ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ ಧ್ರುವ
ನಾಲ್ಕಾರು ಹದಿನೆಂಟು ಮಂದಿಯ ಕೇಳಿದೆ
ಸಿಲುಕನೆಂದವರಾಡುದೆ
ಮಲಕು ಎಂಬತ್ತು ನಾಲ್ಕು ಲಕ್ಷ ನೂ ಸೋಸಿದೆ
ನಿಲುಕಿ ನಿನ್ನ ನೆಲೆ ನಿಜವು ದೋರದೆ 1
ನಾನಾ ಮತ ನಾನಾ ಮಾರ್ಗ ಶೋಧಿಸಿದೆ
ಖೂನ ನಿನ್ನದು ತಿಳಿಯದೆ
ನಾನು ನಾನೆಂಬವರಿಗೆ ಅನುಸರಿಸಿದೆ
ನೀ ನಿಹ ಸ್ಥಳದ ಗಾಳಿಯು ಬೀಸದೆ 2
ಬೀಳದವರ ಕಾಲುಬಿದ್ದು ನಾ ಕೇಳಿದೆ
ಸುಳಹು ನಿನ್ನದು ತೋರದೆ
ತಲೆ ಕೆಳಗನೆ ಮಾಡಿ ತಪಸವ ಮಾಡಿದೆ
ಒಲವು ನಿಮ್ಮದು ಎಂದಿಗೆ ಅಗದೆ 3
ಬಡದ ಬವಣೆ ಬಟ್ಟು ಹುಡುಕದಾ ಹುಡುಕಿದೆ
ತುಡಕು ನಿಮ್ಮದು ತಿಳಿಯದೆ
ಒಡನೆ ಎನ್ನೊಳು ಬಂದು ಅಡಕವ ಹರಿಸಿದೆ
ಬಡವನಾಧಾರೆಂದು ಕೈ ಬಿಡದೆ 4
ಮನೋನ್ಮನವಾಗಿ ಕಂಗಳ ತೆರೆಸಿದೆ
ಸ್ವಾನುಭವನೇ ಬೀರಿದೆ
ದೀನಮಹಿಪತಿ ಮನೋಹರಣ ಮಾಡಿದೆ
ಅನುದಿನ ಘನಸುಖದೊಳಗಿರಿಸಿದೆ 5