ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳುದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು1 ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರುಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು 2 ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪುಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು 3 ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ 4 ಅಮೃತ ಬಿಂದುವಿನ ಮೊಗೆಯುದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು 5 ಆನಂದ ವನಗಳ ಸಾರುತ ಆಯಾಸ ಕಳೆಯುತ್ತಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ6 ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ 7 ಕಮಲ ಪೀಠವನೇರುವರ ಮಹೇಶನೆನ್ನು ಅವರ8 ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ9 ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ10 ಸೂರ್ಯ ಕೋಟಿಗೆ ಘನವುಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು 11 ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ12 ಎರಡಿಲ್ಲದೇಕಾರ್ತಿ ಬೆಳಗುತ ಎಲ್ಲೆಡೆ ತಾ ಹೊಳೆಯುತಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ13 ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ 14 ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ 15
--------------
ಚಿದಾನಂದ ಅವಧೂತರು
ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆಏನು ಪಥವಮ್ಮ ನಮಗೆ ಪ ಮಾನವೇನಿನ್ನಿದಕೆ ಮಾನಿನಿಯರೆಲ್ಲರುಆಣೆಯನು ಕಟ್ಟಿವನಿಗಡ್ಡ ನಿಲ್ಲುವ ಬನ್ನಿ ಅ.ಪ. ಕಳ್ಳತನವೇ ನಮ್ಮ ವಲ್ಲಭರು ಈ ಸುಳುವುಎಲ್ಲವನು ಬಲ್ಲರಮ್ಮಒಲ್ಲದಲೆ ನಮ್ಮ ಬಿಟ್ಟರೆ ಒಳಿತು ವನಜಾಕ್ಷಎಲ್ಲಿಗೈದಿದರೆ ನಾವಲ್ಲಿಗೈದುವ ಬನ್ನಿ1 ಇಂದುದಯದಿ ಮೊದಲು ಇಂದೀವರಾಕ್ಷಿಯರುಗೋವಿಂದನ ಬಳಿಗೈದುವಒಂದು ಕಡೆಯಲಿ ಕುಳಿತು [ವನಜಾಕ್ಷಿಯೋರ್ವ ಕೈಯಂದಲಲ್ಲಿಗೆ ಕಳುಹಿ] ಕೇಳ್ವೆವೇನು ಪೇಳುವನೋ 2 ಹರಿಣಾಂಕವದನೆಯರು ನೆರೆದು ಬರುತಿರೆ ಕಂಡುಪರಮ ಹರುಷದಲಿ ಬಂದುಸರಿ ರಾತ್ರಿಯೊಳು ಹೀಗೆ ಬರುವುದೇನೆಂದೆನಲುಎರಗಿ ಬಿನ್ನೈಸಿದರು ಅಂಬುಜದಳಾಕ್ಷನಿಗೆ3 ಶ್ಲೋಕ ಹಲವು ಕಾಲವು ನಿನ್ನ ಸ್ನೇಹ ಸುಖವ ಹಾರೈಸಿಕೊಂಡಿರುತಿಹಲಲನಾವ್ಯೂಹವ ಬಿಟ್ಟು ಅಕ್ರೂರನೊಡನೆ ನೀ ಮಧುರೆಗೆ ಪೋದರೆಕಳೆಯಲಾಪವೇ ಕಾಂತ ಕೇಳು ದಿನವ ಈ ಕಂತುವಿನ ಬಾಧೆಗೆಘಳಿಗೊಂದು ಯುಗವಾಗಿ ತೋರುತಿÀಹುದೋ ಜಲಜಾಕ್ಷ ನೀನಿಲ್ಲದೆ ಪದ ಮಾಧವ ಕೃಪಾಕರನೆ4 ಶ್ಲೋಕ ಬಾಲಭಾವದಲಿಂದಲಂಗಸುಖವ ಬಹುಬಗೆಯಲಿಂದುಳುಹಿದೆಲೋಲಲೋಚನೆ ನಿಮ್ಮ ಬಿಟ್ಟು ಪುರದ ನಾರೇರಿಗಾನೊಲಿದರೆನೀಲಕಂಠನು ಮೆಚ್ಚ ನೋಡು ನಿಜವ ನಿಮಗ್ಯಾತಕೀ ಸಂಶಯಕಾಲಕ್ಷೇಪವನಲ್ಲಿ ಮಾಡೆ ಕಿಂಚಿತ್ಕಾಲದೊಳಾನೈದುವೆ ಪದ ಪಾಲಿಸಿರೆನಗಪ್ಪಣೆಯ ಪಾಟಲ ಸುಗಂಧಿಯರೆಕಾಲಹರಣವ ಮಾಡದೆನಾಳೆ ಉದಯಕೆ ಪೋಗಿ ನಾಲ್ಕೆಂಟು ದಿನದೊಳುವ್ಯಾಳೆಗಿಲ್ಲಿಗೆ ಬರುವೆ ಕಾಳಾಹಿವೇಣಿಯರೆ 5 ಶ್ಲೋಕ ಮಾರನಯ್ಯನೆ ಕೇಳು ಅಲ್ಲಿರುತಿಹ ನಾರೇರು ಬಲು ನಿಪುಣರೋನೀರಜಾಂಬಕ ನೋಡು ನಿನ್ನ ಮನವ ನಿಮಿಷಾರ್ಧದೊಳುಸೆಳೆವರೋಮಾರಕೇಳಿಯ ಶಾಸ್ತ್ರಮರ್ಮವರಿದ ಆ ನಾರೇರು ನೆರೆಯಲುಗಾರು ಪಳ್ಳಿಯಲಿಪ್ಪ ಗೋಪಿಯರ ವಿಚಾರಂಗಳ ಸ್ಮರಿಪೆಯಾ ಪದ ಬಿಲ್ಲ ಹಬ್ಬವೆ ಸುಳ್ಳು ಬಿಸುರುಹಾಕ್ಷಿಯರಿಕ್ಷುಬಿಲ್ಲಿನುತ್ಸವಕೆ ನಿನ್ನಖುಲ್ಲ ಅಕ್ರೂರನನು ಕಳುಹಿ ಕರೆಸಿದರಲ್ಲಿವಲ್ಲಭೆಯರನ್ನು ನೆರೆವೆ ನಮ್ಮೆಲ್ಲರನು ಮರೆವೆ 6 ಶ್ಲೋಕ ನಾರೀಹಾರ ಕಿರೀಟ ಕುಂಡಲಯುಗ ಕೇಯೂರವಲಯಾದಿಗಳುಚಾರು ವಸ್ತ್ರ ಸುಗಂಧ ಪುಷ್ಪನಿಚಯ ಹಾರಂಗಳಂ ಧರಿಸದೆಮಾರ ಕೇಳಿಯ ಮಾತಿಲಿಂದಲವರ ಮನಸೆಮ್ಮೊಳೊಂದಾಗದೆನಾರೇರೊಲುಮೆಯುಂಟೆ ಲೋಕದೊಳಗೆ ನನ್ನ್ಯಾತಕೆ ದೂರ್ವಿರೇ ಪದ ಮಲ್ಲಯುದ್ಧವ ನೋಡಬೇಕೆನುತ ನಮ್ಮಾವಅಲ್ಲಿಗೆ ಕರೆಸಲದಕೆಇಲ್ಲದಪವಾದ ಈ ಸುಳ್ಳು ಸುದ್ದಿಗಳ ನೀ -ವೆಲ್ಲ ಸೃಜಿಸಿದಿರಿ ಸರಿಯಲ್ಲ ನಿಮಗಿಳೆಯೊಳಗೆ 7 ಶ್ಲೋಕ ವಾರಿಜಾಂಬಕ ವಾರಿಜಾರಿವದನ ವಾರಾಶಿಜಾವಲ್ಲಭವಾರಿವಾಹನಿಭಾಂಗ ವಾಸವನುತ ವಾಕೆಮ್ಮದೊಂದಾಲಿಸೋವಾರಿಜೋದ್ಭವನಯ್ಯ ನಿನ್ನ ವಿರಹ ವಾರಾಶಿಯೊಳು ಮುಳುಗಿಹನಾರೀನಿಚಯವ ಪಾರುಗಾಣಿಸು ಕೃಪಾನಾವೆಯಲಿಂದೆಮ್ಮನು ಪದ ಮಾರನೆಂಬುವನು ಬಲು ಕ್ರೂರ ನಮ್ಮಗಲಿ ನೀ ಊರಿಗ್ಹೋದುದನು ಕೇಳಿವಾರಿಜಾಸ್ತ್ರವನು ಎದೆಗೇರಿಸೆಮ್ಮನು ಬಿಡದೆಹೋರುವನು