ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣವೇಕೆ ಬಾರದಯ್ಯ ಧರಣಿಜಾಪ್ರಿಯಾ ಪ ಶರಣಜನರ ಪೊರೆವನೆಂಬ ಬಿರುದ ಪೊತ್ತವನಾಗಿರಲೆನ್ನೊಳು ಅ.ಪ ಕೂಗಲಾಕ್ಷಣ ಓಡಿಪೋದೆ ರೋಗವ ನಂದಿಸಿದಾತನೆ || ಯೆನ್ನೊಳು || 1 ಕರವ ಪಿಡಿಯೆ ಕರೆದರಾರು | ಕಿರಿದು ತಾಯ ದುರಾಸೆ ಮನ್ನಿಸಿ ಭರದಿ ವನಕೆ ಪೋದವನೆ ||ಯೆನ್ನೊಳು || 2 ಭೂಮಿಜೆಯರಸ ಮಾಂಗಿರಿರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದು ಭಾಸ್ಕರ ಪುಣ್ಯ ಪ್ರಭೆಯ ಕೂಡಿ ಧ್ರುವ ಪುಣ್ಯ ಎದುರಿಟ್ಟು ಬಂದು ಮುಂದೆ ಕಣ್ಣಾರೆ ಕಂಡು ತ್ರಾಹಿ ಎಂದೆ ಸಣ್ಣ ದೊಡ್ಡದರೊಳು ವಸ್ತು ಒಂದೆ ಬಣ್ಣ ಬಣ್ಣಾ ಗೀಹ್ಯದರಿಂದೆ 1 ಹೇಳಬಾರದಯ್ಯ ನಿಜವರ್ಮ ಕೇಳಿ ಶ್ರೀಸದ್ಗುರು ಪಾದಧರ್ಮ ಅಳಿಯಿತು ನೋಡಿ ಪೂರ್ವ ಕರ್ಮ ಹೊಳಿಯಿತೆನ್ನೊಳು ಘನ ಬ್ರಹ್ಮ 2 ಸೋಹ್ಯ ದೋರಿ ಕೊಟ್ಟೆನಗಿಂದು ಮಹಿಪತಿಸ್ವಾಮಿ ತಾನೆ ಬಂದು ಈಹ್ಯಪರ ಪೂರ್ಣ ಕೃಪಾಸಿಂಧು ಸಾಹ್ಯ ಮಾಡುತೀಹ್ಯ ದೀನ ಬಂಧು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣವೇಕೆ ಬಾರದಯ್ಯಾ ಕರಿವರದನೆ ಪ ಶರಣ ರಕ್ಷಕನೆಂದು ನಿನ್ನ ಮೊರೆಯ ಹೊಕ್ಕೆನೊ ಸರಸಿಜಾಕ್ಷ ಮರಣ ಕಾಲದಿ ಮಗನ ಕರೆದ ಪುರುಷ ಪುಣ್ಯ ಶರಧಿಯೇನೊ ಅ.ಪ. ತುತಿಸಸಲಿಲ್ಲವೆಂದು ಎನ್ನ ಹಿತವಗೈಯದೆ ಜರಿಪರೇನೊ ತುತಿಸಲಾಪವೇ ಶ್ರುತಿಗಳನ್ನು ಮಿತಿಗೆ ಸಿಲ್ಕದ ನಿನ್ನ ಮಹಿಮೆ 1 ಏನು ಸಾಧನವವÀ ಮಾಡಲಿಲ್ಲವೆಂದು ಕೈಬಿಡುವೆಯೇನೊ ನೀನು ದಯಮಾಡಿದಲ್ಲದೆ ಏನು ಸಾಧನ ಮಾಡಲಾಪೆನೊ 2 ಪಾಪಪುಣ್ಯ ಕರ್ಮಗಳಿಗೆ ನೀನೆ ಪ್ರೇರಕನಲ್ಲವೇನೊ ಶ್ರೀ ಪರಾತ್ಪರ ನೀ ಸ್ವತಂತ್ರ ನಾ ಪರಾಧೀನನಲ್ಲವೆ 3 ಪುಣ್ಯಗೈದವರಲಿ ಕರುಣವನು ಗೈವುದೇನು ಮಹಿಮೆ ಘನ್ನ ಪಾಪಿಗಳಲಿ ನೀ ಪ್ರಸನ್ನನಾಗಲು ಖ್ಯಾತಿಯಲ್ಲವೆ 4 ಪತಿತಪಾವನ ದೀನರಕ್ಷಕ ಶ್ರಿತ ಜನಮಂದಾರನೆಂಬ ವಿತತ ಬಿರುದು ಬರಿದೆ ಪೇಳೋ ಗತಿ ಪ್ರದಾಯಕನಲ್ಲವೇನೊ 5 ದುರಿತ ರಾಶಿ ನೋಡಿ ಬೆದರಿ ನಿಂತೆಯೇನೊ ನೀನು ದುರಿತ ದೂರನಲ್ಲವೇ ನಿನ್ನ ಸ್ಮರಣೆ ನೋಡದ ದುರಿತವಿಹುದಿ 6 ತರಳತನದ ಸಲಿಗೆಯಿಂದ ಪರಿಪರಿಯಲ್ಲಿ ನುಡಿದೆನಯ್ಯಾ ಪರಮ ತತ್ವವರಿಯೆ ನಾನು ಪೊರೆಯೊ ಎನ್ನ ಕರಿಗೀರೀಶ 7
--------------
ವರಾವಾಣಿರಾಮರಾಯದಾಸರು
