ಬಡವನಾಗಿರುವನಕ ಭಯವಿಲ್ಲವಯ್ಯ ಪ
ಕೆಡುಕ ವಂಚಕ ಕಳ್ಳ ಬಳಿಬಾರನಯ್ಯ ಅ.ಪ
ಬಡವತಾನಡಿಗಡಿಗೆ ಕಡುದೈನ್ಯಭಾವದಲಿ
ದೃಢ ಭಕ್ತಿಯೊಳು ಹರಿಗೆ ಪೊಡಮಡುವನು
ಕಡವರವನಾಂತವನು ಕಡುನುಡಿಗಳನು ಕಲಿತು
ಪೊಡವಿಚನೆಂದೆನಿಸಿ ಕಡುಲೋಭಿಯಹನು 1
ಗುಣ ಶಾಂತಿ ನಯ ವಿನಯ ಹಣವಂತಗಿರದಯ್ಯ
ಹಣವು ಕಪಿಯಂತವನ ಕುಣಿಸದಿರದು
ಉಣಿಸು ನಿದ್ರಾದಿಗಳು ಕ್ಷಣಮಾತ್ರವಿಲ್ಲವಗೆ
ಹಣದಾಸೆ ಎಳ್ಳಷ್ಟು ಬೇಡ ಮಾಂಗಿರಿರಂಗ2