ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದರೇನಾಯಿತು ಹರಿ ಎನ್ನ ಪೊರೆಯಾ ಈ ಧರೆಯೊಳಾರು ಮಾಡದ ದೋಷ ನಾ ಮಾಡಲಿಲ್ಲಾ ಪ ತಾರಾಪತಿಯಂತೆ ಗುರುದ್ರೋಹ ಮಾಡಿದವನಲ್ಲ ವಾರಿಜೋದ್ಬವನಂತೆ ತಪ್ಪಲಿಲ್ಲಾ ಮಾರ ಮಹಿಮನಂತೆ ನಾ ಮಹಿಮನೆಂದು ಹೇಳಲಿಲ್ಲ ಬಾರಿಬಾರಿಗು ನಿನ್ನ ಭಜಿಸುವದೊಂದೆ 1 ತಂದೆ ಮಾತನು ಕೇಳಿ ತಾಯಿ ದ್ರೋಹ ಮಾಡಲಿಲ್ಲ ಬಂಧು ಬಳಗ ದ್ವೇಷ ಮಾಡಿ ಬಾಧಿಸಲಿಲ್ಲ ಅಂಡಜಾಮಿಳನಂತೆ ಅತಿದ್ರೋಹ ಮಾಡಲಿಲ್ಲ ಚಂದದಿಂದಲಿ ನಿಮ್ಮ ಸ್ಮರಿಸುವದೊಂದೆ 2 ಅತಿ ಘಂಟಾಕರ್ಣನಂತೆ ಕರ್ಣಘಂಟೆ ಶಬ್ಧವಿಲ್ಲ ಹಿತದಿ --------ಬ್ರಹ್ಮತ್ಯನಿಲ್ಲ ಸತತ ನೀನೆ ಎನಗೆ ಗತಿಯೆಂದು ಇರುವುದೊಂದೆವಿತರಣಾ ಕೊಂಡರಿಯೆ ವೀರ 'ಹೊನ್ನವಿಠಲಾ’ 3
--------------
ಹೆನ್ನೆರಂಗದಾಸರು
ಶ್ರೀ ಲಕ್ಷ್ಮೀಸ್ತುತಿ ನಿವಾಸಿನಿ ಸಿರಿಯೆ ಪ ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ ತೋರು ನಮ್ಮ ಮನಗೆ ಅ.ಪ ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು ಆಕಳು ಕರುವಿನ ಸ್ವೀಕರಿಸುವಪರಿ ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ 1 ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ ಮಗನಪ ರಾಧವ ತೆಗೆದೆಣೆಸದಲೆ ಲಗು ಬಗೆಯಿಂದಲಿ ಪನ್ನಗವೇಣಿ2 ಕಡೆಗೆ ನಮ್ಮನೆ ವಾಸ ಒಡೆಯ 'ಅನಂತಾದ್ರೀಶ' ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು ರೂಢಿಗುಚಿತವಿದು ನಡೆ ನಮ್ಮ ಮನೆಗೆ 3
--------------
ಅನಂತಾದ್ರೀಶರು
ಸರಸಿಜಾಲಯೆ ನಿಲಯೆ ಪಸ್ಥಳದಲ್ಲಿ ನೆಲಸಿ ಸಜ್ಜನರ ರಕ್ಷಕಳೆಂದು ಅ.ಪಕ್ಷೀರಸಾಗರಜಾತೆ ಮಾರನಯ್ಯನ ಪ್ರೀತೆಸಾರಸದಳನೇತ್ರೆಮಾರಮಣನ ಮನಸಾರ ಸೇವಿಪ ಮುದ್ದುಕೀರವಾಣಿಯ ಭಕ್ತಸ್ತೋಮ ರಕ್ಷಕಳೆಂದು 1ಅಂಬುಧಿಶಯನ ಪೀತಾಂಬರಧಾರಿಯಶಂಖು ಚಕ್ರಾಂಕಿತಹರಿಶೌರಿಯಶಂಭರಾರಿಯ ಪಿತನ ನಂಬಿಸೇವಿಪ ಜಗ-ದಂಬ ನಿನ್ನಯ ಪಾದಾಂಬುಜಕ್ಕೆರಗುತ 2ಪದ್ಮನಾಭನ ರಾಣಿ ಪದ್ಮ ಸಂಭವೆ ದೇವಿಪದ್ಮಾಕ್ಷಿ ಪದ್ಮ ಪಾಣಿಯೆ ಸುಂದರಿಪದ್ಮಾಸನನ ಮಾತೆ ಪದ್ಮಮುಖಿಯೆ ಹೃ-ತ್ಪದ್ಮದಿ ಹರಿಪಾದ ಪದ್ಮವ ತೋರೆಂದು 3ಸಾರಸಾಕ್ಷಿಯೆ ಹರಿಯ ಆರಾಧಿಸುವ ಜನರ-ಪಾರದು:ಖವನೀಗಿಪೊರೆವೆಯೆಂದುಬಾರಿಬಾರಿಗು ನಿನ್ನಚಾರುದರ್ಶನವಿತ್ತುಕೋರಿದ ವರಗಳ ಬೀರಿ ಭಕ್ತರ ಕಾಯೆ 4ಕರುಣದಿ ಭಕುತರ ಕರೆದು ಕಾಪಾಡುವಬಿರುದು ನಿನ್ನದು ತಾಯೆ ತ್ವರಿತದಿ ಕಾಯೆಕರುಣಿಸೆ ಕಮಲನಾಭ ವಿಠ್ಠಲನ ರಾಣಿಮರೆಯದೆ ಹರಿಯ ಧ್ಯಾನವ ಕೊಟ್ಟು ಸಲಹೆಂದು 5
--------------
ನಿಡಗುರುಕಿ ಜೀವೂಬಾಯಿ