ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ಪ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಹಾದರಹಳು ನಾರಿ | ಮಾದಿಗÀನ ಪೋದಂತೆ 1 ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ2 ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ ಅಲ್ಲಲ್ಲಿ ಕುಶಲನಾಗಿ | ಅಮೃತ | ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ 3 ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ | ಬಿಡು ಸಂಸಾರವಿದು ಕಡಿಗೆ ಭವದ | ಮಡವು ಸಿದ್ಧವೆಂದು ನುಡಿವೆನೊ ಪರರಿಗೆ | ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ 4 ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ | ಯುಕುತಿ ಬಾಯಲಿ ನಾರಕಕೆ ಸಾಧನಾ | ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ | ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ 5
--------------
ವಿಜಯದಾಸ
ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ ಪ ಇಲ್ಲವೋ ಕಾಣೋ ಎಂದಿಗಾದರು ಮರುಳೆ ಅ.ಪ ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಲನ್ನೀಗ ಬಳಿವ ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರುವಾಗುವುದು ಉರಿ ಮಂಜು ಆಗುವುದು | ಕರಿ ನಾಯಿಯಾಗುವುದು ಕಂಡವರಿಗೆ | ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು | ನರಹರಿಯ ನಾಮಗಳ ನಂಬಿ ಭಜಿಪರಿಗೆ 2 ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ | ಕ್ಷಣದೊಳಗೆ ಪೋದಂತೆ ಕಾಣಿಸುವುದು | ಘನ ಪಾಷಾಣಗಳು ತೃಣಸಮವು ಎನಿಸುವುವು | ವನಜಾಕ್ಷನ ಕೃಪೆಯ ಪಡೆದ ದಾಸರಿಗೆ 3 ಕ್ಷುಧೆ ತೃಷೆಯಾಗುದು ಕ್ಷುದ್ರ ಸಂಗವಾಗದು | ಪದೆಪದೆಗೆ ರೋಗಗಳು ಬೆನ್ನಟ್ಟವು | ಉದಯಾಸ್ತಮಾನಗಳೆಂಬ ಭಯ ಸುಳಿಯದು | ಪದಮನಾಭನ ಕೃಪೆಯ ಪಡೆದ ದಾಸರಿಗೆ 4 ಬಾರವು ಭಯಗಳು ಬಂದರೂ ನಿಲ್ಲವು | ಹಾರಿ ಹೋಗುವುವು ದಶ ದಿಕ್ಕುಗಳಿಗೆ | ಘೋರ ದುರಿತಾರಿ ಶ್ರೀ ವಿಜಯವಿಠ್ಠಲನಂಘ್ರಿ | ಸೇರಿದ ಜನರಿಗೆ ಇನಿತು ಭಯವುಂಟೆ5
--------------
ವಿಜಯದಾಸ
ಧನ್ಯನು ಶಚಿಪತಿ ಧನ್ಯಳು ಶಚಿಯು ಅ.ಪ ಚಂದ್ರನು ತನ್ನಯ ಸುಂದರ ಬಿಂಬದಿ ನಂದನ ವನದಲಾನಂದಪಡುತಿಹನು 1 ಮಂದಮಾರುತ ಸುಮಗಂಧವ ಬೀರುತ ಮಂದದಿಂದಲಿ ಸುಧೆ ಬಿಂದುಗಳೆಸವುದು 2 ಮಣಿಮಯ ತರುಗಳು ಎಣಿಕೆಗೆ ಬಾರವು ಕುಣಿಯುತಲಿದೆ ಎನ್ನ ಮನದಭಿಲಾಷೆಯು * 3 (ನಂದನವನವನ್ನು ಕಂಡಾಗ ಸತ್ಯಭಾಮೆಯ ಸಂತೋಷ)
