ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದರೋದ್ಧರಾ-ಬಂದು ಕಣ್ಣಮುಂದೆ ನಿಲ್ಲೋ ಪ ಬಡವರೊಡೆಯನೆಂದು ನಿನ್ನ ಅಡಿಯ ಬಿಡದೆ ನಂಬಿದೆನೋ ಕಡುದಯಾನಿಧೆ ಬಡಕುಚೇಲನ ಪಿಡಿಯವಲಿಗೆ ಒಲಿದು ಪೊರೆದೆ1 ಸರ್ವಸಾರಭೋಕ್ತ ನೀನೆ ತೋರ್ವುದಿಲ್ಲ ಕೊಡಲು ನಿನಗೆ ಸರ್ವದೇವಸಾರ್ವಭೌಮನೀ ನೋರ್ವ ವ್ಯಾಪ್ತನಿರ್ಲಿಪ್ತ 2 ಪ್ರಣತಕಾಮದನೆಂದು ಅಂದು ಅಣುಗಧೃವನಾಕ್ಷಣದಿ ದಣಿಸಲಾಗದೋ ದೀನರಕ್ಷಕ 3 ಮುಕುತರೊಡೆಯ ಭಕುತವತ್ಸಲ ಯುಕುತಿತೋರದೊ ನಿನ್ನ ಧ್ಯಾನಕೇ ಶಕುತಿಯಿತ್ತು ಸಲಹೊ ಎನ್ನನು ಸಕಲಲೋಕೋದ್ಧ್ದಾರ ಧೀರ 4 ಎಲ್ಲಜನರ ಪೊರೆಯಲು ಶ್ರೀನಲ್ಲ ನಿಂತೆಯೊ ಶೇಷಶೈಲದಿ ವಲ್ಲಭಾ ಶ್ರೀ ವೆಂಕಟೇಶ ನೀ- ನೆಲ್ಲಬಲ್ಲೆನ್ನ ಸೊಲ್ಲ ಲಾಲಿಸೊ 5
--------------
ಉರಗಾದ್ರಿವಾಸವಿಠಲದಾಸರು
ಮನ್ಮನೋಹಾರಕ ಪ ರಾಮ ದಶರಥ ರಾಮ ಮಂಗಳನಾಮ ಶ್ರೀ ರಘುರಾಮ ಗುಣಗಣಧಾಮ ಸಜ್ಜನಪ್ರೇಮ ಹೇ ಜಯ ರಾಮ ಸೀತಾರಾಮ ರಘುವರ ಅ.ಪ ಕೂಡಲು ಕೋಪದಿ ಗೌತಮಮುನಿ ತರಳೆಯ ಶಪಿಸಿರಲು ಕಲ್ಲಾಗಿ ಬಿದ್ದಿರೆ ಪಾದಗಳ ರಜದಿಂ ಸುವಾರ್ತೆಯ ಕೇಳಿ ಬಂದಿಹೆ 1 ಗಿಡ ಮರವಲೆದು ತಂದು ಫಲಮೂಲಗಳನು ಒಡೆಯ ನೀ ಬರುವೆಯೆಂದು ಕೇಳುತ ತಾನು | ಬಡವರೊಡೆಯ ನೀನೆಂದರಿತು | ಕಡುಹಿತದೊಳೆಂಜಲ ಫಲಗಳುಣಿಸಲು| ಕೇಳಿ ಬಂದಿಹೆ 2 ಛಲದಲೋಡಿಸಿ ರಾಜ್ಯದಿ ಗೆಳೆಯ ಮಾರುತಿಯಿಂದಲರಿತು ಗಳಿಸಿದ್ವಾರ್ತೆಯ ಕೇಳಿ ಬಂದಿಹೆ 3 ಸತಿ ವರಪತಿವ್ರತೆ ಸೀತೆಯ ಪರಿಪರಿಯಿಂದಲಿರದೆ ದುರುಳ ರಾವಣನ ಭಂಗಿಸಿ ಹೊರದೂಡಲವ ನರಸಿ ನಿನ್ನಯ ಪರಮ ಪಾದಾಶ್ರಯವ ಬೇಡಲು ಪೊರೆದ ವಾರ್ತೆಯ ಕೇಳಿ ಬಂದಿಹೆ4 ಪರಮಪುರುಷ ನೀನೆಂದು ನಂಬಿದೆ ಸಿರಿಯರಸ ಪ್ರಭುವು ನೀನೆಂದು ಚರಾಚರ ಗುರುವು ಪ್ರಭುವು ನೀನೆಂದು ಇಂದು ತರಣಿ ಮಣಿ ಸಾರ್ವಭೌಮನೆ ಶರಣರಘ ಕೋಟಿಗಳ ಕಳೆವನೆ ಶರಣ ಬಂದಿಹೆನೆನ್ನ ಪಾಲಿಸದಿರುವರೇ ರಘುರಾಮ ವಿಠಲ 5
