ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣವಾರಿಧಿಯೆ ಮೊರೆ ಕೇಳೋ ಹರಿಯೆ ಪ ಶರಣರಿಗೆ ಜರಾಮರಣರಹಿತವಹ ಪರ ವಿದೇಹ ಅ.ಪ ಇನಕುಲಭೂಷಣನೆನಿಪ ರಾಮ 1 ಹಿಡಿಯವಲಕ್ಕಿಯ ಬಡಬ್ರಾಹ್ಮಣ ಕೊಡ- ಲೊಡನೆ ಒಲಿದು ಸೌಭಾಗ್ಯವಿತ್ತು 2 ಸ್ವಾಮಿ ಕಾಯೊ ಗುರುರಾಮವಿಠಲಾ 3
--------------
ಗುರುರಾಮವಿಠಲ
ಭಗವಂತನ ಸಂಕೀರ್ತನೆ ಇಂಥಾವಗ್ಹ್ಯಾಂಗೆ ಮನಸೋತೆ ಬಲು ಪಂಥವಾಡಿದ ಜಗನ್ಮಾತೆ ಪ. ಆವಾಗ ನಾರುವ ಮೈಯ್ಯ ಬಿಚ್ಚಿ ತೋರಿ ನಲಿಯುವ ಕಾಲು ಕೈಯ್ಯ ಕೋರೆಯ ಮಸೆಯುತ ಕೊಸರಿಕೊಂಡಸುರನ ಕರುಳನು ಬಗೆದಂಥ ಅದ್ಭುತ ಮಹಿಮಗೆ 1 ಬಡಬ್ರಾಹ್ಮಣನಾಗಿ ತಿರಿದ ತನ್ನ ಹಡೆದ ತಾಯಿಯ ಶಿರವರಿದ ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ ಬಿಡದೆ ಸ್ತ್ರೀಯರ ಗೋಕುಲದಲ್ಲಿ ಮೆರೆದ 2 ಬತ್ತಲೆ ನಿಂತಿದ್ದನೀಗ ತೇಜಿ ಹತ್ತಿ ಮೆರೆವದೊಂದು ಯೋಗ ಉತ್ತಮ ಹೆಳವನಕಟ್ಟೆ ಶ್ರೀರಂಗ ಭಕ್ತವತ್ಸಲ ಸ್ವಾಮಿ ದೇವಕೃಪಾಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ- ಹರಿಕೃಷ್ಣ ಶರಣೆನ್ನಿರೊ ಪ ಪರಿಪರಿ ದುರಿತಗಳಳಿದು ಪೋಗುವದೆಂದು ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ ಹರಿ ಎಂದ ಮಾತ್ರದಲಿ ಹತ್ತಿದ ಪಾಪ ಪರಿಹಾರಾಗುವುದು ಕೇಳಿ ಹರಿದಾಸರೊಡನೆ ಕೂಡಿ ಸತ್ಸಂಗದಿ ಹರಿ ಕೀರ್ತನೆಯನು ಪಾಡಿ ಹರಿಯ ಮಹಿಮೆಯ ಸ್ಮರಿಸುತಲಿ ಹಗ ಲಿರುಳು ಚಿಂತನೆ ಮಾಳ್ಪ ಸುಜನರ ಪರಮ ಕರುಣಾ ಸಾಗರನು ತನ್ನ- ವರೊಳಿರಿಸುತ ಪೊರೆವ ಸಂತತ 1 ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ ತ್ವರದಿ ಓಡಿ ಬರಲಿಲ್ಲವೆ ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ- ಕ್ಷಯ ವಸ್ತ್ರವೆನಲಿಲ್ಲವೆ ತರುಳರೀರ್ವರ ಪೊರೆದು ರಕ್ಷಿಸಿ ಕರೆಯೆ ನಾರಗನೆಂದ ದ್ವಿಜನಿಗೆ ನರಕ ಬಾಧೆಯ ಬಿಡಿಸಿ ಸಲಹಿದ ಹರಿಗೆ ಸಮರು ಅಧಿಕರಿಲ್ಲ ಶ್ರೀ 2 ಬಡಬ್ರಾಹ್ಮಣನ ಸತಿಯು ನಯಭಯದಿಂದ ಒಡೆಯರ್ಯಾರಿಲ್ಲೆನಲೂ ಪೊಡವೀಶ ಶ್ರೀಪತಿಯು ಪರಮಾಪ್ತನೆನಲು ಹಿಡಿಯಗ್ರಾಸವ ಕೊಡಲು ನಡೆದು ದ್ವಾರಕ ದೊಡೆಯನಿಗೆ ಒ- ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ ಕೆಡದ ಸೌಭಾಗ್ಯವನೆ ನೀಡಿದ ಬಿಡದೆ ಕಮಲಾನಾಭ ವಿಠ್ಠಲನ 3
--------------
ನಿಡಗುರುಕಿ ಜೀವೂಬಾಯಿ
ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ ಪಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ ||ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |ಅಂಗನೆಯರಉತ್ತುಂಗಕುಚದಲಿಟ್ಟ ಕೈಯ ತೋರೊ1ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ ||ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ 2ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |ಬಲ್ಲಿದಮಲ್ಲರ ಮರ್ದಿಸಿ ಬಂದ-ಕೈಯ ತೋರೊ ||ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ 3ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ||ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ 4ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |ನಾಕಪತಿಗೆ ಅಭಯವನಿತ್ತ-ಕೈಯ ತೋರೊ |ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ 5
--------------
ಪುರಂದರದಾಸರು