ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿನಲ್ಲ ಕೇಳುತಲೆನ ಸೊಲ್ಲ ಬಾರೊ ಬಾರೆನುತಲಿ ಭಕ್ತವತ್ಸಲನೆ ಬಾರಿ ಬಾರಿಗೆ ನಿನ್ನ ಬೇಡಿಕೊಂಬುವೆನು ಪ ಕಡಲೊಳು ಮುಣಿಗಜಗ್ವೇದವ ತರುವ ಕ್ಷೀರಾಂಬುಧಿ ಕಡೆವ ಕಡು ಕ್ರೋಡರೂಪದಿ ಬೇರನೆ ಕಡಿವ ಅಸುರನ ಒಡಲೊಡೆವ ಬಡವನಾಗ್ಯಜ್ಞ ಶಾಲೆಗೆ ನಡೆವ ಕೊಡಲಿಯನೆ ಪಿಡಿವ ಹೊಡೆದ್ಹತ್ತು ಶಿರ ಕಾಳಿ ಮಡುವ್ಹಾರಿ ತ್ರಿಪುರರ ಮಡದೇರನ್ವೊಲಿಸ್ವಾಜಿ ಹಿಡಿದೇರೋಡಿಸುವನೆ 1 ಕಣ್ಣು ತೆರೆದೆವೆಯಿಕ್ಕದಲೆ ನೋಡಿ ಬೆನ್ನಲಿ ಗಿರಿ ಹೂಡಿ ಮಣ್ಣುಕೆದರುತಲವನ ದಾಡೆ ಕರುಳ್ಹಾರವ ಮಾಡಿ ಸಣ್ಣ ತ್ರಿಪಾದ ದಾನವ ಬೇಡಿ ಮನ್ನಿಸಿ ತಪ ಮಾಡಿ ಅ- ದಧಿ ಬೆಣ್ಣೆಗಳನು ಕದ್ದು ಹೆಣ್ಣುಗಳನೆ ಕೆಡಿಸ್ಹಯವನ್ನೇರಿ ಮೆರೆವನೆ 2 ನಾರುತ್ತ ಮೈಯ ನೀರೊಳಗಿರುವ ಮಂ- ದಾರವನ್ಹೊರುವ ಕ್ವಾರೆ (ಕೋರೆ?)ಯಲಿ ಧರೆಯ ಮ್ಯಾಲಕೆ ತರುವ ಕರಿ (ಕರೆಯೆ?) ಕಂಬದಿ ಬರುವ ಘೋರ ತ್ರಿವಿಕ್ರಮನಾಗಿ ತೋರುವ ತಾಯಿಯ ಶಿರ ತರಿವ ನಾರ್ವಸ್ತ್ರಬಿಗಿದುಟ್ಟ ಭೀಮೇಶಕೃಷ್ಣನೆ ಭಂಗ ಮಾಡಿ ತುರುಗವೇರಿ3
--------------
ಹರಪನಹಳ್ಳಿಭೀಮವ್ವ
ಸಂಪ್ರದಾಯ ಶೃಂಗಾರದಂಥ ಶುಭಾಂಗಿ ನೀ ಏಳು ಕಂಗಳ ನೋಟದ ಕಡು ಚೆಲ್ವೆ ನಿನ್ನ ಪಾ- ದಂಗಳಿಗೆರಗುವೆ ಎನುತ ಮಾಲಕ್ಷುಮಿ(ಯ?) ಅಂಗನೆಯರ್ಹಸೆಗೆ ಕರೆದರು 1 ಅಜನಜನಕನರಗಿಳಿಯೆ ನೀ ಏಳು ಪದಮನಾಭನ ಪಟ್ಟದರಸಿ ನೀ ಏಳು ತ್ರಿಜಗಭೂಷಿತನೆದೆ ಮ್ಯಾಲೆ ಹೊಂದಿರುವಂಥ ಮದಗಜಗಮನೆ ಮಾಲಕ್ಷ್ಮಿ ಬಾರೆನುತಲಿ ಮುದದಿಂದಲಿ ಹಸೆಗೆ ಕರೆದರು 2 ಸೋಮವದನೆ ಸುಗುಣೆ ಜಾಣೆ ನೀ ಏಳು ಕೋಮಲ ಕೋಕಿಲವಾಣಿ ನೀ ಏಳು ಹೇಮಮಾಣಿಕ್ಯ ನಾಗವೇಣಿಯೆ ನಮ್ಮ ಭೀಮೇಶಕೃಷ್ಣನ ನಿಜರಾಣಿ ಮಾಲಕ್ಷುಮಿ ಪಟ್ಟದರಾಣಿ ಬಾ ಹಸೆಗೆ ಕರೆದರು 3
--------------
ಹರಪನಹಳ್ಳಿಭೀಮವ್ವ
