ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಿಯ ನೀನಹುದೊ ಎನ್ನ ಬಡವನಾಧಾರಿ ನೀನು ಧ್ರುವ ಪೊಡವಿಯೊಳಗೆ ಎನ್ನ ಬಿಣದೆ ಸಲಹುತಿಹ್ಯ ಅಡಿಗಡಿಗೆ ತಂದು ನೀ ಪಡಿಯ ನಡೆಸುವ ಸ್ವಾಮಿ 1 ಪಿಡಿದು ಎನ್ನ ನೀ ಕೈಯ ಕಡೆಗಾಣಿಸುವಿ ಪೂರ್ಣ ಬಿಡಿಸಿ ಧಾವತಿಯಿಂದ ಕೊಡುವಿ ತಂದು ನಿಧಾನ 2 ಕೊಂಡಾಡಲಳವೆ ನಿನ್ನ ಮಂಡಲದೊಳು ಕೀರ್ತಿ ಪಿಂಡ ಬ್ರಹ್ಮಾಂಡ ಪರಿಪೂರ್ಣವಾಗಿಹ ದೇಹ 3 ಕೊಳದೆ ಸೇವೆಯ ನಿನ್ನ ಅಳೆದು ನಡೆಸುವ ಪಡೆಯ ಪಾಲಕನಹುದೊ ಎನ್ನ ಮೂಲೋಕದೊಡಿಯನೆ 4 ನಿತ್ಯನಿಜವಾಗ್ಯಾಗ ಹೊತ್ತು ನಡೆಸುವ ಪಡೆಯ ಭೃತ್ಯ ನಿಜ ದಾಸಮಹಿಪತಿಗಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ನೋಡುವರೇನೋ ಕೃಪಾಸಿಂಧು ಶ್ರೀಗುರು ಒಪ್ಪಿಸಿಕೊಂಡರೆ ತಪ್ಪಾರಿಸುವರೆ ಧ್ರುವ ಒಡಲಹೊಕ್ಕವರವಗುಣವ ನೋಡುವರೇನೊ ಒಡಿಯನೆಂದವರ ತಾ ಕೈಯ್ಯ ಬಿಡುವರೆ ಮಡದಿ ಮಕ್ಕಳೆನಿಸಿ ಕಡೆಗಣ್ಣ ನೋಡುವರೆ ಒಡುಹುಟ್ಟಿದವರಿಗೆರಡ ಬಗೆವರೇನಯ್ಯ 1 ಬಡವರ ಮಕ್ಕಳ ಮಡುವಿನೊಳು ಧುಮುಕಿಸಿ ಕುಡಗೋಲ ಕುಂಬಳ ಕೊಟ್ಟವರ ಕೈಯ್ಯ ಒಡನೆ ಹೋಳುವದುಚಿತವೇನಯ್ಯ 2 ಬಡವನಾಧಾರಿ ಎಂದು ನಾ ನಿಮ್ಮ ಪೊಡವಿಯೊಳು ಶ್ರೀಪಾದ ದೃಢದಲಿ ನೋಡು ಕರುಣಾಲೆನ್ನ ನೀಡಿ ಅಭಯ ಹಸ್ತದಿ ಮೂಢ ಮಹಿಪತಿಗೆ ಕಡೆಗಾಣಿಸುವುದೈಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ಶ್ರೀಗುರು ಅವಧೂತ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ ಧ್ರುವ ತಪ್ಪು ಕ್ಷಮೆಯ ಮಾಡೊನೀ ಸ್ವಾಮಿ ನಮ್ಮ ಕೃಪಾಸಿಂಧು ಸದ್ಗುರು ಪರಬ್ರಹ್ಮ ಪಾಪಿ ದುರಾಚಾರಿಯು ನಾಪರಮ ಕೃಪೆಯಿಂದ ಕಾವದು ದಯನಿಮ್ಮ 1 ಗುಣದೋಷ ನೋಡದಿರೊ ಶ್ರೀಹರಿ ದುರಿತ ಕೋಟಿಗಳ ಸಂಹಾರಿ ನೀನಹುದೊ ಬಡವನಾಧಾರಿ ಅನುದಿನ ಕಾಯೊ ನೀ ಪರೋಪರಿ 2 ಒಮ್ಮೆ ಬಂಧನವ ಬಿಡಿಸೊ ಸಮ್ಯಕ ಙÁ್ಞನ ಸಾರದೊಳು ಕೂಡಿಸೊ ನಿಮ್ಮದಾಸ ಮಹಿಪತಿಯೆಂದೆನಿಸೊಬ್ರಹ್ಮಾನಂದದೊಳು ನಲಿದಾಡಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾತ ನೀನೆ ಸ್ವಾಮಿ ಶ್ರೀಗುರುನಾಥ ವರ್ಮ ತೋರಿಕೊಡುವ ನಿಮ್ಮ ಧರ್ಮಗುಣ ಪ್ರಖ್ಯಾತ ಧ್ರುವ ಧರೆಯೊಳು ಸರಿಯಗಾಣೆ ಗುರುಧರ್ಮದಿಂದಧಿಕ ಕರುಣಿಸಿ ಆನಂದದಿಂದ ತೋರುತಿಹ್ಯ ಬ್ರಹ್ಮಸುಖ ವರಮುನಿಗಳ ಪ್ರಿಯ ಶರಣಜನಪಾಲಕ ಪರಮ ಸುಪಥದೋರಿ ಹೊರೆವ ಪೂರ್ಣತಾರಕ 1 ಬಡವನಾಧಾರಿ ನೀನು ಒಡಿಯನಹುದೊ ನಿಶ್ಚಯ ಕೊಡುವ ಭಕ್ತಿ ಮುಕ್ತಿದಾತ ದೃಢಭಕ್ತರಾಶ್ರಯ ಒಡಲ ಹೊಕ್ಕಿಹೆ ನಿಮ್ಮ ಕಡೆಯಗಾಣಿಸೊ ನಮ್ಮಯ್ಯ ಪಿಡಿದು ನೀ ಎನ್ನ ಕೈಯ ಕೊಡು ತೋರಿ ನಿಮ್ಮ ಸೊಹ್ಯ 2 ಪೊಡವಿಯೊಳು ಕ್ಷಮೆ ಎನಗೆ ಕೊಡು ಕರುಣಾಕಟಾಕ್ಷ ನೋಡಿ ನಿಮ್ಮ ದಯದಿಂದ ನೀಡೊ ನಿಜ ಸುಭಿಕ್ಷ ಬಿಡದೆ ಎಂದೆಂದು ನೀನು ಮಾಡೊ ಸಂರಕ್ಷ ಮೂಢ ಮಹಿಪತಿಗಿನ್ನು ಪೂರಿಸೊ ಮನದಪೇಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀನೆ ಸ್ವಹಿತ ಗುರುನಾಥ ಬ್ರಹ್ಮಾನಂದ ಸದ್ಘನ ಸದೋದಿತ ಧ್ರುವ ನೀನಹದೋ ಬಡವನಾಧಾರಿ ಸಾನುಕೂಲ ನೀನೆವೆ ಪರೋಪರಿ ಅನುದಿನದಲಿ ನೀ ಸಹಕಾರಿ ಮನೋಹರ ಮೂರುತಿ ನೀ ಶ್ರೀ ಹರಿ 1 ದಯಗುಣಕೆ ನಿಮ್ಮ ನಾ ಸರಿಗಾಣೆ ತಾಯಿ ತಂದೆ ಸಕಲ ಬಂಧು ನೀನೆ ತ್ರೈಲೋಕ್ಯವಂದ್ಯ ನೀ ದೇವನೆ ಶ್ರೇಯ ಸುಖದಾಯಕ ಎನ್ನ ನೀನೆ 2 ಶ್ರುತಿ ಸಾರುತಲ್ಯದ ನಿಮ್ಮ ಖ್ಯಾತಿ ಸ್ತುತಿ ಮಾಡಲೇನು ನಾ ಮಂದಮತಿ ಅತಿ ದೀನ ನಾ ನಿಮ್ಮ ಮಹಿಪತಿ ಪ್ರತಿಪಾಲಕಹುದೋ ನೀ ಶ್ರೀಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು