ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ಪ
ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನಬೇಸರಿಸಿ ಬೇಡ ಬಂದುದಿಲ್ಲವಾಸುದೇವನೆ ನಿನ್ನ ದಾಸರ ದಾಸರದಾಸರ ದಾಸ್ಯವ ಕೊಡು ಸಾಕೆಂದರೆ 1
ಸತಿಸುತರುಗಳ ಸಹಿತನಾಗಿ ನಾಹಿತದಿಂದ ಇರಬೇಕೆಂಬೊದಿಲ್ಲಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನಕಥಾಮೃತವನೆ ಕೊಡು ಸಾಕೆಂದರೆ 2
ಸಾಲವಾಯಿತೆಂದು ಸಂಬಳ ಎನಗೆಸಾಲದೆಂದು ಬೇಡ ಬಂದುದಿಲ್ಲನಾಲಗೆಯಲಿ ನಿನ್ನ ನಾಮದುಚ್ಚರಣೆಯಪಾಲಿಸಬೇಕೆಂದು ಬೇಡಿದೆನಲ್ಲದೆ3
ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದುಬಡವನೆಂದು ಬೇಡ ಬಂದುದಿಲ್ಲಒಡೆಯ ನಿನ್ನಡಿಗಳಿಗೆರಗುವುದಕೆ ಮನಬಿಡದಿಹದೊಂದನು ಕೊಡು ಸಾಕೆಂದರೆ4
ಆಗಬೇಕು ರಾಜ್ಯಭೋಗಗಳೆನಗೆಂದುಈಗ ನಾನು ಬೇಡ ಬಂದುದಿಲ್ಲನಾಗಶಯನ ರಂಗವಿಠಲ ನಾ ನಿನ್ನ ಬಾಗಿಲ ಕಾಯುವ ಭಾಗ್ಯ ಸಾಕೆಂದರೆ5