ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯ ಬಾರದ್ಯಾಕೊ ರಾಘವಾ ಪ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ 1 ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ 2 ಸರ್ಪಶಯನನೆ ಸಾರ್ವಭೌಮನೆ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ 3
--------------
ವಿಜಯದಾಸ
ಬಾರದ್ಯಾಕೊ ಕೃಪಾಧರ ದೇವ ನಿನಗೆನ್ನೊಳ್ಕರುಣಾ ಪ. ಸರಸಿಯೊಳಂದು ಬೆದರಿದ ಕರಿರಾಜನನು ಪೊರೆದ ಬಿರುದ ನೀ ಮರೆವುದು ನೀತಿಯೇನೊ ವರದ 1 ತಾಳಲಾರದಂಥ ವೇದನೆ ಇನ್ನು ಪೇಳಲೇನು ಕಂಸಸೂದನ ಇಳೆಯ ಮ್ಯಾಲೇಳಲಾರದಂತಾಯ್ತೆನ್ನ ಹದನ2 ಸಂಕಟಾಬ್ಧಿ ಪರಿಶೋಷಣಾ ಶ್ರೀ ವೆಂಕಟೇಶ ಚಕ್ರಭೂಷಣ ಕಿಂಕರರಾತಂಕವನ್ನು ದೂರಿಸುತಿಹದಯ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಿಟ್ಟೆಯಾ ಸ್ವಾಮಿ ಎನ್ನ ಬಿಟ್ಟೆಯಾ ಬಿಟ್ಟೆಯಾ ಎನ್ನ ಜೀಯ ವ್ಯರ್ಥ ಪ. ಕೊಟ್ಟೆಯಾ ದುರಿತದ ಕಯ್ಯ ಅಹ ಕಟ್ಟ ಕಡೆಗು ಕಾವ ನೀನೆಂದು ನಂಬಿಕೆ ಇಟ್ಟ ದಾಸನ ಇಂಥ ಬಟ್ಟೆಯೊಳಗೆ ದೂಡಿ ಅ.ಪ. ಅನ್ಯರಿಗಳುಕದ ಶೌರ್ಯ ಸ್ವಜನೋನ್ನತವಾದ ಗಾಂಭಿರ್ಯ ಜನ ಸನ್ನುತವಾಗಿಹುದಾರ್ಯ ನಿನ್ನ ಸನ್ನುತಿ ಗೃಹ ಚಾತುರ್ಯಗಳ ತನ್ನಂತೆ ಕರುಣಿಸಿ ತಾವಕನೆನಿಸಿರೆ ಕುನ್ನಿಯ ಮರಿಗಿಂತ ಕಡೆಮಾಡಿ ದಾರಿಯೊಳ್ 1 ತಲ್ಪದಿಂದೆದ್ದವಸರದಿ ಬೊಮ್ಮ- ಕಲ್ಪೇಶ ನೀನಿಟ್ಟ ಕ್ರಮದಿ ಸ್ವಲ್ಪ ಸ್ವಲ್ಪವಾದರು ಕವರ್i ನೆವದಿ ನಾನಾ ಕಲ್ಪ ಪೂಜೆಯಗೈದು ಮುದದಿ ಶೇಷ ಕಲ್ಪೇಶ ನಿನಗೆ ಸಮರ್ಪಿಸಿ ಬಾಳ್ದನ- ನಲ್ಪ ಜನರಿಗೆ ನಿತ್ಯಾಲ್ಪರಿವೊಲ್ಮಾಡಿ 