ಕೊಡುವಕರ್ತ ಬೇರೆ ಇರುತಿರೆ -ಬಿಡುಬಿಡು ಚಿಂತೆಯನು ಪ.ಒಡೆಯನಾಗಿ ಮೂಜಗವನು ಪಾಲಿಪ |ಬಡವರಾಧಾರಿಯು ಭಕ್ತರ ಪ್ರಿಯನು ಅಪಕಲ್ಲಿನೊಳಗೆ ಇರುವ - ಕಪ್ಪೆಗೆ - |ಅಲ್ಲೆ ಉದಕಕೊಡುವ |ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |ವಲ್ಲಭಶ್ರೀಹರಿ ಎಲ್ಲಿಯು ಇರುತಿರೆ|1||ಆನೆಗೈದುಮಣದಾ - ಆಹಾರವ |ತಾನೆ ತಂದು ಕೊಡುವ |ದೀನರೊಡೆಯ ಶ್ರೀನಿವಾಸ ದಯಾನಿಧಿ |ಮಾನದಿಂದಲಿ ಕಾಯ್ವ ಭಾನುಕೋಟಿತೇಜ2ಸರಸಿಜಾಕ್ಷ ತನ್ನ - ಸೇರಿದ |ನರರನು ಬಿಡನಣ್ಣ |ಪರಮದಯಾನಿಧಿ ಭಕುತರ ಸಲಹುವ |ಪುರಂದರವಿಠಲನು ಪುಷ್ಪಶರನ ಪಿತ 3