ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡೊ ಬಿಡೊ ಬಡಿವಾರಾ ಬೀರದಿರು ನಡಿ ನಡಿ ಹೋಗೈ ಸಾಕು ಪ ಗಂಡನುಳ್ಳವಳೆಂದರಿಯದೆ ನೀನೆಂಥಾ ಪುಂಡಾಟಿಕೆ ಯಾರಿಗೆ ಬೇಕೊ 1 ತಕ್ಕ ಬುದ್ಧಿ ಹೇಳುವರಿಲ್ಲದೆ ನಿ - ನ್ನಕ್ಕ ತಂಗಿಯರನೆ ಸೋಕೊ 2 ಶ್ರೀದವಿಠಲ ಸುಮ್ಮನೆ ಹೋಗದೆ ನಡು ಬೀದಿಯೊಳಗೆ ಮಾಡೊರೆ ಹೋಕು 3
--------------
ಶ್ರೀದವಿಠಲರು
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