳೆ ಮೆದ್ದು ಬಾಯೆಲ್ಲಾ ರಸಿಕಸಿಯಾಗಿರುವ ಮೈಗೆ ಬಿಸಿ ನೀರೆರೆವೆನೊ ರಂಗ 1 ಬಿಸಿ ದೋಸೆಯ ಕೊಡುವೆನೆ ಮೊಸರೋಗರವ ಉಣಿಸಿ ನಿನಗೆ ಹಸುರಂಗಿಯ ತೊಡಿಸುವೆ ಕೃಷ್ಣಾ 2 ಮುದ್ದು ಮುದ್ದಾದ ಪಾದ ಹೆಜ್ಜೆನಿಟ್ಟು ಬಾರೆಲೊ ಮುದ್ದೆ ಬೆಣ್ಣೆ ಹಣ್ಣು ಕೊಟ್ಟು ಮುದ್ರೆಯುಂಗುರವನಿಟ್ಟು ನೋಡುವೆ 3 ಅಣ್ಣ ಬಲರಾಮನೊಡನೆ ಚಿಣ್ಣ ಆಡಬಾರೆಲೊ ಚಿಣ್ಣಿಕೋಲು ಚಂಡು ಬುಗುರಿ ಚಿಣ್ಣ ಕೊಡುವೆನೋ ಕೃಷ್ಣಾ 4 ಶೃಂಗಾರವ ಮಾಡುವ ಶ್ರೀ ಶ್ರೀನಿವಾಸ ಬಾರೆಲೊ ಮುದ್ದು ಕಂಗಳಿಗೆ ಕಪ್ಪನ್ಹಚ್ಚಿ ರಂಗ ನಿನ್ನ ನೋಡುವೆದಣಿಯ5
--------------
ಸರಸ್ವತಿ ಬಾಯಿ
ಪೋಗದಿರೊ ಗೋಪಿಯರ ಮನೆಗೆ ಬಾ ಬೇಗ ಶ್ರೀ ಕೃಷ್ಣನೆ ನಮ್ಮ ಮನೆಗೆ ಪ. ಜಾಗು ಮಾಡದೆ ಹಿಡಿವರೊ ಕೇಳ್ ಮುನ್ನ ಭೋಗಿಸಿ ನಿನ್ನ ಸೆಳೆವರೊ ಮುನ್ನ 1 ಜಾರ ಚೋರನೆಂದು ಬಹುವಿಧದಿಂದ ನಾರಿಯರೆಲ್ಲ ದೂರುತಲಿಹರು ಮುನ್ನ ಸಾರಸಾಕ್ಷ ಕೃಷ್ಣ ಬಾರೆಲೊ ಮುನ್ನ ಸಾರಿ ಪೋಗಬೇಡವೊ ಏ ಚಿನ್ನ 2 ಹದ್ದಿಲ್ಲದ ಗೋಪೇರ ಗೊಡವ್ಯಾಕೊ ಸುದ್ದಿಯ ತರುವರೊ ನಿನ ಮೇಲೀಗದೂರಿ ಸದ್ದು ಮಾಡದೆ ಬಾ ಮುದ್ದು ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬಾ ಗೋಪತಿ ಗೋಪನೆ ಮನ್ಮನಕೆ | ತಡಮಾಡುವುದ್ಯಾಕೆಭೋಗಿ ಮದಾಪಹ | ಆಗಮ ವೇದ್ಯನೆ | ನಮಿಸುವೆ ತವಪದಕೆ ಪ ಯೋಗಿ ವರೇಣ್ಯಾ ಅ.ಪ. ನೀರಜ ಸಂಭವಮುರಾರಿಗಳಿಂದಲಿ ಆರಾಧಿಪ ಪದ 1 ನವನೀತ ಚೋರ | ಪಾವನ ಚರಿತ | ಸ್ವರತ ಅನವರತಭುವನೈಕ ವಂದ್ಯ ವಿಶೋಕದಾತ | ಸಮಅಧಿಕ ರಹಿತಅವನಿಜೆ ವಲ್ಲಭ | ತ್ರಿವಿಧರಿ ಗೋಸುಗವಿವಿಧ ರೂಪಂಗಳ | ತಾಳುವ ಖ್ಯಾತ 2 ಹಂಸ ಡಿಬಿಕ ಶಕಟಾರಿ ಮುರವೈರಿ | ಮುಷ್ಠಿಕಮಲ್ಲಾರಿಕಂಸಾರಿ ವತ್ಸಾರಿ ಪರಮ ಉದಾರಿ | ಬಾಬಾರೆಲೊ ಶೌರಿಶಿಂಶುಮಾರ ಸುರ ಸಂಶಯ ಹರಿಸಲು |ಸ್ವಾಂಶದಿ ಜನಿಸುತ ಭಕ್ತರುದ್ಧರಿಸಲು 3 ಕರುಣ ವನದಿ ಶರಣಾಗತ ಪರಿಪಾಲ || ಶಿರಹರ ಶಿಶುಪಾಲತರಳ ದೃವಾದಿಯ ಪೊರೆವುದು ತವಶೀಲ | ಪಾಲಿಸು ಶ್ರೀಲೋಲಕರಣ ನಿಯಾಮಕ ವರ್ಣ ವೇದ್ಯತವಚರಣ ಬಯಸುವೆ ಹೃದಯ ಸದನಕೇ 4 ತೋಂಡ ಬೋವ ಮಾಯಾ ಪಟಲ 5
