ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಮ್ಮನಿಯಲಿ ಆನಂದ ಬಂದ ನೋಡಿ ಮುಕುಂದ ಗುರುಕೃಪೆಯಿಂದ ಧ್ರುವ ಸದಮಲ ಸುಖಕಲ್ಲೋಳ ಬೆಳಗುದೋರುತಲ್ಯದೆ ಬಹಳ ಹೇಳಲಳವಲ್ಲದು ಬಲುಸೂಕ್ಷ್ಮ ತಿಳಿದವ ತಾ ವಿರಳ ಇಳೆಯೊಳು ನಿಜ ಆನಂದವು ದೋರಿತು ಸ್ವಾನುಭವಕ ಸುಕಾಲ 1 ಮಾಯವಗಂಡು ಧನ್ಯಧನ್ಯಗೈಯಿತು ಜೀವನ ತಾ ಸನ್ಮತ ಸುಖಸವಿಗೊಂಡು ಪುಣ್ಯರಥ ಪರಿಣಾಮದಲನುದಿನ ಮನಬೆರೆಯಿತು ನೆಲೆಗೊಂಡು ಸ್ಮರಣಿಯ ಸವಿದುಂಡು 2 ಸದ್ಗುರು ಎನ್ನೊಡೆಯ ಚಂದವಾಯಿತು ಆನಂದದ ಸುಖವಿದು ಮಹಿಪತಿಗೆಡೆಯಡಿಯ ಸಂದಹರೆವ ಜನ್ಮ ಮರಣದ ಹೇಳಿದ ತಾ ನಿಜನುಡಿಯ ಹೊಂದಿ ಹರುಷಬಡುವಾನಂದವುದೋರುತಿದೆ ಸಿಲುಕಡಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದುವೆ ಕೈವಲ್ಯವು | ಸದ್ಗುರುವೇ | ನಿಮ್ಮಿಂದೆವೆ ಕೈವಲ್ಯವು | ನಂದನ ಕಂದ ಮುಕುಂದನ | ಛಂದದಿ ನೆನೆವುತಾನಂದದಲಿಪ್ಪರಾ ಪ ಭಂಗ ಬಡುವಾ ಭವದಾ | ಚಿರಳಿಯೆನಿಸ್ಸಂಗ ಶಸ್ತ್ರವ ವಿಡಿದಾ | ಹಂಗವಳಿದು ದೇಹದಾ ಪ್ರಪಂಚದ ರಂಗನೊಳಗ ಬೆರೆದಾ | ಅನುದಿನ | ಮಂಗಳ ಹರಿಚರಿತಂಗಳ ಕೇಳುವಗಿಂದೇ 1 ಕಂತು ಪಿತನ ಧ್ಯಾಯಿಸೀ ಮನಸಿನಿಂದಾ | ಅಂತರಂಗದಿಪೂಜಿಸೀ | ಶಾಂತಿಯ ಗುಣ ಧರಿಸೀ | ತಂತು ವಿಡಿದು ನಿಶ್ಚಿಂತದಿ ಇಹಪರ ಭ್ರಾಂತಿಯಳಿದು ವಿಶ್ರಾಂತಿಯ ಪಡೆದವಗಿದೇ2 ಮುಂದಾಗುವ ಮುಕ್ತಿಯನು ಗುರುದಯದಿ | ಇಂದೇಕಾಣುತ ಧನ್ಯನು | ಸಂದೇಹ ವಳಿದನು ತುರ್ಯಾತೀತಾ | ವಂದಿಸಿ ಭಾವದಿ ತಂದೆ ಮಹೀಪತಿ | ದ್ವಂದ್ವ ಚರಣವನು ಹೊಂದಿದ ನಂದನಗಿದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ | ಆನಂದ ಜನನದಲಿ ಜನನಗಳ ನೀಗಿರೊಪ ಮಲಗಿ ಏಳುವಾಗ ಮಾತುಗಳನಾಡುವಾಗ | ಇಳಿಯ ಮೇಲಡಿಯಿಟ್ಟು ತಿರುಗುವಾಗ || ಜಲದಲಿ ಮಿಂದಘ್ರ್ಯೆ ಪ್ರಣವ ಜಪಿಸುವಾಗ | ಮಲಿನ ಸಂಕರನಳಿದಮಲಬೋಧನ ನೆನೆಯಿರೊ 1 ದೇವತಾ ಪೂಜೆಮಾಡಿ ಸ್ತೋತ್ರ ಪಠಿಸುವಾಗ | ಪಾವಕಾವನಿ ಸುರರ ಉಣಿಸುವಾಗ || ಕೋವಿದರ ಸಂಗಡ ಸಂತೋಷಬಡುವಾಗ | ಶ್ರೀ ವೀರ ವೈಷ್ಣವಾಚಾರ್ಯನ ನೆನೆಯಿರೊ2 ಸತಿಸುತರ ಕೂಡ ಹರಿ ಚರಿತೆಗಳ ಪೇಳುವಾಗ | ಪ್ರತಿ ದಿವಸÀ ಷಟ್ಕರ್ಮ ಮಾಡುವಾಗ || ಪತಿತ ಪಾವನ ವಿಜಯವಿಠ್ಠಲನ ಭಜಿಪ ಸದಾ |ಗತಿಯಾದ ಸುಜನರಿಗೆ ಯತೀಶ್ವರನ ನೆನೆಯಿರೊ3
--------------
ವಿಜಯದಾಸ
ಬಡಿವಾರ ನಿಮ್ಮ ಕೀರ್ತಿಅರಿಯೆವೊಪಾರ್ಥ ಸಾಕೊ ನಿನಗೆಬಡಿವಾರ ಪ. ಬೀಗನಾಡಿದ ಬಲು ಬಿಂಕದ ಮಾತು ಕೇಳಿ ಸಾಗರಶಯನ ಮುರಿದೆದ್ದಸಾಗರಶಯನ ಮುರಿದೆದ್ದ ಅರ್ಜುನ ಹ್ಯಾಂಗಂದ್ಯೊ ನಿನ್ನ ಮನದಾಗ1 ಏನಲೊ ಅರ್ಜುನ ಈ ನುಡಿ ನಿನಗ್ಯಾಕೊನೀನು ನಿಮ್ಮವಳು ತಿರು ತಿರುಗಿನೀನು ನಿಮ್ಮವಳು ತಿರು ತಿರುಗಿ ಮಾರಿದರೆಕಾಣಿಯ ಬೆಲೆಯ ಹೋಲಲಾರೆ2 ದಶರಥರಾಯನ ಭಾಗ್ಯ ವರ್ಣಿಸಲು ವಶವಲ್ಲಹೊಸದಾಗಿ ಇವಳು ಹೋಗಲಿಕ್ಕೆಹೊಸದಾಗಿ ಇವಳು ಹೋಗಲಿಕ್ಕೆ ಎನಗೆ ಈ ದೆಶೆಗೇಡಿ ಬಂದು ದಣಿಸಲಿಲ್ಲ 3 ಹಿಂದೆ ಇವಳಿಂದಲೆ ನೊಂದೆನೋ ಅನ್ನಕ್ಕೆ ಸಂದೇಹವಾಗಿ ಅಡವಿಯಸಂದೇಹವಾಗಿ ಅಡವಿಯ ತಿರುಗಿಸಿದವಳಿಗೆ ಅಂದಣ ಆನೆ ಬರಲುಂಟೆ 4 ಕಾಲ ಲಕ್ಷಣವೆಲ್ಲಿ ಅಡಗಿತ್ತೆ 5 ಅಕ್ಷ ಮ್ಯಾಲಂತರದಿ ವೃಕ್ಷದಲ್ಲಿದ್ದಾಗ ಲಕ್ಷ ಕಷ್ಟಗಳ ಬಡುವಾಗಲಕ್ಷ ಕಷ್ಟಗಳ ಬಡುವಾಗ ಇವಳ ಕೈಯ ಲಕ್ಷಣವೆಲ್ಲಿ ಅಡಗಿತ್ತೆ 6 ಬಡಿವಾರ ಬಮ್ಮ ವರ್ಣಿಸಲಾರ ಹೆಮ್ಮಿ ನೋಡಿದರೆ ವಿಪರೀತಹೆಮ್ಮಿ ನೋಡಿದರೆ ವಿಪರೀತ ಎಲೊ ಪಾರ್ಥಸುಮ್ಮನೆ ಯಾಕೆ ಮುನಿಸಾಗಿ 7 ಕೇಳಿ ನಿಮ್ಮವರ ಕೀರ್ತಿ ಭಾಳೆ ವಿಸ್ತಾರವಾಗಿ ಹೇಳಲು ಲಜ್ಜೆ ಬರತದೆ ಹೇಳಲು ಲಜ್ಜೆ ಬರ ತದೆ ನಮ್ಮ ಅಮ್ಮನ ತಾಳುವಿಕೆಯಿಂದ ಉಳಿದಾರೊ 8 ನಾರು ವಸ್ತ್ರವನುಟ್ಟು ನಾರಿ ಸಂಚರಿಸುವಾಗವೀರ ರಾಮೇಶ ಜರಿದಾಗ ವೀರ ರಾಮೇಶ ಜರಿದ ಕಾಲಕ್ಕೆ ಇವಳ ಮೋರೆ ಲಕ್ಷಣವು ಅಡಗಿತು9
--------------
ಗಲಗಲಿಅವ್ವನವರು
