ದಾಸನಾದಮೇಲಿ ನಿನಗಾ
ಯಾಸವ್ಯಾಕೊ ಮರುಳೆ ಪ
ಮೋಸಪಾಶಗಳ ನಾಶಮಾಡುವಂಥ
ದಾಸರ ಪ್ರಾಣ ಲಕುಮೀಶನ ಚರಣಅ.ಪ
ಚಿಂತೆಗೈವುದ್ಯಾಕೊ ಹಲವು
ಭ್ರಾಂತಿಗಳಿನ್ಯಾಕೊ
ಕಂತುಜನಕ ಅಂತರಂಗ ನಿ
ಪಾದ 1
ಮಿಡುಕುವುದಿನ್ಯಾಕೊ ನಿನಗೆ
ಬಡತನಗೊಡವ್ಯಾಕೊ
ಬಡವರ ಭಾಗ್ಯನೆಂದು ದೃಢದಿ ಪಾಡ್ವರ ಬೆಂ
ಪಾದ 2
ಹಾರೈಸುವುದ್ಯಾಕೋ ನೀ ಬಲು
ಘೋರಬಡುವುದ್ಯಾಕೊ
ಬಾರಿಬಾರಿಗೆ ಸೇರಿ ಭಜಿಪರ
ಭಾರಹೊತ್ತು ಕಾಯ್ವ ಧೀರ ಶ್ರೀರಾಮಪಾದ 3