ಯಾಕೆ ನಿನಗೆ ಮನವೆ ವ್ಯಥೆಯು ಎಷ್ಟು
ಲೋಕನಾಯಕ ಶ್ರೀಲೋಲ ಲಕ್ಷ್ಮಯ್ಯಾ
ರಮಣ ಶ್ರೀಕಪರೇಯಾ ನಿನ್ನನ್ನೇ ಸ್ಮರಿಸುವುದು ಬಿಟ್ಟೂ ಪ
ಹಲವು ಹಂಬಲಿಸಿದರೇನು ಫಲಾ ವ್ಯರ್ಥಾ
ಬಳಲುವದೊಂದೇ ಅಲ್ಲದೆ ಬಾಧೆಯಿಂದಾ
ಅಜ ಬ್ರಹ್ಮಾಂಬರದ ವರ-----ಆರಾರಿಗ್ವಶನಲ್ಲಾ
ನಳಿನಾನಾಭನಾ ದಿವ್ಯನಾಮಾ ಭಜನೆಯ ತೊರೆದು 1
ಹರಿಶ್ಚಂದ್ರಾ ನಳರಾಜಾ-------ದಶರಥ ಮೊದಲು
ಪುರಾಕೃತ ಕರ್ಮಾದಿ ಭಂಗಾ ಬಡಲಿಲ್ಲೇನೋ
ಅರಿತೂನೀ ಹೃದಯಾದಿ ಅನ್ಯಚಿಂತನೆ ಹಿಡಿದು
ಪರಮಾತ್ಮ ಪರಬ್ರಹ್ಮನ ಪಾದಧ್ಯಾನವೇ ಬಿಟ್ಟು 2
ಧರೆಯೊಳಾಧಿಕನಾದ ಧೋರಿ 'ಹೊನ್ನವಿಠಲನ’ ಚರಣವೇ
ಗತಿಯೆಂದು ಚಿತ್ತಾದಲೆ ಸ್ಥಿರವಾಗಿ ಪೂಜಿಸಿ
ಸೇವೆಯನೆ ಮಾಡಿ ಪರಮಹರುಷದಿಂದ
ಪಡೆಯಾದೆ ಹರಿಕರುಣಾ 3