ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೊ ಜೀವ ನನ್ನ ನುಡಿವ ನಾಲಗೆಯು ನಿನ್ನದೇನೊ ಕಾಣೆ ನಿನ್ನಾ ಬಣ್ಣವನೆನ್ನಾಣೆ ಕೇಳು ಪೇಳುವೆನೂ ಪಭೂತಂಗಳು ಪುಸಿಯೇನೊ ಮಾತೆ ಮಾಯೆಯಲ್ಲವೇನೊಏತಕೀಗರ್ವವು ನೀನು ಜಾತನಾದ ಬಗೆಯೇನೊಕೈತವವ ಬಿಡುುನ್ನೂ ಹೇತು ಹೀನೋಕ್ತಿಗಳೇನುನೀತಿಯಾಗಿ ಪೇಳು ನಾನು ತಾತಪ್ಯಮಾನನಪ್ಪೆನೂ 1ಬಿಸಿಲು ದೊರೆದೇರನೆ ನಾನು ಮಸಿಯಮಾತ ನುಡಿವೆ ನೀನುನಶಿದು ಪೋಪೆನಹುದು ನಾನು ಹಸದೊಳಿಪ್ಪುದುಂಟೆ ನೀನುಸಸಿನೆ ತಿಳಿದುಸುರಿನ್ನು ಕುಸಿಯ ಹಾಕದಿರೆನಿನ್ನೂನುಸುಳುದಾರಿ ಮನವನ್ನು ಹೊಸದು ಕೊಂಡಾಡಿದರೇನು 2ನೋಡುವ ಕಣ್ಣು ನಿನ್ನದೇನೊ ಆಡುವಾಟನಿನ್ನದೇನೊಓಡುವ ಕಾಲು ನಿನ್ನದೇನೊ ನೀಡುವ ಕೈ ನಿನ್ನದೇನೊಬೀಡ ಬಿಡುವರೆ ನೀನು ಗೂಡಾಗಿುದ್ದೆ ನಾನುಕೂಡಲಿಂದ್ರಿಯ ಕರಣ ತಾನು ಕಾಡುಪಾಲಾಗುವೆನೀನು 3ಎದ್ದು ನಡೆದಾಡುವೆ ನಾನು ನಿದ್ರೆಗೈವೆ ಮಲಗಿ ನಾನುಹೊದ್ದುಕೊಂಬೆ ಹೊದಿಕೆಗಳನು ಗದ್ದುಗೆಗಧಿಕಾರಿ ನಾನುಸಿದ್ದಿಯೆನ್ನಿಂದಲೆ ತಾನು ನಿರ್ಧರಿಪುದಿದ ನೀನುಬುದ್ದಿಹೀನನಾಗದಿರಿನ್ನು ಬದ್ಧವಾಡು ಕೇಳ್ವೆ ನಾನು 4ತಿರುಪತೀಶನಂಘ್ರಿ ನಾನು ಬರಿಯ ಪ್ರತಿಬಿಂಬ ನೀನುಗುರುವಾಸುದೇವಾರ್ಯರನ್ನು ಎರಗಿ ಸಂಪಾದಿಸಿದೆ ನಾನುಕರೆದು ಬಿಗಿದಪ್ಪಿದರೆನ್ನುವನು ಒರೆಯೆ ಕಿವಿಯೊಳ್ಮಂತ್ರವನ್ನುಭರದಲೆನ್ನ ಜಿಹ್ವೆ ಜಪಿಸಿ ಅಂತೆನೆಂಬೆ ನಿನ್ನ ನೀನು 5ಕಂ||ಒರಟುತ್ತರದಿಂದ ದೇಹವು ಬರಿ ಜಗಳವ ತೆಗೆಯೆ ಜೀವನರಿತಿದರಂದವ ನೆರೆಮೂರ್ಖರ ದಾರಿಯೊಳಗೆಬರುತರುಪುವ ಜಾಣನೆಂದು ನೀತಿಯ ನುಡಿದಂ
--------------
ತಿಮ್ಮಪ್ಪದಾಸರು
ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣತಾಮರಸ ನೆರೆ ನಂಬಿದೆ ಪ ಕಾಮ ಕ್ರೋಧಗಳನ್ನು ಕಡಿದು ನಿನ್ನಯ ದಿವ್ಯನಾಮಾಮೃತವನುಣಿಸೋ ಸ್ವಾಮಿ ಅ.ಪ. ಪರ ನಾರಿಯರಮೋರೆ ಬಣ್ಣವನೆ ನೋಡಿಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳಕೋರಿದ್ದು ಇತ್ತು ಕೂಡಿವಾರಿಜನಾಭ ನಿನ್ನಾರಾಧನೆಯ ಮರೆದುಧಾರುಣಿಗೆ ಭಾರಾಗಿ ಅಶನ ಶತ್ರುವಾದೆ 1 ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿಉಪೇಕ್ಷೆಯನು ಮಾಡಿ ಜರಿದೆ |ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆಅಪಕಾರವೆಂದು ತಿಳಿದು |ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆತಪವೃದ್ಧರನ್ನು ಜರಿದೆ |ಸ್ವಪನದೊಳಗಾದರೂ ವೈರಾಗ್ಯ ಬಯಸದಲೆಕಪಟ ಮನುಜರೊಳಗಾಡಿ ನಿನ್ನ ಮರೆದೆನೊ ಸ್ವಾಮಿ 2 ಭೂಸುರರು ಚಂಡಾಲ ಜಾತಿಯನ್ನದೆ ಬಲುಹೇಸಿಕಿಲ್ಲದಲೆ ತಿರಿದೆ | ಆಶಾಪಾಶಕೆ ಸಿಲುಕಿ ಕಂಡಕಂಡಲಿ ತಿಂದುದೋಷರಾಶಿಯನು ತರುವೆ |ಆ ಸತೀ ಸುತರ ಸಲಹುವೆನೆಂದು ಪರಿಪರಿವೇಷವನು ಧರಿಸಿ ಮೆರೆವೆ |ವಾಸುಕೀ ಶಯನ ವಸುದೇವ ತನಯನೆ ನಿನ್ನದಾಸನೆನಿಸದಲೆ ಅಪಹಾಸ ಮಾನವನಾದೆ 3 ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆಶಿರವ್ಯಾಧಿಯೆಂದ್ಹೇಳುವೆ |ದುರುಳ ದುರ್ವಾರ್ತೆಗಳ ಪೇಳಲು ಹಸಿತೃಷೆಯಮರೆದು ಆಲಿಸಿ ಕೇಳುವೆ |ತರುಣಿ ತರಳರು ಎನ್ನ ಪರಿಪರಿ ಬೈದರೆಪರಮ ಹರುಷವ ತಾಳುವೆ |ಗುರು ಹಿರಿಯರೊಂದುತ್ತರವನಾಡಲು ಕೇಳಿಧರಿಸಲಾರದಲೆ ಮತ್ಸರಿಸುವೆನೊ ಅವರೊಳಗೆ 4 ನಾ ಮಾಡಿದಪರಾಧಗಳನೆಣಿಸಿ ಬರೆವುದಕೆಭೂ ಮಂಡಲವೆ ನೆರೆ ಸಾಲದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲುಈ ಮತಿಗೆ ಆದು ಪೋಲದೋಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪಸ್ತೋಮ ಎಂದಿಗು ವಾಲದೊ |ಸಾಮಜ ವರದ ಮೋಹನ್ನ ವಿಠ್ಠಲ ನಿನ್ನ |ನಾಮವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ5
--------------
ಮೋಹನದಾಸರು