ಪಡೆದಲ್ಲದೆ ಮಿಗಿಲು ಬರಲರಿಯದು
ಎಡೆ ಬಿಡದೆ ಎಲೆ ಮನವೇ ಏಕೆ ಬಳಲುವಿ ವೃಥಾ ಪ
ವನನಿಧಿಯೊಳು ಪೊಕ್ಕು ಸಲಿರೆಡಿ ನೋಡಿದರೂ
ಭರದಿ ಬಲುಭಾರವನು ಹೊರಲಿ ಬೆನ್ನಿಲಿ
ಧರಗೆ ತಲೆಯನ್ನು ಬಾಗಿ ತಾನು ಯೋಚನೆ ಮಾಡಿ
ಪರಿ ಪರಿಯಲಿ ಭಯಂಕರ 1
ಬಡವನೆಂದ್ಹೇಳ ಭರಬಾಗಿಲಲಿ ನಿಂದಿರಲು
ದೃಢದಿ ವೈರಿಗಳ ಖಂಡಿಸಲು ಮುದದಿ
ಅಡವಿ ಸಂಚರಿಸುತಲಿ ಹಾರೈಸಿ ಹುಡುಕಿದರು
ಕಡು ಕಳ್ಳತನ ಕಲೆತು ಕಂಡಕಡೆ ತಿರುಗಿದರು 2
ಬರಿಯ ಬತ್ತಲು ನಿಂತು ನರರಿಗ್ಹೊಂನವ ತೋರಲು
ತುರಗವನ್ನೇರಿ ಧರಣಿಯನು ಪಾಲಿಸಲಿ
'ವರ ಹೆನ್ನೆಪುರನಿಲಯ ನರಹರಿಯು ಮಾಡಿದ್ದ
ಬರಿದೆ ಚಿಂತಿಸಿ ನೀನು ಭಾಗ್ಯವದರಿಂದೇನು 3