ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಡವನಾಗಿರುವನಕ ಭಯವಿಲ್ಲವಯ್ಯ ಪ ಕೆಡುಕ ವಂಚಕ ಕಳ್ಳ ಬಳಿಬಾರನಯ್ಯ ಅ.ಪ ಬಡವತಾನಡಿಗಡಿಗೆ ಕಡುದೈನ್ಯಭಾವದಲಿ ದೃಢ ಭಕ್ತಿಯೊಳು ಹರಿಗೆ ಪೊಡಮಡುವನು ಕಡವರವನಾಂತವನು ಕಡುನುಡಿಗಳನು ಕಲಿತು ಪೊಡವಿಚನೆಂದೆನಿಸಿ ಕಡುಲೋಭಿಯಹನು 1 ಗುಣ ಶಾಂತಿ ನಯ ವಿನಯ ಹಣವಂತಗಿರದಯ್ಯ ಹಣವು ಕಪಿಯಂತವನ ಕುಣಿಸದಿರದು ಉಣಿಸು ನಿದ್ರಾದಿಗಳು ಕ್ಷಣಮಾತ್ರವಿಲ್ಲವಗೆ ಹಣದಾಸೆ ಎಳ್ಳಷ್ಟು ಬೇಡ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್