ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಪ್ತರಾರೆಂಬುದನು ಆಲೋಚನೆಯ ಮಾಡೆ ಆಪ್ತರೊಬ್ಬರ ಕಾಣೆ ನೀನಲ್ಲದೆ ಪ ಆಪ್ತರನ್ಯರ ನಂಬಿ ತಪ್ತ ಜೀವನನಾದೆ ತೃಪ್ತಿಯ ಬೇಡುವೆ ನಿತ್ಯತೃಪ್ತ ನಿನ್ನನು ದೇವ ಅ.ಪ ಕೋಳಿಕೂಗದೆ ಬೆಳಕು ಬಾರದೆನ್ನುವ ನುಡಿಯ ಕೇಳಿ ತಲೆದೂಗಿದೆನು ಮೂಢತನದಿ ಪೇಳಿದುದು ಮಾಡಿದೆನು ತಾಳಿದೆನು ಮರ್ಮನುಡಿ ಪೇಳಲೇನುಪಯೋಗ ಶ್ರೀಲಲಾಮ ಸುಧಾಮ 1 ದಿಟ್ಟ ಜನರಾಪ್ತರಾಗುವರೆ ಜಗದಿ ಇಷ್ಟರಂದದಿ ಹೊರಗೆ ಕೆಟ್ಟ ಯೋಚನೆಯೊಳಗೆ ಸುಟ್ಟ ಬೆರಳಿಗೆ ಸುಣ್ಣವಿಡುವರೊಬ್ಬರ ಕಾಣೆ 2 ಕೂತ ಕೊಂಬೆಯ ಬುಡವ ತಾ ತರಿವ ಮೇಧಾವಿ ಮಾತು ಕೇಳುವ ಜನಗಳಾಪ್ತರಾಗುವರೆ ಪ್ರೀತ ನೀನಾಗೊ ಅನಿಮಿತ್ತಬಾಂಧವ ನಿನ್ನ ದೂತ ದೂತರ ದೂತನಾಗುವೆ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಏನಿದೇನಿದನ್ಯಾಯ ಕೇಳಲಾಗದಯ್ಯ ಧ್ಯಾನದಿಂದಾನೆಂಬ ಹೀನ ಜನರ್ವಚನ ಪ ಪರಮಪುರುಷರ ಚರಿತ ಪರಮ ಭಕ್ತಿಯಲಿಂದ ಬರೆದೋದಿಕೇಳಿದರೆ ಪರಮಪದವೆನುತ ವರವೇದ ಸ್ಮøತಿವಾಕ್ಯ ಅರಿದರಿದು ಸಚ್ಚರಿತ ಬರೀಬಾರದೆನ್ನುವ ನರಗುರಿಗಳ ವಚನ 1 ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ ನೆನೆವರ್ಗೆ ಭವಬಂಧವಿನಿತಿಲ್ಲವೆನುತ ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು ಮನನ ಮಾಡಳಿವ ಬಿನಗುಜನರ್ವಚನ 2 ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ ಮೇಲು ಮಹಿಮೆಯ ಮನದಾಲಿಸಲು ಜವನ ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ ಕೇಳಿ ತಿಳಿಯದ ಮಹ ಕೀಳುಜನರ್ವಚನ 3 ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ 4 ಪರಮ ಶ್ರೀಗುರುರೂಪ ವರದ ಶ್ರೀರಾಮನಂ ನೆರೆನಂಬಿ ಒಲಿಸದೆ ಗುರುವಾಗಿ ಜಗದಿ ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ ಪರತರದ ಮೋಕ್ಷಮಂ ಕರುಣಿಸುಯೆಂತು 5
--------------
ರಾಮದಾಸರು
ಮನವು ನೆಮ್ಮದಿಯಾಗಲಿ ಪ ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು ಕೆಟ್ಟು ಹೋಗದೆ ಸತತ ಶುದ್ಧವಿರಲಿ ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ 1 ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ ದೂರವಾಗಲಿ ತಿರುಗಿ ಬಾರದಿರಲಿ ವೀರ ಹನುಮನು ತನ್ನ ಸಾರಸೇವೆಗೆ ಫಲವ ಕೋರಿದನೆ ಧನಕನಕ ವೈಭವಗಳ 2 ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ ಈ ಪರಿಯೆ ಮನದ ಕ್ಲೇಶವ ತಂದಿತು ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ 3
--------------
ವಿದ್ಯಾಪ್ರಸನ್ನತೀರ್ಥರು