ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದಾವ ಕಂಡೆ ಕೇಶವ ಪಾದಾವ ಕಂಡೆ ಪ ಇಷ್ಟು ದಿನ ಕಷ್ಟಬಟ್ಟು ಶಿಷ್ಟ ಹೆಂಡತಿಯ ನೀಗಿ ಭ್ರಷ್ಟ ಮನಕೆ ತುಷ್ಟಿ ಇಲ್ಲದೆ ಇಷ್ಟ ಪುತ್ರರ ಕೂಡಿ ಬಂದು ಪಾದಾವ ಕಂಡೆ 1 ಬಡಲಾರದ ಭವಣಿ ಬಿಟ್ಟು ಕಡುಪಾಪಿ ಎಂದೆನಿಸಿಕೊಂಡು ಬಡತನದಲ್ಲೆ ಬಾಳಿಕೊಂಡು ಅಡಿಗಡಿಗೆ ನಿನ್ನನ್ನೆ ನೆನೆಯುತ ಪಾದಾವ ಕಂಡೆ 2 ಸರಿಬಂದದ್ದು ನೀನೇ ಮಾಡಿದಿ ಮರೆಯೆ ಹರಿ ನಿನ್ನುಪಕಾರ ಭರದಿ ಎನ್ನ ಕೈಯ ಪಿಡಿದು ಪೊರೆಯಯ್ಯ ನರಸಿಂಹ ವಿಠಲ ಪಾದಾವ ಕಂಡೆ 3
--------------
ನರಸಿಂಹವಿಠಲರು
ಪೋಷಿಸೆನ್ನ ವೆಂಕಟೇಶ ಶ್ರೀಶ ಶ್ರೀನಿವಾಸ ಶೇಷಗಿರಿನಿಲಯ ಶ್ರೀ ಇಂದಿರೇಶ ಈಶ ಪ ಹೇಸಿಯಿವನೆಂದೆನುತ ದೂಷಣೆಯ ಮಾಡದಿರು ದೋಷದೂರನೆ ನಿನ್ನ ದಾಸ ನಾನಭವ ದಾಸಜನರ ಮನದುಲ್ಲಾಸದೇವರು ನೀನು ದಾಸನ ಆಸೆಯನು ಪೂರೈಸಿ ಸಲಹಯ್ಯ 1 ಕುನ್ನಿಕುಲದಲಿ ಜನಿಸಿ ಬನ್ನಬಡಲಾರದೆ ಉನ್ನತೋನ್ನತಮಹಿಮ ನಿನ್ನ ಬೆನ್ನು ಬಿದ್ದೆ ಭಿನ್ನತಾರದೆ ಎನಗೆ ನಿನ್ನ ದರ್ಶನವಿತ್ತು ಉನ್ನತಮತಿ ನೀಡಿ ಮನ್ನಿಸಿ ಸಲಹು 2 ನಿತ್ಯ ತವ ಶರಣಜನರುಂಡು ಮಿಕ್ಕ ಪರಮಪ್ರಸಾದ ಶರಣೆಂದು ಚರಣಕ್ಕೆ ಮರೆವೊಕ್ಕೆ ನೆರೆನಂಬಿ ತಿರುಪತೀಶನೆ ಭಕ್ತ ಕರುಣಿ ಶ್ರೀರಾಮ 3
--------------
ರಾಮದಾಸರು