ಮರುಳು ಮನವೇ ವ್ಯರ್ಥ ಚಿಂತಿಸುವಿಯಾಕೋ ಹರಿ ತಾನೇ ಕಾಯ್ವ ಮನ ದೃಢವಿರಲಿ ಬೇಕೊ ಪ ಎಲ್ಲಿ ನೋಡಿದರಲ್ಲಿ ಇರುವಾತಾ ಎಲ್ಲರನು ಪೊರೆವಾತಾ ಬಲ್ಲಿದನು ಬಲಿಯ ತುಳದಾತಾ ಸೊಲ್ಲು ಸೊಲ್ಲಿಗೆ ಬಂದು ಎಲ್ಲಿವನು ಪೇಳಿದರೆ ಕಲ್ಲಾಗುವನೇ ಸ್ವಾಮಿ ಪ್ರಲ್ಹಾದ ತಾತಾ 1 ಹಬ್ಬಿರುವ ಮಾಂಸಗಾಗರ್ಭದೊಳಿರುವಾಗ ಉಬ್ಬಸವ ಬಡುವಾಗ ಸಲಹಿದವರ್ಯಾರೋ ಅಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲವ ನಿನಗೆ ತೋರಿದವರ್ಯಾರೋ 2 ವರದ ಹನುಮೇಶವಿಠಲನ ಚರಣವ ನಂಬು ಮೊರೆಯಾಗ್ವನಲ್ಲಾ ಹರಿ ಕರುಣ ಸಾಗರನೋ ಕರಿರಾಜ ಕರಿಯಲಾಕ್ಷಣಕೆ ಅವಸರದಲಿ ಗರುಡವಾಹನ ಕೃಷ್ಣ ಬರಲಿಲ್ಲವೇನೋ 3
--------------
ಹನುಮೇಶವಿಠಲ
ಸುದ್ದಿಯ ಕೊಟ್ಟು ಬಾರೆ ಶರಧಿ ಸುಮ ಗಂಭೀರೆ ನೀರೆ ಪ ಹದ್ದನೇರಿ ಮೆರೆವ ಮುದ್ದು ಮೋಹನ್ನ ಇಂದುವದನ ಗೋಪಾಲಕೃಷ್ಣಗೆ ಅ.ಪ ಮುಟ್ಟಳು ಅನ್ನ ಆಹಾರವನ್ನು ಬಿಟ್ಟಳು ಇಷ್ಟ ಪದಾರ್ಥವೆಲ್ಲ ದೃಷ್ಟೀಸಿ ನೋಡಳನ್ಯರು ಸೃಷ್ಟೀಲಿ ಭಾರಜೀವಿತ ಕಷ್ಟದೆಶೆಯಲಿರುವುಳೆಂದು1 ಇಡಳು ಕನಕಾಭರಣಂಗಳು ತೊಡಳು ವರವಸ್ತ್ರಂಗಳು ಬಡುವಾಗಿ ನಡು ಬಳುಕುತಿಹಳು ಒಡೆಯ ನೀ ಬಾರದಿರಲು ಪ್ರಾಣ ಬಿಡುವಳು ನಿಶ್ಚಯವೆಂದು 2 ಬಯಸುವಳು ನಿನ್ನ ಆಗಮನವನ್ನು ಸಯಿಸಳು ವಿರಹ ತಾಪ ಧ್ಯೇಯ ವಿಜಯ ರಾಮಚಂದ್ರವಿಠಲ ಕಾಯ ಸಮರ್ಪಿಸುವಳೆಂದು 3
--------------
ವಿಜಯ ರಾಮಚಂದ್ರವಿಠಲ
ಹಲವು ಹಂಬಲಿಸಿದಲ್ಲೇನೂ ಇಲ್ಲ ಜಲಜನಾಭನ ಕರುಣÉೂೀದಯವು ತಪ್ಪಿದ ವೇಳ್ಯಾ ಪ ಬರಿಗಂಟು ಅಪೇಕ್ಷೆ ಬಯಸುವುದೆಲ್ಲಾ ಪೂರ್ವಾಕೃತ ಇದ್ದದ್ದು ಬಿಟ್ಟದ್ದೆ ಇಲ್ಲ ಬಿರುದು ಬಾವಲಿ ದೇಹಾಭಂಗ ಬಡುವಾದೊಂದೆ ಪರಿ ವ್ಯಥೆಯಿಂದ ಫಲವೇನೊ ಇಲ್ಲ ಮುಂದಾ 1 ಬಿತ್ತಿದ ಬೀಜ ಎಷ್ಟು ಬೆಳೆಯ----ಲಿನೂ ಸುತ್ತಾ ದೇಶವು ತಿರುಗಿ ಸೂಸಿದರೇನೂ ಪತ್ರ ಬರೆದ ಬ್ರಹ್ಮ ಫಣಿಯ ಲಿಖಿತವಲ್ಲದೆ ಪ್ರತ್ಯೇಕ ನಿನಗೊಂದು ಬಾಹೋದು ಇನ್ನುಂಟೆ 2 ಅನುಭವ ಇದ್ದವಲ್ಲಾ ------ಇಲ್ಲಾ ಮನದಿ ತಿಳಿದು ಇನ್ನು ಮರಿಯದು ಎಲ್ಲಾ ಘನ್ನ 'ಹೊನ್ನೆ ವಿಠ್ಠಲ ನಾ ಕರುಣಾವಿಲ್ಲ ----- ಮನಸಿನೊಳಗೆ ಸ್ಮರಿಸಿ ಮುಕುತನಾಗೋದು ಬಿಟ್ಟು 3
--------------
ಹೆನ್ನೆರಂಗದಾಸರು