ತತ್ವಚಿಂತನೆ
ಅರಿಯಲಳವೇ ಜ್ಞಾನಿಯ ಹೊರಗಿನ ಬಡರೂಪದಿ ಪ
ಧರೆಯು ಉದರದಿ ನೆಲಸಿಹ ಪರಿಪರಿ ವಿಧ
ಸಿರಿಯನು ಅರಿವುದು ಬಲುಸುಲಭವೆ ಅ.ಪ
ಹುಚ್ಚರಂದಿ ಕಾಂಬೋರು ಜನ ಮೆಚ್ಚಿಗೆಯನು ಬಯಸರು
ಅಚ್ಚರಿಯಲಿ ನಡೆವರು ಎಚ್ಚರಿಕೆಯ ಪೊಂದದಂತೆ 1
ಒಡವೆ ವಸನಗಳೆಲ್ಲವ ಸಡಗರವನು ಅರಿಯರು
ಕಡು ಬಡತನ ಕ್ಲೇಶಕೆ ನಡುಗಲರಿಯರು ಸುಲಭದಿ 2
ಮೇದಿನಿಯಲಿ ದಿನಗಳ ಮೋದದಿಂದಲಿ ಕಳೆವರು
ಮಾಧವನಲಿ ಭಕುತರು ಬೂದಿ ಮುಚ್ಚಿದ ಕೆಂಡದಂತೆ 3
ಮರುಳು ಮೋಸವನರಿಯರು ಸರಳಮನದಲಿ ಇರುವರು
ಕೆರಳಿದ ಸುಮದಂದದಿ ತಿರುಳುಗಳನು ಸುಲಭದಿ 4
ಭಕ್ತ ಪ್ರಸನ್ನನೊಳು ಆಸಕ್ತ ಸನ್ಮನ ಯುಕ್ತರು
ಯುಕ್ತಿ ಚತುರತೆಯರಿಯರು ಹುತ್ತದೊಳಿಹ ಸರ್ಪದಂತೆ 5