ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಶರಥೇ ದಯಮಾಡೊ ನಿನ್ನ ದಾಸರ ದಾಸನ ನೋಡೋ ಪ ನೀರಜಾಕ್ಷ ನಿಜಮಾಯಾ ಮಮತೆ ಸಂ- ಸಾರಶರಧಿಯೊಳು ಬಿದ್ದು ಪಾರಗಾಣದೆ ಪರಿದು ಪೋಗುವೆನು ತಾರಕ ನೀನೆನಗಿದ್ದು ಹರಿ ಹರಿ 1 ತುಂಬಿದ ಭಂಡಿಗೆ ಮೊರ ಭಾರವೆ ಎನ- ಗಿಂಬಿಲ್ಲವೆ ನಿನ್ನಲಿ ನಂಬಿದ ಭಕ್ತರ ಸಲಹುವ ವಿಶ್ವಕು- ಟುಂಬಿ ಎನಿಸಿಕೊಳುವಲ್ಲಿ ಹರಿ 2 ಬಲ್ಲಿದರೊಳು ಬಡವರಿಗಾಶ್ರಯ ನೀ ಬಲ್ಲೆ ಮತ್ತೆ ಎನಗೀಗ ಎಲ್ಲಿದ್ದರು ಶ್ರೀದವಿಠಲ ಬಿಡ ದಲ್ಲೂ ನಿನ್ನ ದಯ ಬೇಗ 3
--------------
ಶ್ರೀದವಿಠಲರು