ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆ ಮಾಡೊ ಆನಂದಮೂರುತಿ ಪ. ರÀನ್ನದ ತಳಿಗೆಯನ್ನು ಶೋಭನವಾದ ಪೊನ್ನ ಬಟ್ಟಲುಗಳ ನೆರವಿ ಶ್ರೀಹರಿಗೆ ನಿನ್ನರಸಿ ಆ ಲಕ್ಷ್ಮಿ ಸೊಸೆಯರ ಕೂಡಿ ಶಾ- ಲ್ಯನ್ನ ಸವಿಶಾಕಗಳ ನೀಡಿದ ಕೈಯಿಂದ 1 ತುಪ್ಪ ಮಧು ಚಿತ್ರಾನ್ನ ಪಾಯಸ ಕರಿಗಳ ಸಾರಸ ಭಕ್ಷ್ಯಗಳ ದಧಿ ಪಕ್ವಫಲಂಗಳು ಆ ಪದ್ಮಮುಖಿ ಬಡಿಸಿದಳು ಲೇಹ್ಯಪೇಹ್ಯವ 2 ಎನ್ನ ಕುಂದುಗಳಾಮುನಿಗೆ ದಿವ್ಯ ಅನ್ನವೊ ಮನ್ನಿಸಿ ಕರೆದು ನಿನ್ನ ಕರಕಂಜದಿಂದ ಪೂರ್ಣವಮಾಡು ಭುಜಿಸೊ ಹಯವದನ ಕೃ- ಪಾಳು ಸಕಲಲೋಕಪಾಲ ಸುರರೊಡೆಯನೆ 3
--------------
ವಾದಿರಾಜ
ಯಾದವರನ್ನ ಪಾಲಿಸುವ ಮುನ್ನಕರುಣ ಕಟಾಕ್ಷದಿನೀ ದಯ ಮಾಡೊ ಪ.ಮತ್ತೆ ಭಾಗೀರಥಿ ಜಲವಮಿತ್ರೆ ದ್ರೌಪತಿ ಎರಿಯೆಅರ್ಥಿಲೆಪಾದತೊಳೆದರುಅರ್ಥಿಲೆಪಾದತೊಳೆದು ಪ್ರಾರ್ಥಿಸಿದರುಚಿತ್ತಕ್ಕೆ ತಂದು ಕೈಕೊಳ್ಳೊ 1ಹರದಿರುಕ್ಮಿಣಿಗೆರಗಿದ್ರೌಪತಿ ಭದ್ರಾಆದರದಿಂದಪಾದತೊಳೆದರುಆದರದಿಂದಪಾದತೊಳೆದು ಪ್ರಾರ್ಥಿಸಿದರುಶ್ರೀದೇವಿ ಪೂಜೆ ಕೈಕೊಳ್ಳೆ 2ಪಂಚ ಭಕ್ಷ್ಯಪರಮಾನ್ನಪಾಂಚಾಲಿ ಬಡಿಸಿದಳುಪಂಚಪಾಂಡವರ ಸಹಿತಾಗಿಪಂಚಪಾಂಡವರ ಸಹಿತಾಗಿ ಶ್ರೀಕೃಷ್ಣಚಂಚಲಾಗದಲೆ ಸವಿದುಂಡ 3ಅಕ್ಕ ರುಕ್ಮಿಣಿ ಭಾಮೆಮಿಕ್ಕ ತಂಗಿಯರ ಸಹಿತಸಖ್ಯ ಭಾವದಲಿ ಉಣುತಿರೆಸಖ್ಯ ಭಾವದಲಿ ಉಣುತಿರೆ ಹರುಷದಿದೇವಕ್ಕÀಳು ನೋಡಿ ಬೆರಗಾಗಿ 4ಇಂದುರಾಮೇಶ ತಾನುಮಿಂದು ಮಡಿಯನುಟ್ಟುಬಂಧು ಜನಸಹಿತ ಸವಿದುಂಡಬಂಧು ಜನಸಹಿತ ಸವಿದುಂಡ ಐವರಿಗೆಆನಂದ ಬಡಿಸಿದನು ಅತಿ ಬ್ಯಾಗ 5
--------------
ಗಲಗಲಿಅವ್ವನವರು
ಹೆಂಡಿರನಾಳುವಳೀ ಕನ್ನಿಕೆ |ಗಂಡನಿಲ್ಲದ ಹೆಂಗುಸೀ ಕನ್ನಿಕೆ ಪಅಂಥಿಂಥಿವಳೆಂದು ಅಳವಡಿಸಲು ಬೇಡ |ಇಂಥ ಸೊಬಗನಂತ ಏನೆಂಬೆನೊ ||ಸಂತತಸುರ - ದನುಜರಿಗೆ ಪ್ರಪಂಚದಿ |ಪಂಕ್ತಿಯೊಳಮೃತವ ಬಡಿಸಿದಳು 1ಶಿಶುವು ಬೊಂಬೆಯ ತೋರ ಆಲದೆಲೆಯ ಮೇಲೆ |ಅಸುಮಯಜಲದಲಿ ಮಲಗಿ ಮೈಮರೆದಳು ||ಒಸಗೆಯಾಗದ ಮುನ್ನ ಹೊಕ್ಕುಳ ಹೂವಿನಲಿ |ಬಸುರಲಿ ಬೊಮ್ಮನ ಪಡೆದಳೀ ಕನ್ನಿಕೆ 2ಬೇಗೆಗಣ್ಣವನಿಗೆ ಬಿಸಿಗೈ ತಾಗುವಾಗ |ಭೋಗದ ಸೊಗತೋರಿ ಬೂದಿಯ ಮಾಡಿ ||ಭಾಗೀರಥಿಯ ಪಿತ ಬೇಲೂರ ಚೆನ್ನಿಗ |ಯೋಗಿ ಪುರಂದರವಿಠಲನೆಂಬ3
--------------
ಪುರಂದರದಾಸರು