ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಕು ಸಮ್ಮತನಾಗೆಲೋ ನೀ ನದಕುನು ಸಮ್ಮತನಾಗೆಲೊ ಪ ಇದು ಅದು ಎಂಬುದರ್ವಿಧವ ತಿಳಿದು ನೀ ನೆದಕುನು ಸಮ್ಮತನಾಗೆಲೊ ಅ.ಪ ಕಡುಸಿರಿಯೆಂಬುದು ಮರವೆಕುಣಿ ಬಡತನವೆಂಬುದು ಅರಿವಿನಮನೆ ಒಡೆತನವೆಂಬುದು ಪಾಪದ ಗೋಣು ದುಡಿತವೆಂಬುವುದು ಜ್ಞಾನದ ಖನಿ ದೃಢದಿಂದರಿದು ಹುಡುಕಾಡಿದರೋ ಳ್ಹಿಡಕೋ ನಿನಗೆ ಹಿತವಾವುದು ನೋಡಿ1 ಕೆಟ್ಟ ಸಂಸಾರ ಹೇಯಮೂತ್ರ ಕುಣಿ ನಿಷ್ಠೆ ಭಕ್ತಿ ಆನಂದಾಮೃತ ಖಣಿ ದುಷ್ಟಜನರ ಸಂಗ ನರಕಕುಣಿ ಶಿಷ್ಟ ಸಜ್ಜನಸಂಗ ಮುಕ್ತಿಮನೆ ನಿಷ್ಠೆಯಿಂದರಿತು ಇಷ್ಟರೊಳಗೆ ನೀ ಇಷ್ಟಕೆ ಬಂದದ್ದು ಹಿಡಕೋ ನೋಡಿ 2 ನರರ ಸೇವೆ ಮಹ ದುರಿತಬೇರು ಶರಣರ ಸೇವೆ ಸ್ಥಿರಸುಖದ ತವರು ಬರಿದೆ ಕೆಡದೆ ಹರಿಚರಣ ಕೋರು ಮರುಳು ಗುಣಗಳೆಲ್ಲ ತರಿದು ತೂರು ಧೀರ ಶ್ರೀರಾಮನ ಚಾರುಚರಣ ಸೇರಿ ಪರಮಪದವಿಯೊಳು ಲೋಲ್ಯಾಡು 3
--------------
ರಾಮದಾಸರು
ಎನಗೆಲ್ಲಿಯ ಕೊರತೆ ನಿನ ನಂಬಿದ ಮೇಲೆ ಮನಸಿಜನೈಯ್ಯಾ ಶ್ರೀ ರಂಗೇಶವಿಠಲ ಪ ಕೊಡುವ ಕರ್ತನು ನೀನು ಎಡಬಿಡದಿರುವಾಗ ಬಡತನವೆನಗ್ಯಾಕೆ ರಂಗೇಶವಿಠಲ 1 ಸತಿಯು ಸುತರು ಎನಗೆ ಹಿತವ ಬಯಸಲಿಲ್ಲ ಗತಿಯು ಎನಗೆ ನೀನೆ ರಂಗೇಶವಿಠಲ 2 ಮಂದಮತಿಯು ನಾನು ಸಿಂಧುಶಯನ ನಿನ್ನ ಕಂದನೆಂದು ತಿಳಿಯೊ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಏನಿದು ಚಿತ್ರ ಎಲೋ ಕಂಜನೇತ್ರ ಪ ದೀನನು ನಾನೆಂದು ದಿನ ದಿನ ಮೊರೆಯಿಡೆ ನೀನು ಮಾಡಿದ ಕರ್ಮವೆಂದು ತಪ್ಪಿಸಿಕೊಂಬ ಅ.ಪ ಮಾನಸದಲಿ ಸಾಕ್ಷಿಯಾಗಿ ನೀನಿಲ್ಲವೇ 1 ಯುಕುತಿ ಮಾತು ಇದಲ್ಲ ವೇದಶಾಸ್ತ್ರ ಪ್ರಮಾಣ2 ಸತ್ಯ ಸಂಕಲ್ಪನೆಂದು ಪೇಳುವರೆಲ್ಲರು ಭೃತ್ಯರ ಸಲಹದ ಪ್ರಭುತ್ವವೇತಕೆ ನಿನಗೆ 3 ದೇವ ನಿನ್ನ ಚಿತ್ತವೋ ಎನ್ನ ಪುರಾಕೃತವೋ 4 ಕರಣಾಭಿಮಾನಿಗಳಿಗೊಡೆಯ ನೀನಲ್ಲವೇ 5 ಭಾವ ಕೊಡುವುದಕೆ ಬಡತನವೆ ನಿನಗೆ 6 ನೀನೆ ಸರ್ವ ಸ್ವತಂತ್ರ ಗುರುರಾಮ ವಿಠಲ 7