ಅಹÉೂೀ ರಾತ್ರಿಯಲಿ ತಪಿಸುತ 8 ಶ್ಲೋಕ ನೀಲಕುಂತಳೆ ಕೇಳು ನಿಮ್ಮ ಮನೆಯೊಳಾ ನೆಲುವಿನ ಮ್ಯಾಲಿನಪಾಲು ಬೆಣ್ಣೆಯ ಕದ್ದು ಮೆದ್ದು ಬಹಳ ಕಾಲಂಗಳಂ ಕಳೆದೆನೆಬಾಲೆ ಮನ್ಮಥಬಾಣದೆಚ್ಚು ತಪಿಸೆ ಬಹು ಬಗೆಯಲಿಂದುಳುಹಿದಲೋಲಲೋಚನೆ ನಿಮ್ಮೊಳಾನು ಬಹಳ ಜಾರತ್ವಮಂ ಮಾಳ್ಪೆನೇ ಪದ ಬಟ್ಟಗಂಗಳೆ ನಿಮ್ಮ ಬಿಟ್ಟು ಘಳಿಗಿರಲಾರೆದುಷ್ಟ ಕಂಸನು ಕರೆಸಲುಅಟ್ಟಿದರೆ ಪೋಗದಿರೆ ಸಿಟ್ಟಿನಿಂದಲಿ ವ್ರಜಕೆಅಟ್ಟುಳಿಯ ಮಾಡುವನು ಅಂಬುಜಸುಗಂಧಿಯರೆ 9 ಶ್ಲೋಕ ಪತಿ ಸುತ ಪಿತೃ ಮುಖ್ಯ ಭ್ರಾತೃ ಬಾಂಧವರು ಎಂಬಅತಿಶಯ ನಮಗಿಲ್ಲ ಆಲಿಸೋ ಮಾತನೆಲ್ಲರತಿಪತಿಪಿತ ನೀನೇ ರಾತ್ರಿಯೊಳು ಕೊಳಲನೂದೆಕ್ಷಿತಿಪತಿ ನಿನ್ನೆಡೆಗೆ ಕ್ಷಿಪ್ರದಿಂ ಬಂದೆವಲ್ಲೊ ಪದ ಬಾಲತನದಲಿ ಯಮುನಾ ತೀರದಲಿ ನೀ ವತ್ಸ-ಪಾಲನೆಯ ಮಾಡುತಿರಲು ಆಕಾಲ ಮೊದಲಾಗಿ ಈ ವ್ಯಾಳೆ ಪರಿಯಂತರವುಕಾಲುಘಳಿಗಗಲದಿಹ ಕಾಂತೆಯರ ತ್ಯಜಿಸುವರೆ10 ಶ್ಲೋಕ ಪರಿಪರಿಯಲಿ ನಿಮ್ಮ ಪಾಲಿಸಿ ನೋಡೆ ಮುನ್ನಕರುಣಕೆ ಕೊರತಿಲ್ಲ ಕಾಂತೆ ಕೇಳೆನ್ನ ಸೊಲ್ಲತ್ವರಿತದಿ ಬಾರದಲೆ ತಡೆದು ನಾ ನಿಂತರಲ್ಲೆಸರಸಿಜಭವ ಮಾರರಾಣೆ ಕಾಣೆ ಪ್ರವೀಣೆ ಪದ ಕ್ಲುಪ್ತ ಕಾಲಕೆ ಬಂದುನೆರೆಯದಿದ್ದರೆ ನಾನು ಪರಮ ಪುರುಷೋತ್ತಮನೆ11 ಶ್ಲೋಕ ಮಾರನೆಂಬುವನಂದೆ ಮಡಿದನು ಶಿವನ ಮೂರನೆ ಕಣ್ಣಿಲಿನಾರೇರಿಲ್ಲದೆ ನಾಭಿಯಿಂದ ಪಡೆದ ಆ ಬ್ರಹ್ಮನೆಂಬಾತನ ನಾರಿ ಈರ್ವ ಕುಮಾರರಾಣೆ ಹರಿಯು ತಾನಿಟ್ಟನೇನೆಂಬೆವೆಮಾರಿ ಹೊರಗಿನ ಹೊರಗೆ ಹೊಯಿತೆಂಬೊ ತೀರಾಯಿತೆ ಭಾವುಕಿ ಪದ ಹಲವು ಮಾತುಗಳ್ಯಾಕೆ ಜಲಜಾಕ್ಷ ನಿನ್ನ ಪದನಳಿನಗಳ ನೆರೆ ನಂಬಿಹಒಲುಮೆಯಲ್ಲಿರುತಿಪ್ಪ ಲಲನೆಯರನೆಲ್ಲರನುಸಲಹೊ ಸಲಹದೆ ಮಾಣು ರಂಗವಿಠಲರೇಯ12
--------------
ಶ್ರೀಪಾದರಾಜರು
ಹತ್ತು ಸಾರೆ ಬಾರದಲೆ ತೊಲಗೆನಮ್ಮಪ ನಿರಾಧಾರಾದಿ ನಿದ್ರೆ ಬಾರದಮ್ಮ ವಿ ಚಾರಿಸು ತಾಯಿ ಪಾಲುವಲ್ಲೆನಮ್ಮ ಧಾರುಣಿ ಸಂಬಂಧ ಎನಗಾಗದಮ್ಮ ಇದಕ್ಕೆ ಸಾರಿ ಸಾರಿಗೆ ಬಾಯಿ ತೆರೆವೆನಮ್ಮ 1 ದೇಹಿ ಎಂಬೊದೆನ್ನ ಜಾತಿಧರ್ಮವಮ್ಮ ನಾನು ಕರ ಚಾಚೆನಮ್ಮ ಆಹಾರಕ್ಕೆ ಬಲುದಿನ ಮೀರಿತಮ್ಮ ಸಂ ದೇಹವಿಲ್ಲದೆ ನಾರೇರು ಬಡಿಸಲಮ್ಮ 2 ಇದೇ ಕೇಳಿದೆನು ಇನ್ನು ಮೌನವಮ್ಮ ಬಲು ಸದಮಲ ಜ್ಞಾನಿಗಳಿಗೆ ಪ್ರೀತಿಯಮ್ಮ ಮಧುಹರಿ ವಿಜಯವಿಠ್ಠಲ ಪೂರ್ಣನಮ್ಮ ಸರ್ವರ ಹೃದಯದೊಳಗಾನಂದವಾಸನಮ್ಮ 3
--------------
ವಿಜಯದಾಸ