ಏಳಿ ಮೊಸರ ಕಡೆಯಿರೇಳಿ-ಗೋ-|ಪಾಲ ಚೂಡಾಮಣಿ ಏಳದ ಮುನ್ನ ಪಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|ಕುಂದನ ಪಾಡುತ ಚದುರೆಯರೆಲ್ಲ 1ಹೊಂಗೊಡ ಬೆಳಗಿಟ್ಟು ಪೊಸಮೊಸರನೆತುಂಬಿ|ರಂಗನೀಲದ ಕಡೆಗೋಲನಿಟ್ಟು ||ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |ರಂಗನ ಪಾಡುತ ಚದುರೆಯರೆಲ್ಲ 2ಬಡನಡು ಬಳುಕುತ ಕುಚಗಳಲ್ಲಾಡುತ |ಕಡಗ-ಕಂಕಣ ಝಣಝಣರೆನ್ನುತ ||ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|ಲ್ಗಡಲೊಡೆಯನ ಪಾಡುತ ಚದುರೆಯರು 3ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |ಹಸಿದು ಆಕಳಿಸಿ ಬಾಯಾರುತಲಿ ||ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |ಶಶಿವದನನಿಗೆ ಬೆಣ್ಣೆಯ ನೀಡಲೋಸುಗ 4ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |ಪ್ರಾಣಪದಕ ಕೃಷ್ಣನಿಗೆ ಕೊಡಲು ||ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||ಜಾಣ ಪುರಂದರವಿಠಲನಪ್ಪಲುಗೋಪಿ5ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |ತಟ್ಟೆಯೊಳಾರತಿಗಳ ಬೆಳಗಿ ||ಥಟ್ಟನೆ ಉಪ್ಪು-ಬೇವುಗಳನಿವಾಳಿಸಿ|ತೊಟ್ಟಿಲೊಳಿಟ್ಟು ಮುದ್ದಾಡುವಳೊ 6ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |ಗುಮ್ಮ ಬಂದಿದೆ ಸುಮ್ಮನಿರು ಎನುತ ||ಅಮ್ಮಿಯನೀಯುತ ಅಮರರನಾಳ್ದನ |ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ 7ಏಸೊ ಬೊಮ್ಮಾಂಡವ ರೋಮದೊಳಿರಿಸಿದ |ವಾಸುದೇವನನೆತ್ತಿ ಕೊಂಬುವಳೊ ||ನಾಶರಹಿತನಾಯುಷ್ಯ ಹೆಚ್ಚಲೆಂದು |ರಾಶಿದೈವಕೆ ತಾ ಬೇಡಿಕೊಂಬುವಳೊ 8ಮಾಧವಬಾ ಮದುಸೂದನ ಬಾ ಬ್ರ-|ಹ್ಮಾದಿವಂದಿತಹರಿಬಾ ಯೆನುತ ||ಆದಿ ಮೂರುತಿ ಶ್ರೀ ಪುರಂದರವಿಠಲನ |ಆದರದಲಿ ಮುದ್ದಾಡುವಳೊ 9
--------------
ಪುರಂದರದಾಸರು