ಆವಭೂತ ಬಡಕೊಂಡಿತೆಲೊ ನಿನಗೆ
ದೇವ ಕೇಶವನಂಘ್ರಿಧ್ಯಾಸವೆ ಮರೆದಿ ಪ
ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ
ಅತಿ ವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ
ಅತಿ ಸಿರಿಯಭೂತ ನಿನ್ನ ಮತಿಗೆಡಿಸಿತೇನೆಲೊ
ರತಿಪತಿಪಿತನಂಘ್ರಿಸ್ತುತಿಯನೆ ಮರೆತಿ 1
ಸೂಳೆಯರ ಗಾಳ್ಯೆಂಬ ಹಾಳುಬವ್ವ ತಾಕಿತೇ
ಕೀಳು ಸಂಸಾರದ ಮಹ ಗೋಳು ಭೂತ್ಹಿಡೀತೇ
ಸಾಲಿಗರ ಭಯಭೂತ ನಾಲಿಗೆಯ ಸೆಳೆಯಿತೇ
ನೀಲಶಾಮನ ಭಜನಫಲವೆ ಮರೆತೆಲ್ಲೊ 2
ಪೋದವಯ ಪೋಯಿತು ಆದದ್ದಾಗ್ಹೋಯಿತು
ಪಾದದಾಸರಕೂಡಿ ಶೋಧಮಾಡಿನ್ನು
ಭೂಧವ ಶ್ರೀರಾಮನ ಪಾದವನು ನಂಬಿ ಭವ
ಬಾಧೆ ಗೆಲಿದಿನ್ನು ಮುಕ್ತಿ ಹಾದಿಯ ಕಾಣೊ 3