ಬಡತನ ವ್ಯಾತಕೆ ನಮಗೆ
ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ
ಬಿಡುವವ ನಾನಲ್ಲ ನಿಮಗೆ 1
ಪಿಡಿದು ಪಾದವ ನಿಮ್ಮ ಬಡವನೆಂದೆನಿಸಲು
ಜಡನುಡಿ ನಿಮಗೆ ನಿಮಗೆ ಭೂಷಣವೆ
ಬಿಡುಬಿಡು ಭಕ್ತವತ್ಸಲನೆಂಬ ಬಿರುದವ
ಒಡಲ ಹೊರೆವ ದೊಂದಿರದವಗೆ 2
ಬಡವನಾಧಾರವೆಂದು ಕೊಂಡಾಡುತಿರಲಿನ್ನು
ಬಡಿವಾರ ವ್ಯಾತಕ್ಕೆ ನಿಮಗೆ
ನುಡಿ ಮಾತಿನಂತಲ್ಲ ಪೊಡಿವಿಯೊಳಗಿದು
ಬಿಡುವಾಂಗಿಲ್ಲ ನಮ್ಮ ನಿಮಗೆ 3
ಪಿಡಿದ ಪಾದವ ನಿಮ್ಮ ಬಿಡೆನೆಂಬ ದೃಢವಿದು
ಒಡೆಯ ಕೇಳಿನ್ನಿ ಮಾತು
ಬಿಡಿಸಿಕೊಂಡರೆ ನಿಮ್ಮ ಬಿಡುವರಾರಿನ್ನು
ನೋಡು ತಿಳಿದು ಗುರುನಾಥ4
ಅಡಿಗಳ ಕುಡಿಯೊಳುವಿಡಿದು ನಾ ನಿಮ್ಮನು
ಬಡುವೆ ಸದ್ಗತಿ ಹರುಷವನು
ಮೂಢಮಹಿಪತಿಗಿನ್ನು ಬ್ಯಾರೆ ಗತಿಯ ಕಾಣಿ
ಒಡೆಯ ನಿಮ್ಮಪಾದಪದ್ಮದಾಣಿ 5