--------------
ಗುರುಗೋವಿಂದವಿಠಲರು
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ ದಾರಿಯ ತಪ್ಪಿ ಪೋಗುವ ಧೀರ ಫೋರನ್ನ ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ ಊರಿನವೊಳಗೆ ಅವನ ಆಗಾ ದೂರ ನೋಡುವರೆ ದೋಷಗಳ ವಿಚಾರಮಾಡುವರೆ ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ 1 ಹಸಿದು ಪರರ ಕೇಳದ ದ್ವಿಜವರಿಯನ್ನ ಶಿಶುವಿನ ನೋಡಿ ದಯದಿಂದ ಕರದಿನ್ನು ಹಸಿದ್ಯಾಕೊ ಎಂದು ಪಾಕವ ಮಾಡಿ ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2 ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ- ಕುಲ ತರಳನನು ನೋಡಿ ಕೃಪೆಯಿಂದ ಸುರನದಿ ಜಲವನೀವೆನೆಂದು ಬ್ಯಾಗನೆ ದಿವ್ಯ ಕಲಶವ ತಂದು ಬಾರೆಲೊ ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ ತೊಳಿಯ ಕೊಡುವೆನೆಂದು ತಡವ ಮಾಡುವರೆ 3 ಸುಶರೀರ ತನುವನು ಮನದಲಿ ಬಯಸಿ ತಾ ಉಸರದ ಮುನಿತನಯನ ಕಂಡು ತಾವಾಗಿ ಕುಶಲವ ಕೇಳಿ, ದೇವತ ವೈದ್ಯ ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ ರಸವನು ಪೇಳಿ, ಪಸಿ ನಿನ್ನಲಿದ್ದಾ ಕಿಸರು ಪೋದರೆ ಕೊಡುವೆವೆಂದು ನಿಲುವರೆ 4 ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ ಕೀರ್ತಿಯ ನೋಡಿಕೊ, ವಾಸುದೇವವಿಠಲನ ಮೂರ್ತಿಯ ಭಜಕ ಭಕ್ತರಾಭೀಷ್ಟ ಪೂರ್ತಿಗೆ ಜನಕ ನಿನ್ನಯ ಗುಣ ಸ್ಫೂರ್ತಿಗೆ ಜನಕ, ನಿನ್ನಯ ಗುಣ ಸ್ಫೂರ್ತಿ ಉಳ್ಳನಕ ಪಾಪದ ಲೇಶ ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5
--------------
ವ್ಯಾಸತತ್ವಜ್ಞದಾಸರು
ಶ್ರೀಹರಿ ಮೂಜಗದೊಳು ನೀನು ತೇಜವುಳ್ಳವನಾಗಿ ಪ ಕಾಲದಿ ನಿನ್ನಯ ಮೇಲಿಹ ನಿರ್ಮಾಲ್ಯ ಮಾಲೆಯನೆಲ್ಲ ವಿಸರ್ಜಿಸಿ ತೊಳೆದು ನೀಲಮಾಣಿಕ ವಜ್ರಮಯವಾದ ಪೀಠದ ಮೇಲೆ ವಾಲಗವಾಗಿ ಲೀಲೆಯ ತೋರುತ1 ಮೊದಲು ಸಂಕಲ್ಪಿಸಿ ತುಳಸಿ ಶ್ರೀಗಂಧದಿ ಉದಕ ಶುದ್ಧವ ಮಾಡಿ ಅದರೊಳು ಬಳಿಕ ವಿಧಿಸಿಯೆ ಮತ್ತೇಳು ನದಿಯನುಚ್ಚರಿಸಲು ಒದಗಿ ಬಾರೆಲೊ ಕರಚರಣ ಮಜ್ಜನಕೀಗ 2 ಮಾನಸದಘ್ರ್ಯವು ಆಚಮನಗಳು ನಾನಾ ಪಂಚಾಮೃತ ಫಲವಭಿಷೇಕವು ಗಾನ ಸೂಕ್ತಗಳಿಂದ ಮಧುಪರ್ಕಾದಿಗಳು 3 ವಸ್ತ್ರವಾಭರಣವು ಯಜ್ಞಸೂತ್ರವ ತೊಡಿಸಿ ಚಿತ್ರವಾಗಿಹ ಗಂಧ ಅಕ್ಷತೆವಿಡಿಸಿ ಪತ್ರಪುಷ್ಪವು ಶ್ರೀತುಳಸಿ ಮಾಲೆಗಳಿಂದ ಸ್ತೋತ್ರವು ಸಾಹಸ್ರನಾಮಗಳಾಯಿತು 4 ಧೂಪಮಾಧ್ರೂಪಯ ದೀಪದ ದರುಶನವು ಆದಷ್ಟು ಸರ್ವೋಪಚಾರಗಳು ಕದಳಿ ನಾರಿಕೇಳÀವು ಪರಿ ನೈವೇದ್ಯ ದಯಾಪರಮೂರ್ತಿ 5 ಆಗರದೊಳು ಬೆಳೆದ ನಾಗವಲ್ಲಿಯ ದಳ ಪೂಗಿಯಫಲ ಸಹ ನಾಗಶಯನಗಿಟ್ಟು ಬೇಗದಿ ಮಂಗಳ ಪದಗಳ ಹೇಳಿ ಲೇ ಸಾಗಿ ಎತ್ತುವ ಅಮೋಘದಾರತಿಗಳ 6 ಮಾಡಿದ ಪೂಜೆಯ ನೋಡಿ ಕರುಣದಿಂದ ಬೇಡಿದಿಷ್ಟವನೀಯೊ ರೂಢಿಯ ಒಡೆಯ ಪಾಡಿ ಪೊಗಳುವೆ ನಿನ್ನ ಪಂಥ ಬೇಡೆನ್ನೊಳು ಅನುದಿನ ವರಾಹ ತಿಮ್ಮಪ್ಪ 7
--------------
ವರಹತಿಮ್ಮಪ್ಪ
ಹನುಮ ಭೀಮ ಮುನಿಪ ಎನ್ನ ಮನಕೆ ಬಾರೆಲೊ | ಮನಸಿಜ ಹರ ಜನಕ ಭಾವಿ ವನಜಾಸನ ಘನ ಮಹಿಮನೆ ಪ ಜಲಧಿ ಧಾಂಟ ಇಳಿಜಾತೆಗೆ ಸಲಿಸಿ ಮೋದ ಗೊಳಿಸಿದ ಮಹ ಬಲಶಾಲಿಯೆ 1 ಕಂತು ವಿತನೇಕಾಂತ ಭಕುತ ಕುಂತಿ ಜಾತ ದಂತಿಪುರದ ಕಾಂತೆಗೆ ಕೃತಾಂತನಾದ ಶಾಂತೆನೆ ಮಹಂತರೊಡೆಯ 2 ಶಾಮಸುಂದರವಿಠಲ ಜಗಕೆ ಶರಧಿ ಭೂಮಿ ವಿಬುಧ ಸ್ತೋಮನಮಿತ ಕಾಮಿತ ಪ್ರದ 3
--------------
ಶಾಮಸುಂದರ ವಿಠಲ