ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರನ್ಯಾತಕ ಯದು ವೀರಾ|ಪದಾಂಬು ಜವದೋರಾ| ದಯರಸವಾಬೀರಾ| ಸಾರಿದವರಿಗಿನ್ನುದರಾವಾಗಿರಾ ಧೀರಾ ಪ ಮಂದ ಮುಗುದೆಯು ನಾನೆಂದು ಅರಿತು ಮೊದಲಿಂದು| ಕೈಯ್ಯ ಪಿಡಿದು ಬಂದು| ಕುಂದಾಲಿಸುವ ದಯಸಿಂಧು|ಉಚಿತ ವೇನಿಂದು 1 ಎನ್ನ ಬಿನ್ನಹ ಹೇಳಲೇ ಜಾಣೇ| ತಾಪಕೌಷಧಕಾಣೆ| ಕ್ಷಣಯುಗವ ನಿನ್ನಾಣೆ| ಮನ್ನಿಸಿ ತಂದು ತೋರಿನ್ನೆನೆ ಬಾರೇ ಪ್ರವೀಣೇ 2 ಶರಣ ಹೊಕ್ಕವರೆಂದು ಮರೆಯಾ|ನೆಂಬ ಮಾತಿದು ಖರೆಯಾ ಬಂದು ಕೂಡಿದ ತ್ವರಿಯಾ| ಗುರು ಮಹಿಪತಿ ಸ್ವಾಮಿಚರಿಯಾ ಬೊಮ್ಮತಾನರಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರನ್ಯಾತಕೆ ಕೃಷ್ಣ ಬಾರನ್ಯಾತಕೆ ಪ ಹರಿಯ ಮನಕೆ ಹರುಷಪಡಿಸಿ ಹರಿಯ ಕರೆಸಿ ಮನದೊಳಿರಿಸಿ ಹೊರಗೆ ಬಿಡರೆಂಬೊ ಭಯಕೆ ಮರೆಯೊಳಿದ್ದುಕಾಲ ಕಳೆಯುವ 1 ಮದಗಜಗಮನೆಯರೆಲ್ಲ ಮದನಕದನ ದೊಳಗೆ ಸೋಲಿಸಿ ಮುದದಿ ಎನ್ನಬಿಡದೆ ಮನೆಯೊಳು ಸದರದಿಂದ ನೋಡುವರೆಂದು 2 ಆಣಿ ಮುತ್ತಿನ ಮಾತನಾಡಿ ಜಾಣ ಪ್ರಾಣನಾಥ ವಿಠಲನ ವಿನಯದಿಂದ ಕರೆದು ತಂದರೆ ವನಜಮುಖಿಯೆ ಹರುಷ ಪಡುವೆ 3
--------------
ಬಾಗೇಪಲ್ಲಿ ಶೇಷದಾಸರು
ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಪ. ತೇಜಿಯನೇರಿ ಮೆರೆವನ ಅ.ಪ. ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ ಎನ್ನ ಪ್ರೇಮನ 1 ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ 2 ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ3
--------------
ಹೆಳವನಕಟ್ಟೆ ಗಿರಿಯಮ್ಮ
ರಂಗಬಾರನ್ಯಾತಕೆ ಸಖಿಯೆ ಮುದ್ದು ಪ ಶರಧಿಯ ಪೊಕ್ಕನೇನೆ ಸುರರೆಲ್ಲರು ಕೂಡಿ ಗಿರಿಯ ಬೆನ್ನಾಲಿ ಅವರು ಪೊರಿಸಿದರೇನೆ 1 ಧರೆಯನೆತ್ತಲು ಪೋಗಿ ನರಹರಿಯಾದನೇನೇ ಗರುವರಹಿತ ಬ್ರಹ್ಮಚಾರಿಯಾದನೇನು 2 ಪರಶುಪಿಡಿದು ಕ್ಷತ್ರಿಯರ ಸವರುವೆನೆಂದು ಗಿರಿವನಗಳಲಿ ತಾನು ಚರಿಸುತಲಿಹನೇನೇ 3 ಸ್ಮರನ ಪಿತನು ತಾನು ನಾರಿ ಪಾಂಚಾಲೆಯ ಮೊರೆಯ ಕೇಳುತ ಭರದಿ ಸಾರಿದನೇನೆ 4 ಮಾನವ ತಾ ಸೂರೆಗೊಳ್ಳಲು ತೇಜಿ ಏರಿ ಪೋದನೇನೆ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ಬಾರನ್ಯಾತಕೆ ವಾರಿಜಾನನೆ ಶ್ರೀಮಾರಜನಕಸಕಲ ಸುಖಕೆ ಕಾರಣನು ಕರುಣಿಸಿ ತಾನೆಪ.ಭುವನೇಶನಿನಿಯಳಣುಗ ತಾ ಪಿಡಿದು ಜರಿದ ಬಲಹಗೆಹ್ಯಾವಿಲೆಳೆದವನೊಳು ಕಾದಿ ತಾವೊಲಿದ ದೊರೆಯ ನಮಿಸಿಭಾವಕದಿದು ಇಷ್ಟವ ಪಡೆದನ ಜನನಿಸುತರಜೀವಕೆಡರು ಬರಲಿ ಕಳಿದನೆ ರಂಧ್ರ ಪೊಳಲದೇವ ಭಗಿನಿ ತುತಿಯ ಕೇಳ್ದನೆಇಂದುವದನೆ1ಹರಿಪದಸ್ಥನೆರೆಯನಿಂದ ಹರುಷದೊರೆದ ಪುರುಷನುಗ್ರಕರಿಯ ಮೈಯು ಬರಲಿ ಕಳೆದ ನರಟುನುಳ್ಳವನು ಭುವಿಲಿಹರಗೊಲಿಸಿ ಎಬಡ ಗಡ ಹೆಣ್ಣಿನ ಒಡಲ ಪೊಡೆಯುಉರಿಯಲರಿದ ಸಿರಿಯವರದನೆ ಬಾಳರುಚಿಯುಳ್ಹರಿಯನಟ್ಟಿಜವದಿಕಾಯ್ದನೆಕುಂದರದನೆ2ಭಾರಮಣನ ಅಗ್ರಜಳ ಕಿಶೋರಬಾಣಪ್ರಿಯಜನವತಾರನರಮನೆಗೊಲಿದು ವಿಷದ್ವಿಜನ್ನ ಧ್ವಜ ಕರೆದರೆಬಾರದೇನೆ ಮೂಗಮುರಿವನೆ ತನ್ನ ನಂಬಿಸಾರಿದವರ ಮನದೊಳಿರುವನೆ ಪ್ರಸನ್ನವೆಂಕಟಧೀರನೊಬ್ಬ ಜಗಕೆ ಚೆಲುವನೆ ಭಾಮಿನಿ 3
--------------
ಪ್ರಸನ್ನವೆಂಕಟದಾಸರು