2 ಬಂದ ಸಜ್ಜನರನು ನೋಡಿ ಮಾನ- ದಿಂದ ಕುಳ್ಳಿರಿಸಿ ಮಾತಾಡಿ ಮತ್ತೆ- ನ್ನಿಂದಾದ ಸತ್ಕಾರ ಮಾಡಿ ತಿಳಿ- ದಂದದಿ ನಿನ್ನನು ಪಾಡಿ ಇದೆ ಮುಂದೆ ತಾರಕವೆಂದಾ ನಂದಗೊಡಿರಲೆನ್ನ ಹಂದಿಯಂದದಿ ಮೂಲೆ ಹೊಂದಿಸಿ ಕೆಡ ಹಾಕಿ 3 ಸಂಧ್ಯಾದಿಗಳನೆಲ್ಲ ಬಿಟ್ಟು ಅನ್ನ ತಿಂದು ಬೀಳುವೆ ಲಜ್ಜೆಗೆಟ್ಟು ರೋಗ ಬಂಧಿತ ನರಗಳ ಕಟ್ಟು ಶೂಲ ದಂದದಿ ಬೀಳುವ ಪೆಟ್ಟು ಇನ್ನು ಮೋಚಿಸು ಹಾಗಾ- ದಂದ ಕಾಲಕೆ ಪದ ಹೊಂದಿಸಿಕೊಳದೆನ್ನ 4 ಮರೆಯಲಿಲ್ಲೆಂದಿಗೂ ನಿನ್ನವೆಂಬು- ದರಿಯೆಯ ಲೋಕಪಾವನ್ನ ಇನ್ನು ಕರುಣ ಬಾರದ್ಯಾಕೊ ರನ್ನ ಶೇಷ ನಿತ್ಯ ಪ್ರಸನ್ನ ಬಹು ಕರಗುತ ಕಣ್ಣೀರ ಸುರುವಿದ ಮಾತ ಮರೆವುದುಚಿತವಲ್ಲ ಪರಮ ದಯಾಂಬುಧಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಡಿಕೊಂಬೆನೊ ಗೋಪಾಲ ನಿನ್ನ ಬೇಡಿಕೊಂಬೆ ಕರಗಳೆರೆಡ ಪ ಜೋಡಿಸಿ ನಿನ್ನೊಳು ಸುದೃಢ ಭಕುತಿ ಮಾಡಿ ಸತತ ಭಜಿಸುವಂಥ ರೂಢಿ ಎನಗೆ ಕೊಡು ನೀನೆಂದು ಅ.ಪ ಕ್ಲೇಶಪಡಿಸದೆ ಸಲಹೆನ್ನ ಜಗಂಗಧೀಶ ಮರೆಯದೆ ಬಾರದ್ಯಾಕೊ ಕರುಣ ಲೇಶಗುಣನಿಧೆ ಆಶಾಪಾಶ ಬದ್ಧನಾಗಿ ದೇಶ ದೇಶ ತಿರುಗಿ ಕರುಣ ದುರುಳ ವಸುಮತೀಶರೊಳ್ ಬೇಡಿಸದಂತೆ 1 ಇಂದುವzನÀನೆ ಮುನಿವರ್ಯಹೃದರ ವಿಂದಸದನೆ ವರಗೋಪಯುವತಿ ಬೃಂದಮದನನೆ ಇಂದಿರೇಶ ನಿನ್ನ ಪಾದಾರವೃಂದಗಳನು ಹೃದಯವೆಂಬೊ ಮಂದಿರದೊಳಗೆ ನಿಲ್ಲಿಸಿ ಚಿದಾ- ನಂದಮೂರ್ತಿಯ ಪೂಜಿಪೆನೆಂದು 2 ಧೀರ ಚರಣನೆ ಮುರಾರಿ ಧರಣಿ ಭಾರಹರಣನೆ ಭುಜಗೇಶಫಣಿ ವಿದಾರಿ ಚರಣನೆ ಮಾರಜನಕ ನೀರಜಾಕ್ಷ ನಾರಸಿಹ್ಮ ನಾಮಗಿರೀಶ ಸಾರ ಎನಗೆ ತಿಳಿಬೇಕೆಂದು 3
--------------
ವಿದ್ಯಾರತ್ನಾಕರತೀರ್ಥರು