ಛೀ ಯಾತರ ಜನ್ಮಾ |
ನಾಯಿಗಿಂದತ್ತಾಧಮ ಪ
ಛೀ ಯಾತರ ಜನ್ಮಾ
ನಾಯಿ ಹಿಂದತ್ತಾಧಮ
ಬಾಯಿ ಬಡಕನಾಗಿ
ಮಯ್ಯ ಮರೆವರೇ ನಿಮ್ಮಾ ಅ.ಪ
ಸಾಧುರಾನುಸರಿಸಿ |
ಬೋಧನಾಮೃತ ಸೇವಿಸಿ |
ಹಾದಿವಿಡಿದು ಗತಿ ಸಾಧಿಸಿ |
ಘಾಸಿ 1
ಬುದ್ಧಿ ತನಗ ಇಲ್ಲಾ |
ತಿದ್ದಿದರ ಕೇಳಲಿಲ್ಲಾ |
ಇದ್ದೆರಡಾದಿನದೊಳು |
ಸದ್ಯ ಸೌಖ್ಯ ಕಳೆದೆಲ್ಲಾ | 2
ಕಲ್ಲು ಕಟೆಯ ಬಹುದು |
ಬಿಲ್ಲು ಮಣಿಸಬಹುದು |
ನಿಲ್ಲದೇ ವನಕಿ ತುಂಡಾ |
ಸಲ್ಲದಂತೆ ನೀನಾಗುದು 3
ಮರಹುಟ್ಟಿ ಮರ ಬಿದ್ದಾ |
ತೆರನಾದೋ ಅಪ್ರಬುದ್ಧಾ |
ತಿರುಗಿ ನೋಡಿನ್ನಾರೆ |
ಚ್ಚರಿತು ನೀ ಮದದಿಂದ 4
ಗುರು ಮಹೀಪತಿಜನಾ
ಧರಿಸಿರೋ ಸದ್ವಚನಾ
ಸರಿಕರ ಕಂಡು ಹ್ಯಾವಾ
ವರಿಸದೆ ಇಹುದೇನಾ 5