ನೆನೆಯುತ್ತ ತಿರಗುವೆನಯ್ಯ ಜೀಯ ನಿನಗ್ಯಾಕೆ ದಯಬಾರದಯ್ಯ ಪ ಮನುಮುನಿನುತ ನಿಮ್ಮ ವನÀರುಹಂಘ್ರಿಯಧ್ಯಾನ ಅನುದಿನ ಬಿಡದೆ ಅ.ಪ ಪೋಷಿಸಲೊಲ್ಲ್ಯಾಕೋ ನೀನು ನಿಮ್ಮಯ ದಾಸನು ನಾನಲ್ಲವೇನು ದೇಶದೇಶಂಗಳನ್ನು ನಾನು ಬಿಡದೆ ಘಾಸ್ಯಾದೆ ತಿರುತಿರುಗಿನ್ನು ಈಸು ದಿವಸ ವ್ಯರ್ಥ ಮೋಸವಾದೆನು ನಿಮ್ಮ ಧ್ಯಾಸ ಮರೆದು ಭವಪಾಶವಿದೂರನೆ 1 ಪರುಷವ ಶಿರದೊಳು ಪೊತ್ತು ಎ ನ್ನಿರವ್ಹಸಿದು ಬಳಲುವಂತಿತ್ತು ಕರದಲ್ಲೆ ಮುಕುರುವಿತ್ತು ಅರಿಯದೆ ಹಂಚಿನೋಳ್ಹಲ್ಕಿಸಿದಂತಿತ್ತು ಪರಮಪುರುಷ ನಿಮ್ಮ ನೆರೆನಂಬಿ ಬದುಕದೆ ದುರಿತದಿಂ ಬಳಲಿದೆ ಪರಿಪರಿ ಹರಿಹರಿ2 ವರಭಕ್ತರಭಿಮಾನ ನಿನಗೆ ಇಲ್ಲೇನು ಸ್ಥಿರ ಮುಕ್ತಿ ಪದದಾಯಕನೆ ಸ್ಥಿರವಾಗಿ ಅರಿದು ನಾ ನಿಮಗೆ ಮರೆಹೋದೆ ಕರುಣದಿ ಕೊಡು ವರಸುತಗೆ ಅರಘಳಿಗ್ಯಗಲದೆ ಸ್ಮರಿಪೆ ನಿಮ್ಮಯ ಪಾದ ಶರಣಾಗತರ ಪಾಲ ಸಿರಿವಂತ ಶ್ರೀರಾಮ 3
--------------
ರಾಮದಾಸರು
ಬಲುಕಷ್ಟ ಬರಗಾಲ ಬಂದಿತಯ್ಯ ವೈರಿ ಜನಕೆ ಬರಬಾರದಯ್ಯ ಪ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸರಲು ಬಾಯಿಲ್ಲ ವೃದ್ಧ ಜನಕೇ ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1 ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ ಪ್ರವಾಹದಂದದಿ ವೃಧ್ಧಿಯಾಗುತಲಿಹುದು ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ ಶಿವಶಿವಾಯೆಂದು ಭವಣಿಯನನುಭವಿಸುವರು 2 ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ ಮರಮರನೆ ಮನದೊಳಗೆ ಮರುಗುವರು ಬಡಜನರೂ 3 ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ ತಾಳಿ ಮನದಲಿ ವ್ಯಥಿಯ ಕೂಲಿ ಜನರು ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ ಕೂಲಿವಲ್ಲೆವು ಎನುತ ಗೋಳಿಡುತಲಿಹರು 4 ಕಡಲೆ ಕಾಣದ ಹರಿಯು | ಕಡಲೊಳಡಗಿದ ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5 ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ ಬಳುತಿಹವು ಬಡಜನರ ಕಣ್ಣಿಂದ ನೀರು ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6 ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು ನಮ್ಮ ಸಕಲ ಜನಕೇ | ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7
--------------
ಶಾಮಸುಂದರ ವಿಠಲ
