ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿಗಳು, ದಾಸರು ಆಸೆಗಾರ ನಾನು ದಾಸಯ್ಯ ನಿನ್ನ ಧ್ಯಾ ನಿಸಿ ಬಂದೆನು ದಾಸಯ್ಯ ಪ ದೋಷದೂರನೆ ಎನ್ನ ಆಸೆಯ ತೀರಿಸಿ ಪೋಷಿಸು ಬೇಗನೆ ದಾಸಯ್ಯ ಅ.ಪ ಬಡತನಗಳು ಎನ್ನ ದಾಸಯ್ಯ ಇನ್ನು ಕಡೆತನಕಳಿಯಲೋ ದಾಸಯ್ಯ ಗಡಕಡಿ ಜಡಭವದೆಡರು ತೊಡರುಗಳು ಕೆಡದಪದವಿ ನೀಡು ದಾಸಯ್ಯ 1 ನುಡಿಯಂತೆ ನಡೆಕೊಡು ದಾಸಯ್ಯೆನ್ನ ಒಡಲ ಜಡರುತೊಳಿ ದಾಸಯ್ಯ ಕಡಿದು ಹಾಕಲು ಎನ್ನ ಪಿಡಿದು ನಿನ್ನಡಿಭಕ್ತಿ ಬಿಡದ ಮನವು ಕೊಡು ದಾಸಯ್ಯ 2 ಸುಂದರ ಶ್ರೀರಾಮ ದಾಸಯ್ಯ ಎನ್ನ ತಂದೆ ತಾಯಿ ನೀನೆ ದಾಸಯ್ಯ ಕುಂದುವ ಜಗದೊಳು ಬಂಧನಪಡಿಸದೆ ಕುಂದದ ಸುಖ ನೀಡು ದಾಸಯ್ಯ 3
--------------
ರಾಮದಾಸರು
ಹಂಚು ಬಲ್ಲುದೆ ಹಲ್ಲ ತೆಗೆದರಪಕಾರವನುಮಿಂಚುಳ್ಳ ಕಂಚು - ಕನ್ನಡಿಯಲ್ಲದೆ ಪ.ಕಳ್ಳ ಬಲ್ಲನೆ ತನ್ನ ಕರುಣದುಪಕಾರವನು ?ಕೊಳ್ಳಿ ಬಲ್ಲುದೆ ತನ್ನ ಮನೆಯೆಂಬುದ ?ಸುಳ್ಳಿ ಬಲ್ಲನೆ ಗ್ರಾಮದೊಳಗಣಾ ಸುದ್ದಿಯನು ?ಬಳ್ಳಿಬಲೆ ಬಲ್ಲುದೇ ತನ್ನ ವನವೆಂಬುದನು ? 1ಬಾಳಬಲ್ಲುದೆ ತಾನು ಮೇಲೊಗೆವ ಫಲಗಳನು ?ಸೂಳೆ ಬಲ್ಲುಳೆ ಮನೆಯ ಬಡತನಗಳ ?ಖೂಳ ಬಲ್ಲನೆ ಜಾಣರೊಳಗೊಂದು ಸವಿನುಡಿಯ ?ಕೇಳಬಲ್ಲನೆ ಕಿವುಡ ಏಕಾಂತವ ? 2ಯೋಗಿ ಬಲ್ಲನೆ ಭೋಗದೊಳಗಣಾ ಸುದ್ದಿಯನು ?ಭೋಗಿ ಬಲ್ಲನೆ ಕೆಲಸ - ಉದ್ಯೋಗವ ?ಕಾಗೆಬಲ್ಲುದೆ ಕೋಗಿಲಂತೆ ಸ್ವರಗೈವುದನು ?ಗೂಗೆ ಬಲ್ಲುದೆ ಹಗಲ ಹರಿದಾಟವ ? 3ಕೋಣ ಬಲ್ಲುದೆ ಕುದುರೆಯಂತೆ ವೈಹಾಳಿಯನು ?ಕಾಣಬಲ್ಲನೆ ಕುರುಡ ಕನ್ನಡಿಯನು ?ದೀನವತ್ಸಲ ನಮ್ಮ ಪುರಂದರವಿಠಲನನುಕಾಣಬಲ್ಲನೆ ಜಾÕನವಿಲ್ಲದವನು ? 4
--------------
ಪುರಂದರದಾಸರು