--------------
ರಘುರಾಮವಿಠಲದಾಸರು
ಸ್ಮರಿಸು ಸಂತತ ಹರಿಯನು ಮನವೇ ಪ ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂಗರದೊಳಗೆ ಕಾಯ್ದು ದೊರೆಯ ಜಗದೀಶ ಅ.ಪ. ಪರ ಸೌಖ್ಯ ದಾನಿಗಳರಸನೆಂದು ಸಾನುರಾಗದಿ ನಂಬಿದ ಜನಕೆ ಸುರ ಮೋದ ಸಲಿಸುವ ಶ್ರೀಮ ಪತಿ ಸಾಮ ಗಾನ ಲೋಲನ ಪ್ರಸಾದಾ ಪಾದಾ 1 ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲಿ ನೆಲೆಸಿಹನು ಬಲ್ಲಿದನು ಭಾಗ್ಯವಂತ ನಂಬಿದವರಿ ಗಲ್ಲದೆ ಒಲಿಯ ಭ್ರಾಂತಾ ದುಷ್ಟ ಜನ ರೊಲ್ಲ ನಿಶ್ಚಯ ಮಹಂತಾರೊಡೆಯ ಕೈ ವಲ್ಯದಾಯಕನ ಇಂಥಾ ಪಂಥಾ 2 ಅಣುವಿನೊಳಗಣುವಹನು ಘನಕೆ ಘನತರನಹನು ಅಣು ಮಹದ್ವಿಲಕ್ಷಣಾ ಕಲ್ಯಾಣ ಗುಣಜ್ಞಾನ ಘನಲಕ್ಷಣಾ ಸಂಪೂರ್ಣ ಮನ ಮುಟ್ಟಿ ಕರೆದಾಕ್ಷಣಾ ಬಂದೊದಗಿ ಕುಣಿವ ಲಕ್ಷ್ಮೀ ವಕ್ಷನಾ ಅನಪೇಕ್ಷನಾ 3 ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ ಒಲಿವ ಸರಿ ಬಂದ ತೆರದಿ ಗುಣಕರ್ಮ ಕುಲಶೀಲಗಳನೆಣಿಸನರಿದೀ - ಭಕುತಿ ಫಲವ ಕೊಡೆ ತಾ ತವಕದಿ ಶಬರಿ ಎಂ ಶರಧಿ ಭರದೀ 4 ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು ನೀಡಿ ನೀಡಿಸುವ ಪಿಡಿವಾ ಪಿಡಿಸುವನು ಬೇಡಿ ಬೇಡಿಸುವ ಬಡವರೊಡೆಯ ಕೊಂ ಡಾಡುವರ ಒಡನಾಡುವಾ ಈ ಮಹಿಮೆ ಗೀಡೆಂದು ಆವ ನುಡಿವಾ ಕೆಡುವಾ 5 ಕೋದರಾದ್ಯಮರ ವ್ರಾತಾ ಸಹಿತ ಮಹ ದಾದಿ ಪೃಥ್ವಂತ ಭೂತಾದೊಳು ನಿಲಿಸಿ ಕಾದುಕೊಂಡಿಹ ವಿಧಾತಾ ಅಂಡತ್ರಿದ ಶಾಧಿಪನ ಸೂತ ಸಚ್ಚರಿತಾ 6 ನಿಗಮ ಸಂಚಾರ ಶ್ರೀ ಜಗನ್ನಾಥವಿಠಲರೇಯಾ ತನ್ನ ಪಾ ದಗಳ ಧ್ಯಾನಿಪರ ನೋಯಾಗೊಡದಂತೆ ಮಾಯಾ ರಮಣ ನಮ್ಮ ನಗಲಿ ಸೈರಿಸನು ಪ್ರಿಯಾ ಧ್ಯೇಯಾ 7
--------------
ಜಗನ್ನಾಥದಾಸರು