ಸಲಹೊ ಶ್ರೀನಿವಾಸ-ಸುದ್ಗುಣ-ನಿಲಯವೆಂಕಟೇಶ ಜಲಜಾಂಬಕ ನೀನಲಸದೆ ಯೆನ್ನನು ಪ ವಾತವುಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಹೆಚ್ಚಿದ ಹೇತುವನೋಡಿ1 ಶ್ವಾಸನಿರೋಧದಲಿ ಸೇರಿದ-ಕಾಸಗಳುದರದಲಿ ಹೆಚ್ಚಿ ಬಲು ಘಾಸಿಪಡಿಸುತಿದೆ 2 ಕಾಯದ ಬಲವೆಲ್ಲಾ-ಕದಲುತ-ಮಾಯವಾದವಲ್ಲ ದಾಯತಪ್ಪಿ ದುರ್ವಾಯುವಿಂದ ತಲೆನೋಯುತ ದೇಹದೊಳಾಯಸ ಹೆಚ್ಚಿತು 3 ನಿದ್ರೆ ಬಾರದಯ್ಯಾ-ನಿಶಿಯೊಳ-ಗೆದ್ದಿರಬೇಕಯ್ಯಾ ಬಿದ್ದಾದ್ದಾಡಿಸುತಿದೆ 4 ಅನ್ನವರೊಚಕವು ಆಪ್ತರೊಳನ್ಯತೆಗೊಚರವು ಮುನ್ನವೈದ್ಯರುಗಳನ್ನು ಕಾಣೆ ನೀ ಕಣ್ಣತೆರದುನೊಡೆನ್ನ ಕಟಾಕ್ಷದಿ5 ರೋಗವುಘನವಯ್ಯಾ-ರೋದನೆ-ಯಾಗಿಹುದೆನಗಯ್ಯಾ ನೀನೇ ಗತಿಯೆಂದಿಗು 6 ಪರಮ ಪುರುಷ ನಿನ್ನ-ಚರಣವ ಮರಹೊಕ್ಕಿಹೆಮುನ್ನ ವರದ ವಿಠಲ ದೊರೆ ವರದಯಾನಿಧೇ 7
--------------
ಸರಗೂರು ವೆಂಕಟವರದಾರ್ಯರು
ಸಲಹೋ ಶ್ರೀನಿವಾಸ ಸದ್ಗುಣನಿಲಯ ವೆಂಕಟೇಶ ಪ ಜಲಜಾಂಬ ನೀನಲಸದೆ ಎನ್ನನು ಅ.ಪ ವಾತವು ಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಘಾತವು ಹೆಚ್ಚಿದ ಸೇರುವ ನೋಡಿ 1 ಶ್ವಾಸ ನಿರೋಧದಲಿ ಸೇರಿದ ಕಾಸುಗಳುದರದಲಿ ಕೇಶರಂಧ್ರವಕಾಶದೊಳೂಧ್ರ್ವ ಬಲು ಶ್ವಾಸ ಹೆಚ್ಚಿ ಘಾಸಿಪಡಿಸುತಿದೆ 2 ಕಾಯದಬಲವೆಲ್ಲಾ ಕದಲುತ ಮಾಯವಾದವಲ್ಲ ನೋಯುತ ದೇಹದೊಳಾಯಾಸ ಹೆಚ್ಚಿತು 3 ನಿದ್ರೆಬಾರದಯ್ಯ ನಿಶೆಯೊಳಗೆದ್ದಿರಬೇಕಯ್ಯಾ ಗುದ್ದಿಕೊಂಡು ಬಿದ್ದೊದ್ದಾಡಿಸುತಿದೆ4 ಅನ್ನವರೋಚಕವು ಅಪ್ತರೊಳನ್ಯತೆಗೋಚರವು ಕಾಣಿ ಕಣ್ಣತೆರೆದು ನೋಡೆನ್ನ ಕಟಾಕ್ಷದಿ5 ರೋಗವು ಘನವಯ್ಯಾರೋದನೆಯಾಗಿಹುದೆನಗಯ್ಯಾ ಭವ ರೋಗ ವೈದ್ಯ ನೀನೇಗತಿಯೆಂದಿಗು 6 ಪರಮಪುರುಷ ನಿನ್ನ ಚರಣವ ಮೆರೆಹೊಕ್ಕಿಹೆ ಮುನ್ನ ವರದವಿಠಲದೊರೆ ವರದದಯಾನಿಧೆ7
--------------
ವೆಂಕಟವರದಾರ್ಯರು
ಮಾನಭಂಗವಮಾರಿ ಮೇಲುಪಚಾರವ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಏನ ಮಾಡಿದರಿಲ್ಲಿ ಇರಬಾರದಯ್ಯ ಪ.ಕುಂದುಗಳನಾಡಿ ಕುಚೋದ್ಯಗಳನೆ ಮಾಡಿಕಂದ ಬಾಯೆಂದು ಬಣ್ಣಿಸಿ ಕರೆಯಲುಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದುಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1ನಗಗೇಡಿ ಮಾಡಿ ನಾಲುವರೊಳಗೆ ಕೈಯಮುಗಿವೆ ಬಾಯೆಂದು ಬಣ್ಣಿಸಿ ಕರೆಯಲುಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲುತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2ಆರ್ಥ ಹೋದರು ಪ್ರಾಣ ಹೋದರೂಮಾನವ್ಯರ್ಥವಾಗದ ಹಾಗೆ ಕಾಯಬೇಕುಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3
--------------
ಪುರಂದರದಾಸರು