ಎಂಥ ಕರುಣನಿಧಿಯೊ ನಮ್ಮನಂತ ರೂಪನು
ಎಂಥ ಕರುಣನಿಧಿಯೊ ನಮ್ಮನಂತ ರೂಪನು
ಕಂತುಪಿತನು ಸಂತತ ಭಕ್ತರ ಹೃದಯದಿ
ನಿಂತು ಕಾರ್ಯ ಮಾಡುತಿಹನು ಪ
ಏಕದಶಿಯ ನಿಶಿಯೊಳಾನು ತೋಕರುದರಕೆ
ಬೇಕಾದೀತು ನೀಡಿ ಹೊರಗೇಕ ಕಾಲಕೆ
ಕಡದಿದೇಕ ಸರ್ಪಪಾವಕೆ ಶೋಕಹರಣ ಹರಿಯ ನೆನೆ
ಶ್ರೀಕರನೆನಕೈಯ ಪಿಡಿದಾ 1
ಕಡಲಶಯನನನುದಿನದೊಳು ಬಿಡದೆ ಭಜಿಸುತಾ
ಕಡಲ ಮಗಳ ಕರುಣವಿಲ್ಲದೆ ಬಡವನೆನಿಸುತಾ
ಇಡಲು ಹೆಜ್ಜೆ ಮಡದಿಯೆನ್ನನೊಡಸಿ ನುತಿಸುತಾ
ಸಡಗರ ದಿಗ್ವಿಜಯರಾಮ ನುಡಿಯವಿಡಿದ ಧ್ಯಾನತೀರ್ಥ
ಮನದಿ ನಲಿವ ಹರಿಯು 2
ಕಾಲ ಕಳೆಯುತಾ
ಇರಲು ಕಾಯಕೆ ವ್ಯಾಧಿ ತೊಡರಿ ಬಾಧೆಗೊಳಿಸುತಾ
ಹರಿ ಪೂಜೆಗೆ ಹರಿವ ಮನವ ಕಟ್ಟುಮಾಡುತ
ಹರಿಯ ಧ್ಯಾನದರಿವು ಹಾರಿ ಉರುಳುತಿರಲು ಧರೆಯ ಮೇಲೆ
ಕರುಣದಿ ನರಸಿಂಹವಿಠಲ ದಣುವನಳಿದು ತನುವ ಪೊರೆದಾ 3