ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ ಭಾವಜಪಿತ ನೀನೆ ದಯಮಾಡಬೇಕೊ ಪ ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು 1 ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ ನುಡಿಯಲೆ ಸತ್ಯ ಸದಾ ಬಡವನಾಗಿಹೆನು 2 ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ ಒಡೆಯ ಸರ್ವಕೆ ನೀನೆ ಜಡಮತಿಯು ಗಡ ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ 3
--------------
ರಾಮದಾಸರು
ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೆಂಕಟೇಶ ಕರುಣದಿಂದೆನ್ನ ಪ ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ ನೋವು ಬಲುಹಾದ ನೋವು ಎಣ್ಣಿದುಯಿಲ್ಲದ ನೋವು ಎಣಿಕೆಗೊಳ್ಳದ ನೋವು ಬಣ್ಣನೆ ನುಡಿಯ ನೋವು ಬಂದೀತು ನೋವು 1 ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು ಇಷ್ಟರು ಇಲ್ಲದ ನೋವು ಇಂತಾದ ನೋವು 2 ಬಡವನಾಗಿಹ ನೋವು ಒಡೆಯರಿಲ್ಲದ ನೋವು ಕೇಡುಗರ ನುಡಿಯ ನೋವು ಕೆಟ್ಟಿಹ ನೋವು ಪಡೆದ ಕರ್ಮದ ನೋವು ಪಾಪವೆಂಬುದು ನೋವು ಕಡೆಯ ಕಾಲದ ನೋವು ಕಾಳಾಹಿ ನೋವು 3 ವಿದ್ಯೆವಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು ಇದ್ದುಯಿಲ್ಲದ ನೋವು ಇಚ್ಛೆಗೊಳ್ಳದ ನೋವು ಬದ್ಧವಾಗಿಹ ನೋವು ಬಳಲುವ ನೋವು 4 ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ ಪಂಥ ಬೇಡವೊ ಲಕ್ಷ್ಮಿಕಾಂತಯೆನ್ನಯ ಬಳಿಗೆ ಅಂತರಂಗದಿ ಬಂದು ಚಿಂತಿತಾರ್ಥತವನೀಯೊ ಯಂತ್ರದಾಯಕನಾದ ವರಾಹತಿಮ್ಮಪ್ಪರಾಯ 5
--------------
ವರಹತಿಮ್ಮಪ್ಪ
ಇಂತಿರುವುದೇನು ಬಗೆ ರಾಮಾ |ಹರಿಸ್ವ-ತಂತ್ರ ಶ್ರೀನಿಧಿಯೆಂದು ಪೊಗಳುತಿವೆ ವೇದ ಪವಿಧಿಗೆ ಪದವಿತ್ತವನೇ ವನವ ಚರಿಸುವದೇನೋ |ಪದುಮ ಸದನೆಯ ರಮಣ ಬಡವನಾಗಿಹದೇನೋ ||ಮದನಜನಕನೆ ಋಷಿಗಳಂತೆ ಆಗುವದೇನೋ |ಉದರದೊಳು ಬಹು ಜಗಂಗಳಿರಲೂ ಪತ್ರ ಸದನವಾಶ್ರಯಿಸಿ-ಕೊಂಡಿರುವಿ ಇದು ಏನೋ 1ನಿತ್ಯತೃಪ್ತನೆ ಶಬರಿಯೆಂಜಲುಂಬುವದೇನೋ |ಉತ್ತಮ ವಿಹಗವಿರಲು ಕಾಲ್ನಡಿಗೆಯಿದೇನೋ ||ಭೃತ್ಯರುದಿವಿಜರುನೀಂ ಚಾಪವ ಹೊರುವದೇನೋ |ನಿತ್ಯಶ್ರೀ ಹೃದಯದೊಳಗಿರಲು ನಿನ್ನ ಪತ್ನಿ ಹೋದಳೆಂದುಚಿಂತಿಸುವದೇನೋ2ಸ್ವಾಮಿ ಅಹಿಶಯನ ತೃಣಶಾಯಿಯಾಗುವದೇನೋ |ಭೂಮಿ ನಿನ್ನೊಂದಂಘ್ರಿ ಸೇತು ಕಟ್ಟುವದೇನೋ ||ಈ ಮರುಳು ರಕ್ಕಸರು ನಿನಗೊಂದೀದೇನೋ |ತಾಮಸರ ಮೋಹಿಸುವದಕೆ, ಭಕ್ತ ಪ್ರೇಮ ಪ್ರಾಣೇಶ ವಿಠ್ಠಲನೆಲೀಲೆಯೇನೋ3
--------------
ಪ್ರಾಣೇಶದಾಸರು