ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ರಾಜ ಹರಿ ವಿಠಲ | ಪೊರೆಯ ಬೇಕಿವಳಾ ಪ ಗರುಡ ಗಮನನೆ ದೇವ | ಸರ್ವಾಂತರಾತ್ಮ ಅ.ಪ. ಪತಿಯೆ ಪರದೈವ ವೆಂ | ಬತಿಶಯದ ಮತಿಯಿತ್ತುರತಳೆನಿಸು ಗುರು ಹಿರಿಯ | ಹಿತಸೇವೆಯಲ್ಲೀಕೃತ ಕೃತ್ಯಳೆಂದೆನಿಸೊ | ಗೃಹ ಮೇಧಿ ಎಂಬಲ್ಲಿಕೃತಿ ರಮಣ ಪ್ರದ್ಯುಮ್ನ | ವಿತತ ಮಂಗಳನೇ 1 ಮಧ್ವಮತದನುಯಾಯಿ | ಶುದ್ಧ ಭಕುತಿ ಜ್ಞಾನ ಉದ್ಧರಿಸಿ ಇವಳಲ್ಲಿ | ಸಾಧನವ ಗೈಸೋಅಢ್ಯರೇಡ್ಯನೆ ಹರಿಯೆ | ಶ್ರದ್ಧಾಳು ತನದಲ್ಲಿಬುದ್ಧಿ ಓಡಲಿ ದೇವ | ಮಧ್ವಾಂತರಾತ್ಮಾ 2 ಸಾರ | ತರಳೆ ಬುದ್ಧಿಗೆ ನಿಲುಕಿಪರಮ ಸತ್ಸಾಧನವ | ಚರಿಸುವಂತೆಸಗೋಮೊರೆಯಿಡುವೆ ನಿನ್ನಲ್ಲಿ | ಕರುಣಿಸೀ ಬಿನ್ನಪವಗುರುವಂತರಾತ್ಮ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ನೀನೆ ಅನಾಥ ರಕ್ಷಕ ಪ ನಿಖಿಲ ದ್ವೈತ್ಯ ಶಿಕ್ಷಕ ಅ.ಪ ವಿಧಿ ಸೃಷ್ಟಿಯೊಳಿಲ್ಲದ ರೂಪದಿ ದಿತಿ ಸುತನುದರ ಬಗೆದು ಭೇದಿಸಸುರನ ಮೋದದಲಿ ಕರುಳನು ಧರಿಸಿದೆ 1 ಶರಣಸುರರ್ತನಗೆನ್ನುತ ಹರಶರಭಾಕೃತಿಯಂಬತಿ ಘೋರ ಯುದ್ಧದಿ ಧಾರುಣಿಯೊಳಗೆ ಕೆಡಹಿ ತುಳಿದೆ 2 ಅಷ್ಟಮುಖಭೇರುಂಡನೆಂದು ಸೃಷ್ಟಿಯೊಳ್ ಪ್ರಸಿದ್ಧವಾಯ್ತು ದಿಟ್ಟಗುರುರಾಮ ವಿಠ್ಠಲ ಪ್ರಹ್ಲಾದವರದ 3
--------------
ಗುರುರಾಮವಿಠಲ
ಭಾರತೀಶ ಕಾಂತ ವಿಠಲ | ಪೊರೆಯ ಬೇಕಿವಳ |ಭೂರಿ ದೈವರ ಗಂಡ | ಮರುತಾಂತರಾತ್ಮಾ ಅ.ಪ. ಸುಕೃತ | ರಾಶಿ ಒದಗಲು ಈಗದಾಸ ಪಂಥಕೆ ಮನವ | ಆಶಿಸುತ್ತಿಹಳೋಆಶುಗತಿ ಮತ ಪೊಂದಿ | ದೋಷಗಳ ಕಳೆದಿಹಳಕೇಶವನೆ ಪೊರೆಯೆಂದು | ಲೇಸು ಬಿನ್ನವಿಪೇ 1 ಮೂರೆರಡು ಭೇದಗಳು | ತಾರತಮ್ಯವ ತಿಳುಹಿಆರು ಮೂರೂಭಕ್ತಿ | ವೈರಾಗ್ಯ ಭಾಗ್ಯಸಾರ ತತ್ವ ಜ್ಞಾನ | ದರಿವ ಇವಳಿಗೆ ಇತ್ತುಪಾರುಗೈ ಭವದ ಕೂ | ಪಾರ ಶ್ರೀ ಹರಿಯೇ 2 ಲೌಕಿಕ ಸುಸಖ್ಯ | ವೈದೀಕವೆಂದೆನಿಸುತ್ತಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗಪ್ರಾಕ್ಕು ಕರ್ಮವ ಕಳೆದು | ಸಾಕ ಬೇಕೆಂದಿವಳಮಾಕಳತ್ರನೆ ಹರಿಯೆ | ನಾಕೇಳ್ವೆ ವರವಾ 3 ಪತಿಯೆ ಪರದೈವ ವೆಂ | ಬತಿ ಶಯದ ಮನೆಯಿತ್ತುಹಿತದಿ ಹರಿ ಗುರು ಸೇವೆ | ಸತತ ಒದಗಿಸುತಗತಿಗೋತ್ರ ನೀನೆಂಬ | ಮತಿಯನೇ ಕರುಣಿಸುತಕ್ಷಿತಿಯೊಳಿವಳನು ಮೆರೆಸೊ | ಪತಿತ ಪಾವನ್ನಾ 4 ದೇವ ಹೂತಿಯ ಪೊರೆದ | ಆವ ಕಪಿಲಾತ್ಮಕನೆಭಾವದಲಿ ಮೈದೋರಿ | ನೀವೊಲಿಯಲೆಂದೂಭಾವದಲಿ ಬಿನ್ನವಿಪೆ | ಬಾವಜ್ಞ ಸಲಿಸುವುದುದೇವ ದೇವನೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀಗಣಪತಿಗೆರಗಿ ಶಾರದೆಯನುರಾಗದಿಂದಲಿ ಸ್ಮರಿಸಿ ಶ್ರೀಗಿರಿಜಾತೆಯಲೋಕೈಕ ಮಾತೆಯ ಬೇಗದಿ ಹಸೆಗೆ ಕರೆದ ಸುಪದಂಗಳಾ ರಾಗದಿ ಪಾಡಿ ಪೊಗಳುವೆ 1 ಮಿಸುನಿಯ ಮಂಟಪದಿ ರಾರಾಜಿಪಪೊಸಪಸೆವಣೆಯನಿಟ್ಟು ಪೊಸದೇವಾಂಗವ ಮೇಲೆಪಸರಿಸಿ ಹಾಕುತ ಶಶಿಮುಖಿಯರು ನೆರೆದೊಂದಾಗಿ ಪಾಡುತ ಕುಶಲದಿ ಹಸೆಗೆ ಕರೆದರು 2 ಕಡೆಯಾಣಿಯ ಚಿನ್ನದ ಜಗಜ್ಯೋತಿಯಎಡಬಲದೊಳಗಿಟ್ಟು ಉಡುರಾಜಮುಖಿಯರುಮೃಗರಾಜಕಟಿಯರು ಕಡುಬೆಡಗಿಂದಪಾಡುತ ನಲಿದಾಡುತ ಮೃಡನರಸಿಯ ಹಸೆಗೆ ಕರೆದರು 3 ಚಿನ್ನದಪಿಲ್ಲಿಮಿಂಚು ಉಂಗುರಗಳುರನ್ನದಲ್ಲಣಿವೆಟ್ಟು ಉನ್ನತವಾದ ಕಾಲ್ಗಡಗಸರ್ಪಣಿಗೆಜ್ಜೆಯನ್ನು ತಳೆದ ಪಾದಪದುಮದಿಂದೊಮೈವ ಪೂರ್ಣೇಂದು ಮುಖಿಯರು || ಹ 4 ವರರತ್ನಖಚಿತವಾದ ಗೆಜ್ಜೆಮೊಗ್ಗೆಯಸರವೊಡ್ಯಾಣವು ಡಾಬು ಮಿರುಪಮಂಡೆಳೆಯುಡುದಾರ ಕಿಂಕಿಣಿಗಳ ಸರಫಲಿರೆನೆ ಚೆಂಗಾವಿಸೀರೆಯನುಟ್ಟು ಗಿರಿರಾಜತನುಜೆ || ಹ 5 ಚಳಿಕೆ ಹಿಂಬಳೆದೊರೆಯ ಚೂಡಾಕಟ್ಟುಬಳೆಕಂಕಣ ಕಡಗ ಪೊಳೆವ ಮುಂಗೈಯಮುರಾರಿ ಮುತ್ತಿನದಂಡೆ ಥಳಥಳಿಸುವಬೆರಳುಂಗುರಗಳನಿಟ್ಟು ಲಲಿತಾಂಗಿ ಬೇಗ | ಹಸೆಗೇಳು 6 ವರನಕ್ಷತ್ರದ ಸರವು ಏಕಾವಳಿ ಸರಗುಂಡಿನಸರವು ಮಿರುಪಬಿಲ್ಸರ ಚಳ್ಯಸರ ಚಕ್ರಸರಗೋಧಿಸರ ಮೋಹನಮುತ್ತಿನ ಸರಗಳನಿಟ್ಟವರಕಂಬುಕಂಠಿ ಬೇಗ | ಹಸೆಗೇಳು 7 ಅಣಿ ಮುತ್ತಿನ ಮೂಗುತಿ ಐದೆಳೆಯ ಕ-ಟ್ಟಾಣಿ ಕಾಶಿಯ ತಾಳಿ ಮಾಣಿಕಮಯಬತಿಮಲಕು ಅಡ್ಡಿಕೆ ಮಲಕಾಣಿ ಮುತ್ತಿನಬಟ್ಟುಮಲಕು ಸರಿಗೆಯಿಟ್ಟ ಏಣಾಕ್ಷಿ ಬೇಗ | ಹ 8 ತೊಳಪ ಮುತ್ತಿನಮಾಲೆ ಸರ್ಪಣಿಯಂಥಳಥಳಿಪ ವಜ್ರದವಾಲೆ ಚಳತುಂಬು ಮೀನ ಬಾ-ವಲಿ ಹಂಸೆಗಿಳಿಯ ಬಾವಲಿಯು ಹೊನ್ನೂಲುಕುಪ್ಪಿನವೆಂಟ್ಟೆಯವಿಟ್ಟ ಕಲಹಂಸಗಮನೆ | ಹ9
--------------
ಕೆಳದಿ ವೆಂಕಣ್ಣ ಕವಿ