--------------
ಗುರುರಾಮವಿಠಲ
ಬಡತನವೆನ್ನನು ಬಾಧಿಪುದೈ ಹರಿ ನುಡಿಯಲೆನಗೆ ನಾಲಗೆ ಬರದೀಪರಿಪ ಅಡಿಯೊಳು ಕೆಡೆದಿಹೆ ತಡಿಗಾಣದೆಯೆ ಕಡಲಣುಗಿಗೊರೆದು ಕಡೆಹಾಯಿಸೊ ದೊರೆ ಅ.ಪ ಮನುಜರು ಯೆನ್ನನು ಮಾನಿಸದಿರುವರು ಮನೆಯೊಳು ಮಕ್ಕಳು ಮಾತನಾಲಿಸರು ಅನುನಯದಿಂ ಸವಿ ವಚನವನುಸುರಲು ವನಿತೆಯುತಾಂ ಕೇಳದೆ ಕೋಪಿಪಳು 1 ಬಂದ ಭಾಗವತರ ಪೂಜೆಯ ಮಾಡಲು ಒಂದಾದರು ಸವಿ ವಸ್ತುವಿಲ್ಲವೈ ಸಂದಣಿ ಸೇರಲು ಮನಸು ಬಾರದು ಕುಂದಹರಿಸು ಮನಕಂಕೆಯ ತಂದು 2 ದಾನವ ಮಾಡಲು ದೀನತೆ ಬಿಡದು ಕಾನನದಿರುತಿಹ ಕುರುಡನಂತಿಹೆನೆ ಏನು ಮಾಡಲೊ ಯೆನ್ನ ಮನದೊಲುಮೆಯ ಬಲ್ಲ ಸಿರಿನಲ್ಲ 3 ಸಾಲದವರು ಗಂಟಲೊಳು ಕೋಲಿಡುವರೊ ಶ್ರೀಲೊಲನೆ ನಾಂ ಮಾಡುವುದೇನು ಲಾಲಿಸಿ ಹೆಜ್ಜಾಜಿಕೇಶವ ಪಾಲಿಸು ಲೀಲೆಯಿಂ ಬಿನ್ನೈಸಿ ಯನ್ನೊಲಿಸು 4
--------------
ಶಾಮಶರ್ಮರು
ಯಾಚಕ ಜನ್ಮಾ ಯಾಕೆ ಬರೆದನೊ ಬ್ರಹ್ಮಾ ನಾಚಿಕೆಯಾಗಿ ನಷ್ಟಾಗುವಂತೆ ಸ್ವಧರ್ಮಾ ಪ ಒಡಲಾಶೆಗಾಗಿ ಹೊಲೆಯನ ಹೊಗಳಬೇಕು ಕಡುಲೋಭಿಯಾದ ಅರಸನೋಲಗವೆ ಸಾಕು ಬಡತನವೆಂದು ಪರರ ಸೇರುವದೆ ಸಾಕು ಒಡಲು ಪರಾಕು 1 ತ್ಯಾಗದಿ ಕರ್ಣಾ ಭೋಗದಿ ದೇವೇಂಧ್ರನೆಂದು ಕೊಂಡಾಡಲು ಪೋಗಿ ಬಾ ನಾಳೆ ಎಂದು ಎನುತ ಪೇಳಲಾಗಿ ಬೈದಾಡುತ ಬಂದು ಬಳಲುತಿರಲಾಗ ಚಿತ್ತಕ್ಕೆ ತಂದು 2 ಪರ್ವತವನ್ನು ಕಂಡು ಕೈತಿಕ್ಕಿ ಕೋರಿದೆ ಬರಿದೆ ಇಂಥಾ ಗರ್ವದಿಂದುಕ್ಕಿ ಏರಿದೆ ಗುರುವಿಮಲಾನಂದ ಸರ್ವೋತ್ತಮನ ನೆನೆಯ ಬಾರದೇ 3
--------------
ಭಟಕಳ ಅಪ್ಪಯ್ಯ