ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೋಜಿಗದಲಿ ಜೀವಿಸುವರು ಸುಜನರು ಪ ಈ ಜಗದಲಿ ದುಷ್ಟ ಗೋಜಿಗೆ ಸಿಲುಕದೆ ಅ.ಪ ಪರರ ವಿಭವಗಳಿಗೆ ಕರಗಲರಿಯರಿವರು ಕೊರೆಯುವ ಬಡತನಕುರಿಯಲರಿಯರು ಹರಿ ಕರುಣದಿ ತಮಗೆ ಸಿರಿಯು ಬಂದೊದಗಲು ಪರಿಪರಿ ವಿಧದಲಿ ಮೆರೆಯದೆ ದೈನ್ಯದಿ 1 ಕೆಡುಕುತನಗಳನು ಅರಿಯರು ಈ ಜನ ಬಡವರ ಸೌಖ್ಯಕೆ ದುಡಿವರು ಮುದದಲಿ ಕಡುದುರುಳರು ನಿಂದೆ ನುಡಿಗಳಾಡುವರೆಂದು ದುಡುಕದೆ ಅವರಲಿ ಕ್ಷಮೆಯ ತೋರುತ ಸದಾ 2 ಪರರಿಗುಪಕೃತಿಯಲರಿಯರು ಮಿತಿಯನು ಪರರಿಗುಪಕೃತಿಗೆ ಜರಿಯರು ಮತಿಯನು ಶರಣ ಪ್ರಸನ್ನನ ಕರುಣವ ಪೊಂದಲು ವರನೀತಿಗಳಲಿ ನಿರತರಾಗುತ ಸದಾ 3
--------------
ವಿದ್ಯಾಪ್ರಸನ್ನತೀರ್ಥರು