ಶಾಂತನಾಗು ಮನಸೆ ನೀ ಶಾಂತನಾಗು
ಕಂತುಪಿತನ ಅಂತರಂಗದಿ ಧ್ಯಾನಿಸುತ್ತ ಪ
ಪೊಡವಿಜನರ ನಡೆಯ ಕಂಡು
ಮಿಡುಕು ಗುಣವ ಕಲಿಯ ಬೇಡ
ಕೊಡುವ ಸ್ವಾಮಿ ಬಡವನಿಹನೆ
ದೃಢವಿಟ್ಟು ಅರಿದು ನೋಡು 1
ಭೂಮಿಯವರು ಕೈಯ ಬಿಡಲು
ಸ್ವಾಮಿಕಾರ್ಯ ನಿಲ್ಲುತಿಹ್ಯದೆ
ಪಾಮರಾಗದೆ ಸ್ವಾಮಿಸೇವೆ
ನೇಮವಹಿಸಿ ಮಾಡು ಬಿಡದೆ 2
ಪಾಪಿನರರ ಮಾತಿಗಾಗಿ
ಕೋಪಗೊಳ್ಳದೆ ಸತ್ಯನಾಗು
ಗೋಪಾಳ ಸಣ್ಣದಲ್ಲ ನಂಬು
ಭೂಪ ಶ್ರೀರಾಮನೊಲಿದು ಕೊಡುವ 3