ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ ಕರುಣಾಳೋ ಮುನಿ | ವಂಶಸುಧಾಕರ | ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು | ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ || ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ | ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ 1 ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ | ವಡನೆ ಗಂಧವ ತೇದೆ | ಅನಲನ ಜಪಿಸುತೆ || ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು | ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ2 ಬಾದರಾಯಣಮುನಿ | ಭೇದಮತವ ಬಿತ್ತೆ | ಮೋದತೀರ್ಥರು ತರುವ | ಸಾದರಗೈದರೊ || ಸ್ವಾದಫಲಂಗಳು | ನಿನ್ನಿಂದ ತೋರ್ದವು | ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ 3
--------------
ಶ್ರೀಶ ಕೇಶವದಾಸರು
ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿಮೇಲಾದ ಕರವೀರವಾಸಿನಿದೇವಿಪ ಬಡಬಡಿಸಿ ಬಂದಿಹೆ ನಾನಿಲ್ಲಿನೋಡಿಕೊಡುವಿ ವರವೆಂದು ಆಸೆಯ ಮಾಡಿಬಿಡಬೇಡ ಮಗನನು ಕರುಣದಿ ನೋಡಿಕೊಡು ನೀ ವರನನು ಸಿರಿಗಳ ನೀಡಿ 1 ಬಡತನದ ಭೂತವ ಎದುರಿಸುವುದು ತಾಯೆತಡೆಯಲಾರೆನು ಇನ್ನು ಕರುಣಿಸಿ ಕಾಯೆಬಿಡದೆ ಭಜಿಪೆ ನಿನ್ನ ಹೇ ಶುಭಕಾಯೆಕೊಡು ನೀ ವರವನು ಧನಗಳನೀಯೆ 2 ಪನ್ನಗ ವೇಣಿನುಡಿಯೆ ಹರಕೆಗಳ ಹೇ ಶುಭವಾಣಿಒಡೆಯ ಗದಗುವೀರ ನಾರಾಯಣನ ಜಾಣಿಕೊಡು ನೀ ವರವನು ವಿಠಲನ ರಾಣಿ 3
--------------
ವೀರನಾರಾಯಣ
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪನ್ನಂಗಶಯನನಿನ್ನ ಬೆನ್ನುಬಿದ್ದು ಧನ್ಯನಾದೆನು ಪಇನ್ನು ಭವದೊಳು ಅನ್ಯರಂಜಿಕೆಯನ್ನು ತಪ್ಪಿಸಿನಿನ್ನ ಕರುಣವನು ತೋರಿದಿ ಸನ್ನುತಾಂಗರೂಢಿಯೊಳು ನಾನು ಮೂಢನಾದೆನು ಧೃಢದಿ ನಿನ್ನಗಾಢಮಹಿಮೆಯ ಅರಿಯದಲೆ ಇನ್ನು ಬಡಬಡಿಸಿಕೊಂಡುಕೇಡಿಗೊಳಗಾಗಿ ಕೆಡುತಲಿರ್ದೆನು ಬಿಡದೆ ಪರರನುಬೇಡಿ ಆಸೆಯಿಂ ಭಂಗಮಾಡುತ ಖೋಡಿಯಪ್ಪುದ ಕಂಡು ನೀನೆಮೂಢನೊಳು ದಯಮಾಡಿ ಕರುಣವನೀಡಿ ಕುರುಹನು ತೋರ್ದಿ ದೇವ 1ಹೊಂದಿಕೊಂಡೀ ಮಾಯಾಜಾಲವನು ಒಂದನರಿಯದೆಮಂದಮತಿಯಾಗಿ ಕೆಡುತಲಿ ನಾನುಬಂಧನದ ಭವದ ಸಿಂಧುವಿನೊಳಗಾಡುತಿರ್ದೆನುನೊಂದು ಬೆಂದೆನುಮಂದಭಾಗ್ಯನ ಮಂದಮತಿಗಳುಒಂದು ಉಳಿಯದಂತೆ ಮಾಡೆನ್ನ್ಹøದಯ ಮಂದಿರದೊಳುನಿಂದುನೀನೆ ಮುಂದಕ್ಹಾಕಿದಿ ಮಂದರೋದ್ಧಾರ2ಮರುಳತನವನು ದೂರಮಾಡಿದಿ ಹರಿಯೆ ಎನ್ನಸರುವ ದುರ್ಗುಣ ತರಿದು ಹಾಕಿದಿ ಕರುಣದೆನ್ನದುರಿತಪರ್ವತಮೂಲ ಕಿತ್ತಿದಿ ಮರೆವು ಹರಿಸಿದಿಪರಮಕರುಣಾಕರನೆ ನಿನ್ನುಪಕಾರ ಮರಿಯೆನಾವಕಾಲದಿಪರರ ಬೇಡದಪದವಿನೀಡಿದಿಶರಣಜನಪ್ರಿಯ ಸಿರಿಯರಾಮ 3
--------------
ರಾಮದಾಸರು