ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪುವುದೇ ಬ್ರಹ್ಮಕೆ ಗುರಿಯು ನೀನುತಪ್ಪಿದರು ತಾನು ತಪ್ಪದು ಅರಿಯೋ ನೀನು ಪ ಕರವ ಭೂಮಿಗೆ ಬಡಿಯಲು ಪೆಟ್ಟಹೊರಗನೆ ಮಾಡುವುದು ಆವ ಪರಿಪರಿಪೂರ್ಣ ಬ್ರಹ್ಮ ತುಂಬಿರಲು ನೀನುಪರವೆಂದು ಕಾಣೆ ಸಂಶಯವೆ ನಿಜವಿರಲು 1 ಗುಡ್ಡಕೆ ಗುರಿಯ ನೋಡಿದೆ ಅದುಅಡ್ಡಬಿಟ್ಟು ಬೇರೆ ನಿಲ್ಲುವುದೆ ನೋಡೆಖಡ್ಡಿಕೊಳ್ಳದು ಬ್ರಹ್ಮವಾಡೆ ನಿನ್ನದೊಡ್ಡ ಬ್ರಹ್ಮವೆನಲು ಸಂಶಯ ನೋಡೆ 2 ಆಕಾಶ ನೋಡುವುದೇ ತಾನು ಆಆಕಾಶ ನೋಡಲು ನೂಕು ನುಗ್ಗೇನುಏಕ ಚಿದಾನಂದ ನೀನು ಜಗದೇಕ ಬ್ರಹ್ಮವೆಂದು ನಿನ್ನ ನೀನೇ ಕಾಣ 3
--------------
ಚಿದಾನಂದ ಅವಧೂತರು
ಧ್ರುವತಾಳ ಹಿಂದಿನ ಜನ್ಮಜನ್ಮಾಂತರದಿ ಮಾಡಿದಘವ ನಿವಾರಿಸುವರು ನಿನ್ನ ದಾಸರು ದುರಿತ ದುರ್ಜಯ ದುಃಖವ ದೂರ ಮಾಡುವರು ನಿನ್ನ ದಾಸರು ಮುಂದಣ ಅಪಾರ ಆನಂದ ಸುಖವ ಅನವರತ ಈವರು ನಿನ್ನ ದಾಸರು ಯೆಂದು ಇಲ್ಲದಿರೆ ಬ್ಯಾರೆಗತಿಯುಂಟೆ ನಿನ್ನನರಿವ ಬಗೆ ಮತ್ತುಂಟೆ ಎಲೆದೇವ ನಂದನಂದನ ನಿನ್ನವರೆ ಜೀವನ ಅಚಲಾನಂದವಿಠಲರೇಯ ಬ್ಯಾರೆಗತಿ ಮತ್ತುಂಟೆ 1 ಮಠ್ಯತಾಳ ಭೂತದಯಾಪರ ನರನಾಥ ದೇವತೆಯೆಂಬರು ಭೂತವಿರೋಧ ಮಾಡಿ ಕೈಯ್ಯಾತು ಬೇಡುವ ದೈವವ ಸಾತ್ವಿಕವೆಂದು ಬಗೆವರು ಜನರು ಈ ರೀತಿಯೇನೆಂಬೆ ಅಜಾತ ಸಕಲದೇವರ ದಾತನೆ ಅಚಲಾನಂದವಿಠಲ ನೀನಿರೆ ಸಾತ್ವಿಕವೆಂದು ಅನ್ಯದೈವವ ಈ ಭೂತಳದ ಜನರು ಬಗೆವರು ಪ್ರತಿದಿನ 2 ತ್ರಿಪುಟತಾಳ ಮಾನವನೆ ಕೇಳು ಕಬ್ಬಿಣ ಸೋಸಿ ಕಾಸಿ ಬಡಿಯಲು ತಾನು ಪರುಷ ಸೋಕದೆ ಸುವರ್ಣ ಅಪ್ಪುದೇ ಅನಾದಿ ಅವಿದ್ಯ ತಾಪದಿಂದ ಬೆಂದು ತಾನು ನೀರೊಳು ಮಿಂದರೇ ಹೋಹುದೇನೊ ಅನಾದಿದೈವ ಅಚಲಾನಂದವಿಠಲನ ಧ್ಯಾನಮಾಳ್ಪರ ಪಾದಪರುಷ ಸೋಕದನಕ 3 ಅಟ್ಟತಾಳ ಎನ್ನ ಹಳಿಯಲಿ ಉಗುಳಲಿ ಬಂಧುಗಳೆನ್ನ ಮನ ರಂಗ ನಿನ್ನನೆ ನೆಚ್ಚಿಹ್ಯದೆನ್ನಮನ ಕೃಷ್ಣ ನಿನ್ನನೆ ನಂಬಿಹ್ಯದೆನ್ನ ಮನ ಅಚಲಾನಂದವಿಠಲರೇಯ ನಿನ್ನವರೊಲುಮೆಯ ಸಾರಿತೆನ್ನ ಮನ 4 ಆದಿತಾಳ ಹಲವು ಮಾತೇನು ಹಲಧರನನುಜನ ಚೆಲುವಿಕೆಯನೆ ಕಂಡು ಮನಸೋತೆನವ್ವ ಕೆಲಬಲದಾ ಕುಲದವರೆನ್ನ ಹಳಿಯಲಿ ಚಲಿಸದು ಚಿತ್ತ ಚಂಚಲವಾಗದೆನ್ನ ಮನ ಕೆಲಚಿತಿ ವೆಂಣೆಲ್ಲ (?) ತಾನೊಲಿವಂತೆ ಮಾಡಿದ ನಿಲುಕುವನಚಲಾನಂದವಿಠಲರೇಯ ಕ್ಯಲಬಲದ ಕುಲದವರೆನ್ನ ಹಳಿಯಲಿ 5 ಜತೆ ಬೆಂದ ಸಂಸಾರದಿ ಬಂದು ಬಂದು ಹೋದೆನೊ
--------------
ಅಚಲಾನಂದದಾಸ
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಸಜ್ಜನರ ಸಂತಾಪ-ಕುಲಕೆ ಮೃತ್ಯುವುಕಂಡ್ಯ-ಮನವೇ ಪ ನಿರ್ಜರೇಶಗು ಹಾನಿ-ತಪ್ಪದೈ ಇದರಿಂದ ಅ.ಪ. ಅಂದು ದುರ್ಯೋಧನನು ಸಂದ ಸಭೆಯೊಳು ಪಾಂಡು ನಂದನರ ಸತಿಮಾನ ಕಂದಿಸಲೆತ್ನಗೈಯೆ ತಾಪ ಬಂದು ಬಡಿಯಲು ಖಳಗೆ ಬಂಧು ಬಳಗವುಸಹಿತ ಪೊಂದಿದನೆ ಯಮಸದನ 1 ತ್ರೇತೆಯಲಿ ರಾವಣನು ನೀತಿಮರೆತವನಾಗಿ ಖ್ಯಾತ ನಂದಿಯ ನೋಡಿ ಕೋತಿ ಚೇಷ್ಟೆಯನಡಿಸೆ ಸೀತೆ ದ್ರೋಹದಿ ಹಾಗೆ ವ್ರಾತ್ಯ ಕುಲಸಹಿತ ಖರೆ 2 ಇಂದ್ರ ನೆನಿಸಿದ ನಹುಷ ಪೊಂದಿದನು ಸರ್ಪತ್ವ ಕುಂದದಾ ಯಾದವರು ಪೊಂದಿದರು ಕುಲನಾಶ ಚಂದ್ರಮೌಳಿಯ ಅಂಶ ಚಂಡಮುನಿ ದೂರ್ವಾಸ ನೊಂದು ಧಾವಿಸಿ ಜಗದಿ ಬಂದು ನಿಂತುದನರಿಯ 3 ಶರಧಿ ಧುಮುಕಲಿಬಹುದು ಉರಿಯ ನುಂಗಲಿ ಬಹುದು ಉರಗವನು ಪಿಡಿಯಬಹುದು ಹರಿಯ ಶರಣರ ದ್ರೋಹ ತಿರುಗಿದರು ಮುರ್ಲೋಕ ಹರಿಸಲಾಗದು ಅವರೆ ಕರುಣಗೈಯದೆ ಮತ್ತೆ 4 ಭಕ್ತವತ್ಸಲ ಹರಿಯು ಭಕ್ತತಾಪವ ಸಹಿಸ ಶಕ್ತಿಸಾಹಸ ಜರಿದು ಉಕ್ತಿಲಾಲಿಸಿ ಬೇಗ ಕರ್ತೃ ಹರಿಯೆಂದರಿತು ಭಕ್ತರನು ಸೇವಿಸುತ ನಿತ್ಯದೊರೆ “ಶ್ರೀಕೃಷ್ಣವಿಠಲ” ಕರುಣವ ಘಳಿಸು 5
--------------
ಕೃಷ್ಣವಿಠಲದಾಸರು