ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಬೋಧ ಪರಮಸುಖಕಾರಿ ಬಾರಿ ಬಾರಿಗೂ ಕೇಳೈ ಭವರೋಗೀ ಪ ಬಿಡು ಬಾಳಿನ ಭ್ರಮೆಯ ಸಂಸಾರಿ ದುಃಖದ ಬಾಳಿದು ವಿನಾಶಕಾರಿ ಇದರೊಳು ಸಿಗುತಿಹ ಸುಖವು ವಿಕಾರಿ ತಿಳಿಯೈ ಮುಕ್ತನಾಗಲಿದು ದಾರಿ 1 ಆರಿ ನಿನ್ನಯ ನಿಜವಾ ಸುವಿಚಾರಿ ಅರಿವೇ ನಿನ್ನಯ ಈ ಭವತಾರಿ ಬೇರಾವುದು ನಿನಗಾಗದು ದಾರಿ ಈ ನುಡಿ ಪೇಳುತಿಹುದು ಶೃತಿಸಾರಿ 2 ಜಾಗರಾ ಕನಸು ನಿದ್ರೆಯ ಮೀರಿ ಅಮರವಾಗಿರುವ ಪದವನೆ ತೋರಿ ಅದೆ ನೀನೆನ್ನುತ ಪರಿಪರಿ ಸಾರಿ ಶಂಕರಭೋಧವಿದುವೆ ಭವಹಾರಿ3
--------------
ಶಂಕರಭಟ್ಟ ಅಗ್ನಿಹೋತ್ರಿ
ನಾರಾಯಣ ನಿನ್ನ ಚರಣ ಸೇವೆಯ ಬಿಟ್ಟು ಸಾರಸಾಕ್ಷನೆ ಪ್ರಾಣದಿರಲಾರೆ ಕ್ಷಣವೂ ಪ ದಾರಿಯೆನಗಿದೊಂದೇ ತೊರ್ಪದು ಸುಖನಿಧಿ ಬಾರಿಬಾರಿಗೂ ಹರಿ ದ್ಯಾನಾನಂದದೊಳಿಗೆ ಅ.ಪ ಅನ್ನವಸ್ತ್ರಂಗಳಿಗಾಗಿ ದುಡಿವದೊಂದು ಚೆನ್ನ ಪುತ್ರರ ರಕ್ಷಣೆಯೊಂದೆಡೆ ತನ್ನ ಮರ್ಯಾದೆ ಕುಂದುಗಳೆಂಬೊ ವ್ಯಸನದಿ ಭಿನ್ನಿಸಿ ತಾಪತ್ರಯ ಪಡುತಿರುವಿಲ್ಲಿ 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಪ್ರೇಮ ಬಾಂಧವರಾಗೆನ್ನನಪ್ಪಿಹರೋ ಸ್ವಾಮಿ ನೀಯೆನ್ನನವರ ಧಾಳಿಗಿಡದಂತೆ ಸಾಮಜವರದ ಸಲಹೆಂದು ಸಂತೋಷದಿ 2 ಭಾಗೀರತಿಪಿತ ಭಾಗವತಪ್ರೀತ ಯೋಗಿಜನಂಗಳೊಳತಿ ಹಿತನೇ ಸಾಗರಶಯನನೆ ಭೋಗಿಗಳ ಪುಣ್ಯನೆ ಬಾಗುವ ಶರಣರ ಬಹುಭಾಗ್ಯನೇ 3 ನಾನಿಲ್ಲಿಗೆ ಬಂದ ಕಾರಣ ಕಾಣೆನೋ ದೀನಪಾಲಕ ಕಾರ್ಯಮಾಡಿಸೋಯನ್ನಿಂ ಏನಾದರು ಮಾಡು ತಪ್ಪಹೊರಿಸಬೇಡ ಶ್ರೀನಿಧಿ ಹೆಜ್ಜಾಜಿಕೇಶವ ಪಾಲಿಸು 4
--------------
ಶಾಮಶರ್ಮರು
ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ ಸ್ವಾಮಿ ಹಯವದನರಾಯಾ ಪ ಬಾರಿಬಾರಿಗೂ ಈತನ ಮಂದಿರದಲಿ ನಿನ್ನ ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ. ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು ಸಲೆ ಮೀಸಲವ ಮಾಡೋ ದೇವರ ದಯಾಳೊ1 ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ ಶ್ರೀವತ್ಸಲಾಂಛನನೇ2 ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ ಬಿಗನು ಅಘನಾಶÀನವೆಂದೊ ನಾನಿಂದೂ ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ ಹೀಗೆ ಮುನಿಸೋರೇನೋ ಶ್ರೀಹರೆ ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ 3
--------------
ಮಹಾನಿಥಿವಿಠಲ
ಯಾರು ಇಲ್ಲ ಎನಗೆ ನಿನ್ನ ಹೊರತು ವಾರಿಜಾಲಯೆ ತಾಯೆ ಪ ಪಾರತೋರೆ ಈಸಲಾರೆ ಅ.ಪ ಈ ದೇಹದ ತಂದೆ ತಾಯ್ಗಳು ಪೋದರು ಮೊದಲೆ ಆದರಿಸುವರಿನ್ಯಾರು ಕಾದುಕೋ ಕೈಬಿಡದಿರು ಕರುಣದಿ 1 ಪಾರಂಪರ್ಯದಿ ಜೀವರು ನಿನಗೆ ಪುತ್ರರಲ್ಲವೆ ಬಾರಿ ಬಾರಿಗೂ ಮೊರೆಯಿಡುವೆ ಭಕ್ತಾರ್ತಿಹಾರಿಣಿ ರುಕ್ಮಿಣಿ2 ವೆಂಕಟರಮಣನ ರಾಣೀ ವಿಶ್ವಜನನೀ ವಿವಿಧ ರೂಪಿಣಿ 3 ಆನಂದದಾಯಕೆ ನೀನು ಜಾನಕಿದೇವಿ ಕೈಬಿಡದಿರು 4 ಅರಿತು ಅರಿಯದೆ ಮಾಡಿದ ದುರಿತವ ಕಳೆಯಮ್ಮ ಪರದೇಶಿ ಅನಾಥ ನಾನು ಗುರುರಾಮ ವಿಠಲನರ್ಧಾಂಗಿಯೆ5
--------------
ಗುರುರಾಮವಿಠಲ