ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪಕಾರವ ನೋಡೋ ಮಾಡಿದ ಪ ಕೃಪೆ ಬೇಡುವುದತಿಶಯವೇ ಪೇಳೊ ಅ.ಪ ಪಾಲಕ ನೀ ಹದಿನಾಲ್ಕು ಜಗಂಗಳಿಗೆ ಮೂಲೆಯ ಗ್ರಾಮದಲಡಗಿ ಬೇಸರದಿ ಕಾಲಕಳೆಯುವುದ ನೋಡಿ ಮರುಕದಲಿ ಬಾಲ ಮೂರುತಿಯ ಜಗಕೆ ತೋರಿಸಿದ 1 ಅಡಕು ಮಣೆಗಳಲಿ ಪೂಜೆಯಗೊಳ್ಳುತ ಒಡಕು ತೊಗರಿ ಹುಳಿಯನ್ನವ ಮೆಲ್ಲುತ ಬಡತನದಲಿ ಜೀವನ ಕಳೆಯುತಿರೆ ಪೊಡವೀಶನ ಭೋಗಗಳನು ಉಣಿಸಿದ 2 ಮಣಿ ಮಂದಿರ ವಿಧ ವಿಧ ಅಂದದ ಮುತ್ತಿನ ಹಾರ ಪದಕಗಳು ತಂದೆ ಪ್ರಸನ್ನನೇ ಸಾಸಿರ ಸಾಸಿರ ಮಂದಿಗಳಿಗೆ ವೈಭವಗಳ ತೋರಿದ 3
--------------
ವಿದ್ಯಾಪ್ರಸನ್ನತೀರ್ಥರು
ಮರೆಯಬಾರದು ನಮ್ಮ ಮುರವೈರಿಯ ಕರುಣಾಕರ ಸಿರಿವರನಾದ ದೊರೆಯ ಪ. ಪರಿಕಿಸುವನು ನಾನಾ ತರದಿಂದಲಿ ಜರಿವನು ಮತ್ತೆ ನೇವರಿಸುವನು ಸುರ ನರೋರಗ ಪಕ್ಷಿಯಿರೆ ತರು ಮೊದಲಾಗಿ ಪೊರೆವ ಮೆರೆವ ಕರೆದಲ್ಲಿ ಬರುವ 1 ಬಡತನದಲಿ ಭಾಗ್ಯಕಾಲದಲಿ ಕಡು ಕಷ್ಟದಲಿ ಸೌಖ್ಯ ವೇಳೆಯಲಿ ಅಡವಿಯಲಾದರು ಅರಮನೆಯಲ್ಯಾದ- ರೊಡೆಯ ಸಲಹನೆ ಮೀರನು ಭಿಡೆಯ 2 ಸರ್ವ ಸ್ವತಂತ್ರ ಶ್ರೀ ರಮಣೀಶ ನಿರ್ವಹಿಸುವನು ನಂಬುವರಾಶಾ ಭರ್ವಸವಿಡು ಶೇಷ ಪರ್ವತೇಶ್ವರನಲಿ ನೀರ್ವಾಣೇಶ ಸರ್ವರೊಳಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸಿ ಬದುಕಿರೊ ಗುರುವರರಾ ನರ- ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ ದಾಸದೀಕ್ಷೆಯ ವಹಿಸಿದವರ ಹರಿ ದಾಸರ ಕೂಡಿ ನರ್ತಿಸಿ ನಲಿದವರ ಶ್ರೀಶನ ಮಹಿಮೆ ಬಲ್ಲವರ ಭವ ಪಾಶಗಳಳಿವ ಸನ್ಮಾರ್ಗಬೋಧಕರ 1 ಬಡತನದಲಿ ಬಳಲಿದವರ ಭಾಗ್ಯ ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ ಮೃಡಸಖನೊಲುಮೆ ಪಡೆದವರ ಬಹು ಸಡಗರದಲಿ ಹರಿ ಭಜನೆ ಮಾಡ್ದವರ 2 ಪಂಕಜಾಕ್ಷನ ಪೊಗಳಿದವರ ತಂದೆ ವೆಂಕಟೇಶ ವಿಠ್ಠಲ ದಾಸರಿವರ ಬಿಂಕದಿ ಹರಿಯ ಮರೆತವರ ಗರ್ವ ಬಿಂಕಗಳಳಿಯ ಸನ್ಮಾರ್ಗಕೆಳದವರ3 ತಾಳ ತಂಬೂರಿ ಪಿಡಿದವರ ಗೆಜ್ಜೆ ತಾಳ ಮೇಳದಿ ನರ್ತಿಸಿ ನಲಿದವರ ವ್ಯಾಳ ಶಯನನ ಭಕ್ತರಿವರ ಸಂಜೆ ವೇಳೆ ಹರಿಭಜನೆ ಮಾಡಿ ನಲಿದವರ 4 ಮಡದಿ ಮಕ್ಕಳು ಬಂಧು ಜನರ ಕೂಡಿ ಕಡು ಸಂಭ್ರಮದಿ ಹರಿಭಜನೆ ಮಾಡ್ದವರ ಕಡಲ ಶಯನನ ಭಕ್ತರಿವರು ಭಾಗ್ಯ ಬಡತನ ಸಮವೆಂದು ತಿಳಿಯ ಹೇಳ್ದವರ 5 ಹರಿಗುಣ ಕೀರ್ತಿಸಿದವರ ನರ ಹರಿಯ ಮಹಿಮೆಗಳ ಶಿಷ್ಯರಿಗೊರೆದವರ ಹರಿಯೆ ಸರ್ವೋತ್ತಮನೆಂದವರ ನಮ್ಮ ಉರುಗಾದ್ರಿವಾಸ ವಿಠ್ಠಲನ ನಂಬಿದವರ6 ಮಮತೆಯ ಬಿಡಬೇಕೆಂದವರ ದೇಹ ಮಮತೆಯ ಬಿಡುತ ಹರಿಪುರ ಸೇರಿದವರ ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ 7
--------------
ನಿಡಗುರುಕಿ ಜೀವೂಬಾಯಿ
ಜಯಿಸಬೇಕು | ಮನವನು | ವೈಸಬೇಕು ಪಜಯಿಸಬೇಕು ಅರಿಷಡ್ವರ್ಗವನು |ವೈಸಬೇಕು ಹರಿಚರಣದಿ ಮನವ |ಸೈಸಬೇಕು ಶೀತೋಷ್ಣದ ಬಾಧೆಯ |ಲೈಸಬೇಕು ಭವದುರಿತವನೂ1ಗ್ರಹಿಸಬೇಕು ತವರ್ಚನ ಮರಣಸ್ಥಿತಿ |ಕಾಯಿಸಬೇಕು ಸುಕಾರ್ಯದಲಿ |ಗೈಸಬೇಕುಪರಸೇವೆಗೆ ತನುವನು |ಮೋಹಿಸಬೇಕು ಕುಲಸತಿ ಪತಿಯ2ಕೊೈಸಬೇಕು ದುರ್ವಾಕ್ಯದ ರಸನೆಯ |ಸಾೈಸಬೇಕು ಋಣ ರೋಗ ಸಸಿ |ಈಸಬೇಕು ಬಡತನದಲಿ ಮಾನವಾ |ಬೈಸಬೇಕುಗೋವಿಂದ ದಾಸರ ಸಂಗ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