--------------
ವಿದ್ಯಾಪ್ರಸನ್ನತೀರ್ಥರು
ಭಕುತರಿಗಾಗಿ ನೀ ಬಡುವ ಕಷ್ಟಗಳು ಅಕಟ ಪೇಳಲಳವೆ ( ನೋಡಲಳವೆ) ಲಕುಮಿ ಪತಿಯೆ ಯಾತಕೆ ವೃಥಾನಿಕರಕೆ ಸುಖವೀವೆಕಾವೆ ಪ ಮಂದಿಮನ ವಲಿಸಿ ಮದುವೆ ನೀನು ಮ ತ್ತೊಂದು ಮಾಡಿಕೊಳುತ್ಯಾ ಅಂದಣಾದಿ ಐಶ್ವರ್ಯವನ್ನು ಪರರಿಂದ ಕೇಳಿಕೊಳುತ್ಯಾ ನಿಂದೆ ಮಾಡುವರೆಂಬೊ ಭಯದಿ ಅವರ್ಹಿಂದೆ ಹಿಂದೆ ಇರುತ್ಯಾ ಅಂದವಾದ ಆಟಗಳೊಳಗೆ ಇದುವಂದು ಎನುತ್ಯಾದೇವ 1 ಸಡಗರದಲಿ ಕರಪಿಡಿದು ಕಾಯ್ದೆ ನೀ ಹುಡುಗರೀರ್ವರನ್ನು ಮಡುವಿನೊಳಗೆ ಆ ಮಕರಿಯಿಂದ ಕಾಲ್ಹಿಡಿಸಿಕೊಂಡವನ್ನ ಮಡದಿಗಂತು ಗಡಿತಡಿಯದೆ ನೀಡಿದಿ ಉಡುಗೆ ಅಗಣಿತವನ್ನು ಕಡಿಗೆ ನಿನ್ನ ಕರದೊಂದು ದಿನಾದರು ಬಡಿಶ್ಯಾರೆ ಸುಖವನ್ನು ಏನು 2 ಏನು ತಪ್ಪು ನಿನ್ನವರು ಮಾಡಿದರು ಕಾಣಬಾರವು ನಿನಗೆ ವೈರಿ ಪರಪ್ರಾಣಹಾರಿಗಳ ಪೊರೆದು ಕರುಣಿ ಸುರಧೇನು ಬಾರೊ ಬ್ಯಾಗ ಮಾನಸ ಮಂದಿರಕೆ ಈಗ 3
--------------
ಅಸ್ಕಿಹಾಳ ಗೋವಿಂದ
ಮರೆಯದಿರು ಮರೆಯದಿರು ಹರಿಯನು ಪಾಪಿ ಪ ಮರೆಯದಿರೆ ನೀ ಮೈಕುಂಠಕೆ ಪೋಪಿಅ.ಪ. ಮೂರು ದಿನ ಬಾಳ್ವ ಸಂಸಾರವ ನೋಡಿ ಬಾರಿ ಹರುಷಿಸದಿರು ನೀನೆಲೊ ಖೋಡಿ 1 ಮತಿವಂತನಾದರೆ ಹರಿಪುರಕೆ ಪೋದಿ ಸತಿಸುತರ ನಂಬೆ ನಿನ ಬಾಯಲಿ ಬೂದಿ 2 ಸಿರಿಯ ನಂಬಿದ ದುರ್ಯೋಧನ ಬಿದ್ದ ಹರಿಯ ನಂಬಿದ ಭೀಮಸೇನನು ಗೆದ್ದ 3 ಆನೆ ಕುದುರೆ ರಥ ಭಂಡಾರವು ನಿಂದೆ ಪ್ರಾಣ ಹೋಗುವಾಗವು ಬಾರವು ಹಿಂದೆ 4 ರಂಗೇಶವಿಠಲನ ನಂಬಿದವ ಜಾಣ ಅಂಗನೆಯರ ನಂಬಿದ ಮನುಜನೆ ಕೋಣ 5
--------------
ರಂಗೇಶವಿಠಲದಾಸರು
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ 2 ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ ಕ್ಷಣದೊಳಗೆ ಪೋದಂತೆ ಕಾಣಿಸುವದು || ಘನ ಪಾಷಾಣಗಳು ತೃಣ ಸಮವು ಯೆನಿಸುವವು ವನಜಾಕ್ಷನ ಕೃಪೆಯ ಪಡದ ದಾಸರಿಗೆ 3 ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು | ಪದೇ ಪದೆಗೆ ರೋಗಗಳು ಬೆನ್ನಟ್ಟವು || ಉದಯಾಸ್ತಮಾನವೆಂಬೋ ಭಯವು ಸುಳಿಯದು | ಪದುಮನಾಭನ ಕೃಪೆಯ ಪಡೆದ ದಾಸರಿಗೆ4 ಬಾರವು ಭಯಗಳು ಬಂದರು ನಿಲ್ಲವು | ಹಾರಿ ಹೋಗುವವು ದಶದಿಶಗಳಿಗೆ || ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ | ಸೇರಿದಾ ಜನರಿಗೆ ಇನಿತಾಹುದುಂಟೇ 5
--------------
ವಿಜಯದಾಸ