ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನನಾದರೂ ಬರೆಯೋ ಎನ್ನ ಪಣೆಯೊಳಗೆನೀನಿಷ್ಟ ಬರೆಯಬೇಡವೋ ಮೂಢ ವಿಧಿಯೇ ಪ ಬಾಲತನದಲಿ ಬಹಳ ಭಾಗ್ಯ ಸಂಪದಗಳನುಮೇಲೆ ಯೌವನ ಬರಲು ಬಡತನವನುಲೋಲಾಕ್ಷಿಯರಿಗೆ ಮರುಳಾಗಿ ಸಂಚರಿಪುದನುಹಾಲು ಅನ್ನವನಿಕ್ಕಿದವರಿಗೆ ಮುನಿವುದನು1 ಮುಪ್ಪಿನಲಿ ಯೌವನದ ಸ್ತ್ರೀಯ ಸಂಭೋಗವನುತುಪ್ಪವಿಲ್ಲದ ಭೋಜನದ ರುಚಿಯನುಅಪ್ಪುತಿಹ ಮಕ್ಕಳಿಲ್ಲದ ಕುಸಂಸಾರವನುಕಪ್ಪುಗೊರಲನ ನೆನೆಯದೇ ದಿನವ ಕಳೆವುದನು 2 ಪರರೊಡವೆಯನು ತಿಂದ ಶರೀರವನೆ ಪೊರೆವುದನುಪರರ ನಿಂದೆಯ ಮಾಡಿ ಬಾಳುವುದನುವರ ಕೆಳದಿ ರಾಮೇಶ ನಿನ್ನ ಪಾದಾಂಬುಜವಸ್ಮರಿಸಿದಂತನ್ಯಮತದಲ್ಲಿ ಸಂಭವಿಪುದನು 3
--------------
ಕೆಳದಿ ವೆಂಕಣ್ಣ ಕವಿ
ವೆಚ್ಚಕುಂಟು ನಮಗೆ ಅಚ್ಯುತನಾಮ ನಿಶ್ಚಯದ ಧನವು ಧ್ರುವ ವೆಚ್ಚಮಾಡಿದರೆಂದಿಗೆ ಅಚ್ಚಳಿಯದು ನಿಶ್ಚಯದ ಬದಕು ಬಚ್ಚಿಟ್ಟುಕೊಂಡು ನಿಜ ಎಚ್ಚರಿಕಿಂದ ನಿಶ್ಚಿಂತದಲಿ ಉಂಬೆನು 1 ಸಂಚಿತ ಧನವು ಬಡತನವನು ಹಿಂಗಿಸಿತು ಒಡಿಯನಖಂಡ ಕೃಪೆಯಿಂದಲಿ 2 ಸಾದ್ಯವಾಯಿತು ಎನಗೆ ಸದ್ಗುರು ಕೃಪೆಯಿಂದ ನಿಜಧನವು ಮಾಡಿ ಸಾಧಿಸೊಕೊಂಬುವದು 3 ಕಟ್ಟಬಿಡಲಾಗುದು ವಿಟ್ಟಿ ಹ್ಯಧನಕೊಟ್ಟರೆಂದಿಗೆ ತೀರದು ಇಟ್ಟಿಹ ತನುಮನದಲಿ ಘಟ್ಯಾಗಿ ಕೇಳಿರೊ ಈ ಮಾತವ 4 ಅರುಹು ಅಂಜನವಿಟ್ಟಿ ತೋರಿದ ಗುರುಕರದಲಿ ಈ ಧನವು ಹರುಷವಾಯಿತು ಎನಗೆ ಧರೆಯೊಳು ತರಳಮಹಿಪತಿಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು