ಕಡೆಯ ಬಾಗಿಲ ಎನ್ನಕಡೆಗೆ ನಿಲಿಸಯ್ಯ ಪ
ಕಡೆಬಾಗಿಲೊಳು ನಿಲಿಸು ಅಡಿಗಡಿಗೆ ನಾನಿನ್ನ
ಕಡೆನೋಡಿ ಪೊಡಮಡುತೆ ಕೈಮುಗಿಯುವಂತೆ ಅ.ಪ
ಕಡೆಯ ಬಾಗಿಲಿನಿಂದ ದೃಢ ಭಕ್ತರೈತಂದು
ಕಡುಮುದದಿ ನಾಮಗಳ ನುಡಿವರಯ್ಯ
ನುಡಿಗಳೆಲ್ಲ ಎನ್ನ ಕಿವಿಗಿಡಿಯುತಿರಲಯ್ಯ
ಬಡವನಾದೆನಗಿದೇ ಉಪದೇಶವಯ್ಯ 1
ಸಾಮೀಪ್ಯದವರೆಲ್ಲ ಮನದಲ್ಲೇ ಜಾನಿಪರು
ಮಾ ಮುನಿಗಳೆಲ್ಲರು ಶ್ರುತಿಯ ಸಾರುವರು
ನಾಮಗಳನುಚ್ಚರಿಸಿ ನಮಿಸುವರು ಪಾಡುವರು
ಆ ಮಧುವು ಸಾಕೆನಗೆ ಮಾಂಗಿರಿಯ ರಂಗ 2