ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಹಸುಖ ಮೊದಲೇಯಿಲ್ಲ | ಕೃಷ್ಣ ಅಹಹ ಪರಸುಖವಾಗುವುದ್ಹ್ಯಾಗೊ ಪ ಸಾಹಸಿನಾನೆನುತ ಜನರ ಮೆಚ್ಚಿಸುವೊಡೆ ಕುಹಕ ಮಾತುಗಳ ಕೂಗಿ ಬಾಯಾರಿದೆ ಅ.ಪ ಶ್ರವಣ ಮನನ ನಿಧಿ ಧ್ಯಾಸನ ವೊಂ- ದೆವೆ ಮಾತ್ರವು ನಿಜವಾಗಿ ಕಾಣೆನುನಾ ಬವನಾಶಿ ಧರಿಸಿ ದಾಸನೆಂದು ನಾ ಬರಿದೆ ದೇಶಗಳ ತಿರುಗಿ ಬೆಂಡಾದೆನು 1 ಯಮನಿಯಮಾಸನ ಯೋಗ | ಗಳ ಭ್ರಮೆಯ ಪಡುತ ಬಳಲುವೆಯಾವಾಗ ಮಮಯೆಂಬುದರಿಂ ಬಂದಿತು ರೋಗ 2 ಶಂಕರ ಮುಖ ಸುರವಂದ್ಯ | ಅರಿ ಶಂಖ ಗದಾಧರ ಶ್ರೀಶ ಮುಕುಂದ ಸಂಕಟ ಬಂದಾಗ ವೆಂಕಟರಮಣೆಂದು ಮಂಕುಜನರು ಪೇಳ್ವಗಾದೆಯಂತಾಯಿತು 3 ಕಾಸಿಗೆ ತಿರುಗಿದೆನಲ್ಲದೆ | ದಿವ್ಯ ಕಾಶಿಗಯಾಯಾತ್ರೆಯ ಮಾಡಿದೆನೇ ಘಾಶಿಪಟ್ಟಿ ಸಾಕು ಸಾಕಿದರ ಗೊಡವೇ 4 ಕೊಟ್ಟದ್ದರೆ ಹರಿಕೊಡುವ | ಯಂ ಕೊಟ್ಟರುವದಕು ಕೊಡದಿರುವದಕೂ ಕೃಷ್ಣ ನೀನರಿಯದೆ ನಾನು ಸ್ವತಂತ್ರನೇ 5 ಕಣ್ಣಿಲ್ಲದ ಚಿಂತೆವಂದು | ಸದಾ ಬನ್ನ ಬಡುವದು ಯೋಚನೆಯೆರಡು ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ- ಕಣ್ಣು ಕೊಟ್ಟು ನಿನ್ನ ಸೇವೆಯ ಪಾಲಿಸೋ 6 ಛಳಿ ಜ್ವರದ ಯಾತನೆ ಪಡುವೆ | ನಿನ್ನ ಕರೆಕರೆ ಪಡಿಸುವುದು ನಿನಗೆ ತರವೇ 7 ಆರು ಜನರ ಸೇವೆ ಕೊಡಿಸೋ | ಯೀ ಆರು ಜನರ ಸಂಘವ ಪರಿಹರಿಸೋ ಮೂರು ಜನದ ಕೂಟ ಮೊದಲೇ ಬಿಡಿಸೋ ತಾಳಲಾರೆಯಿವರು ಬಲು ಕ್ರೂರಾತ್ಮರು 8 ಆಸೆಯ ಪರಿಹರಿಸಯ್ಯಾ | ನಿಜ ದಾಸನೆನಿಸಿ ನೀ ಪಿಡಿಯೆನ್ನ ಕೈಯ್ಯಾ ಈಸಲಾರೆ ಗುರುರಾಮ ವಿಠ್ಠಲ ಜೀಯಾ 9
--------------
ಗುರುರಾಮವಿಠಲ
ಎಂಥಾ-----------ಈಗ ಪಿಡಿಯೊ ಎನ್ನ ಕೈಯ್ಯ ಬೇಗ ಅನಂತಾ ಭಗವಂತಾ ಶ್ರೀಕಾಂತಾ ಜಗದಂತ ....... ಪ ಒಂದೊಂದು ದಿನವು ಎಂಬುದು ಒಂದೊಂದು ಯುಗವು ಆಗಿ ಬೆಂದು ಬಹಳ ಬೇಸರದಿಂದ ತಂದೆ ----------ಬಂದೀ ಕಂದನೆಂದು ಕರುಣದಿಂದ ---------ಗೋವಿಂದ ನಂದ ಮುಕುಂದಾ ಶ್ರೀ ಮಂದರಧರ 1 ಮಕ್ಕಳು ಮರಿಗಳು ಎಲ್ಲಾ ------ಕಾಣದ ದೇವಾ ಶುಷ್ಕ ಭೂತರಾಗಿ ಇನ್ನು ಸುಖವು ಕಾಣದೆ ---ನೆಗೊಂಡು ಬಹಳಘೋರ ನಾ ಬಡುವದು ಕಂಡು ನಿಕ್ಕಾಸಲಾರದೆ ನಿನ್ನ ಮೊರೆಯ ಹೊಕ್ಕ ಕಾಯಯ್ಯ ನೀನೆ --------- ಶ್ರೀ ಲೋಕನಾಯಕ ಹರಿಯೆ 2 ಮನಸು ನಿನ್ನ ಧ್ಯಾನವು ಬಿಟ್ಟು ತಿರಸೂ? ಚಿಂತನೆಗೊಳಗೆ ಆಗಿ ಕನಸಿನಲ್ಲಿ ಕಾಣೋನಿಲ್ಲಾ ಕಾಯದ ಸುಖವೆಂಬಾದಿನ್ನು ಅನಿಮಿತ್ತ ಬಂಧು ಕೃಷ್ಣ ಹರಿ 'ಹೊನ್ನ ವಿಠ್ಠಲ' ರಾಯ ಮನಸಿಜನಯ್ಯ ಮೋಹನ್ನ ನಿಧಾನಾ ಸುರಧೇನು ಸದ್ಗುಣಪೂರ್ಣ 3
--------------
ಹೆನ್ನೆರಂಗದಾಸರು
ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ
ಕೊಡುವವನು ನೀನು ಕೊಂಬುವನು ನಾನು ಪ ಬಡಮನದ ಮನುಜನ ಬೇಡಿ ಫಲವೇನುಅ.ಪ ಹದಿನಾರು ಹಲ್ಲುಗಳ ಬಾಯ್ದೆರದು ಬೇಡಿದರೆ ಇದು ಸಮಯವಲ್ಲೆಂದು ಪೇಳಿ ತಾನು ಮದನ ಕೇಳಿಗೆ ನೂರನೊಂದಾಗಿ ನೋಡುವನು ಮದಡ ಮಾನವನೇನು ಕೊಡಬಲ್ಲ ಹರಿಯೆ 1 ಗತಿಯಲ್ಲವೆಂತೆಂದು ನಾನಾ ಪ್ರಕಾರದಲಿ ಮತಿಗೆಟ್ಟು ಪೊಗಳಿದರೆ ಅವನು ತನ್ನ ಸತಿಸುತರ ಕೇಳಬೇಕೆಂದು ಮೊಗ ತಿರುಹುವ ದುರುಳ ಮತ್ತೇನು ಕೊಡಬಲ್ಲ ಹರಿಯೆ 2 ಹೀನ ವೃತ್ತಿಯ ಜನರಿಗಾಸೆಯನು ಬಡುವದು ಗಾಣದೆತ್ತು ತಿರುಗಿ ಬಳಲಿದಂತೆ ಭಾನು ಕೋಟಿ ತೇಜ ವಿಜಯವಿಠ್ಠಲರೇಯ ನೀನಲ್ಲದನ್ಯತ್ರ ಕೊಡುಕೊಂಬುರಂಟೆ 3
--------------
ವಿಜಯದಾಸ
ಹರಿನಿನ್ನ ಕರುಣವಿರಾಲಾವ ಭಯವು ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ - ಬಿನ್ನಪವನಾಲಿಸಿ ರೋಗಮೋಚನ ಗೈದ 1 ದಾಸಕುಲರತ್ನ ಪ್ರಾಣೇಶ ದಾಸಾರ್ಯರ ಆಸುವಂಶದ ತರುಳ ರೋಗದಿಂದಾ ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ 2 ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ ಪರಿ ಪೀಡಿಸುವದುಚಿತವೇನೊ ಶ್ರೀ ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ 3 ವಾಸವಾದ್ಯಮರನುತ ವಾಸುದೇವನೆ ನೀನು ಈ ಸಮಯದೊಳಗಿವನ ಕರುಣದಿಂದ ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ ದಾಸನೆಂದೆನಿಸಿ ಜೀವಿಸಲಿಯನವರತ 4 ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ ಬನ್ನ ಬಡಿಸಲು ಸಲ್ಲ ಇನ್ನು ನೀ ಕರುಣಿಪುದು ವರದೇಶವಿಠಲ 5
--------------
ವರದೇಶವಿಠಲ